ಮಹಾರಾಷ್ಟ್ರ ಹಾಗೂ ರಾಜಸ್ಥಾನಗಳಲ್ಲಿಯೂ ಇದೀಗ ಉಚಿತ ಕೊರೋನ ಲಸಿಕೆ ನೀಡಲು ಅಲ್ಲಿನ ಸರ್ಕಾರಗಳು ನಿರ್ಧರಿಸಿವೆ. 18-45 ವರ್ಷದೊಳಗಿನವರಿಗೂ ಲಸಿಕೆ ನೀಡುವ ಅಭಿಯಾನ ಮೇ 1ರಿಂದ ಆರಂಭವಾಗಲಿದೆ.

ಮುಂಬೈ/ಜೈಪುರ (ಏ.26): 18 ವರ್ಷ ಮೇಲ್ಪಟ್ಟವರಿಗೂ ಉಚಿತವಾಗಿ ಕೊರೋನಾ ವೈರಸ್‌ ಲಸಿಕೆ ನೀಡುವುದಾಗಿ ಮಹಾರಾಷ್ಟ್ರ ಮತ್ತು ರಾಜಸ್ಥಾನ ಸರ್ಕಾರಗಳು ಭಾನುವಾರ ಘೋಷಿಸಿವೆ. 

ಈಗಾಗಲೇ ಉತ್ತರ ಪ್ರದೇಶ, ಅಸ್ಸಾಂ, ಬಿಹಾರ, ಮಧ್ಯಪ್ರದೇಶ, ಸಿಕ್ಕಿಂ ಮತ್ತಿತರ ರಾಜ್ಯಗಳು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿವೆ. 

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...

18-45 ವರ್ಷದೊಳಗಿನವರಿಗೂ ಲಸಿಕೆ ನೀಡುವ ಅಭಿಯಾನ ಮೇ 1ರಿಂದ ಆರಂಭವಾಗಲಿದೆ.

18 ವರ್ಷ ಮೇಲ್ಪಟ್ಟವರು ಲಸಿಕೆ ನೋಂದಣಿ ಮಾಡಿಕೊಳ್ಳುವುದು ಹೇಗೆ? ಯಾವಾಗಿನಿಂದ? ...

ಇಡೀ ದೇಶದಲ್ಲಿ ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕಾ ಪ್ರಕ್ರಿಯೆ ಆರಂಭವಾಗಲಿದೆ. ಹಲವು ರಾಜ್ಯಗಳು ಈಗಾಗಲೇ ಉಚಿತಾ ಲಸಿಕೆ ನೀಡಲು ನಿರ್ಧರಿಸಿವೆ. 45 ವರ್ಷ ವಯಸ್ಸಿನ ಮೇಲ್ಪಟ್ಟವರಿಗೆ ಈಗಾಗಲೇ ಲಸಿಕೆ ಹಾಕಲಾಗಿದ್ದು, ಮಹಾಮಾರಿ ವಿರುದ್ಧ ಹೋರಾಟ ಮುಂದುವರಿದಿದೆ. 

ದೇಶದಲ್ಲಿ ಲಕ್ಷ ಲಕ್ಷ ಪ್ರಕರಣಗಳು ದಿನದಿನವೂ ವರದಿಯಾಗುತ್ತಿದ್ದು, ಆತಂಕವನ್ನೇ ತಂದೊಡ್ಡಿದೆ.