ನವದೆಹಲಿ (ಅ. 30): ದೆಹಲಿಯಲ್ಲಿ ಮಂಗಳವಾರದಿಂದ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಲಾಗಿದೆ. ಈ ಯೋಜನೆ ಪ್ರಕಾರ ಬಸ್ ಕಂಡಕ್ಟರ್ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕಾಗಿ 10 ರೂ ಮುಖ ಬೆಲೆಯ ಟಿಕೆಟ್ ವಿತರಿಸಲಿದ್ದಾರೆ.

ಕೂಡಂಕುಳಂ ಅಣು ವಿದ್ಯುತ್ ಘಟಕದ ಮೇಲೆ ಸೈಬರ್ ದಾಳಿ ವದಂತಿ, ಆತಂಕ

ಇದರ ಹಣವನ್ನು ಸರ್ಕಾರ ದೆಹಲಿ ಸಾರಿಗೆ ಇಲಾಖೆಗೆ ಮರು ಪಾವತಿ ಮಾಡಲಿದೆ.ಯೋಜನೆ ಉದ್ಘಾಟಿಸಿಮಾತನಾಡಿದ ಕೇಜ್ರಿವಾಲ್, ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಹಿರಿಯ ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗುವುದು ಎಂದರು. ಸಾರಿ ಗೆ ಸಂಸ್ಥೆ ಬಳಿಯ 5,500 ಬಸ್‌ನಲ್ಲಿ ಮಹಿಳೆಯರು ಉಚಿತ ಪ್ರಯಾಣಿಸಬಹುದಾಗಿದೆ.