4 ವರ್ಷದ ಬಾಲಕನೊಬ್ಬ ಆಟವಾಡುತ್ತಾ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿ ಸಿಲುಕಿದ್ದಾನೆ.ಮಗುವನ್ನು ಎತ್ತಿಕೊಂಡು ಆಸ್ಪತ್ರೆ ಬಂದ ತಾಯಿಗೆ ಅಗ್ನಿಶಾಮಕ ದಳ, ರಕ್ಷಣಾ ದಳಗಳು ನರೆವು ನೀಡಿ ಯಶಸ್ವಿಯಾಗಿ ಪಾತ್ರೆ ತೆಗೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ತಿರುನೇಲ್ವಲಿ(ಆ.03) ಮಕ್ಕಳು ಆಟವಾಡುತ್ತಾ ಗ್ರಿಲ್‌ನೊಳಗಿನಿಂದ ಸಾಗಲು ಪ್ರಯತ್ನಿಸುವುದು, ಪಾತ್ರೆಯೊಳಗೆ ತಲೆಹಾಕಿ ಸಂಕಷ್ಟ ಸಿಲುಕಿದ ಹಲವು ಘಟನೆಗಳು ನಡೆದಿದೆ. ಕೆಲವು ಗಂಭೀರ ಅಪಾಯವನ್ನೂ ತಂದೊಡ್ಡಿದೆ. ಇದೀಗ ತಮಿಳುನಾಡಿನ ತಿರುನೇಲ್ವಲಿಯಲ್ಲಿ 4 ವರ್ಷದ ಬಾಲಕನೊಬ್ಬ ಆಟವಾಡುತ್ತಾ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿದ್ದಾನೆ. ಬಳಿಕ ಪಾತ್ರೆಯಿಂದ ತಲೆ ಹೊರತೆಗೆಯಲು ಸಾಧ್ಯವಾಗಿಲ್ಲ. ಮಗುವಿನ ಚೀರಾಟ ನೋಡಿದ ತಾಯಿ ಗಾಬರಿಗೊಂಡಿದ್ದಾರೆ. ಪಾತ್ರೆಯನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಬಳಿಕ ಮಗುವನ್ನು ಎತ್ತಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆಸ್ಪತ್ರೆಯಲ್ಲಿ ವೈದ್ಯರು ಪರಿಶೀಲಿಸಿ ಅಗ್ನಿಶಾಮಕ ದಳ ಹಾಗೂ ರಕ್ಷಣಾ ದಳಗಳನ್ನು ಕರೆಯಿಸಿ ಯಶಸ್ವಿಯಾಗಿ ಪಾತ್ರೆ ತೆಗೆಯಲಾಗಿದೆ. ಆದರೆ ಈ ಕಾರ್ಯಾಚರಣೆ ವೇಳೆ ಅಡ್ಡಿಯಾಗದಿರಲು ಪೊಲೀಸರು ಮಗುವಿನ ಕೈಗೆ ಮೊಬೈಲ್ ನೀಡಿ ಕೂರಿಸಿದ್ದರು. ಈ ವಿಡಿಯೋ ವೈರಲ್ ಆಗಿದೆ. 

ಧಮಂತಲಯೂರು ಗ್ರಾಮದ ಸಿ ಮೈಕೆಲ್ ರಾಜ್ ಅವರ ಪುತ್ರ ನಾಲ್ಕು ವರ್ಷ ಕ್ಸೇವಿಯರ್ ಕಳೆದ ರಾತ್ರಿ ಆಟವಾಡುತ್ತಿದ್ದ. ಕೆಲ ಪಾತ್ರೆಗಳನ್ನು ಇಟ್ಟು ಆಟದಲ್ಲಿ ಮಗ್ನನಾಗಿದ್ದ. ಮಕ್ಕಳಾಟಿಕೆಗಳಲ್ಲಿ ಆಟವಾಡುತ್ತಿದ್ದ ಕ್ಸೇವಿಯರ್ ಅಡುಕೋಣೆಯಿಂದ ಕೆಲ ಪಾತ್ರೆಗಳನ್ನು ತಂದಿದ್ದ. ಆಟವಾಡುತ್ತ ಸ್ಟೀಲ್ ಪಾತ್ರೆಯೊಳಗೆ ತಲೆ ಹಾಕಿದ್ದಾನೆ. ಕೆಲ ಹೊತ್ತು ಹಾಗೇ ಆಟವಾಡಿದ್ದಾನೆ. ಬಳಿಕ ಪಾತ್ರೆ ತೆಗೆಯಲು ಪ್ರಯತ್ನಿಸಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಗಾಬರಿಗೊಂಡ ಬಾಲಕ ಚೀರಾಡಲು ಆರಂಭಿಸಿದ್ದಾನೆ.

ಪ್ಲಾಸ್ಟಿಕ್‌ ಡಬ್ಬಿಯೊಳಗೆ ತಲೆ ಸಿಕ್ಕಿಸಿಕೊಂಡು ಒದ್ದಾಡುತ್ತಿದ್ದ ಚಿರತೆ ಮರಿಯ ರಕ್ಷಣೆ

ಓಡೋಡಿ ಬಂದ ಪೋಷಕರು ಬಾಲಕನ ಎತ್ತಿ ಪಾತ್ರೆಯನ್ನು ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಈ ವೇಳೆ ಸ್ಛಳೀಯರು ಆಗಮಿಸಿ ಪಾತ್ರೆಯನ್ನು ತೆಗೆಯುವ ಸಾಹಸ ಮಾಡಿದ್ದಾರೆ. ಇತ್ತ ಮಗು ಕೂಡ ಗಾಬರಿಗೊಂಡಿದೆ. ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ಮಗುವಿಗೆ ನೋವಾಗದಂತೆ ಪಾತ್ರೆ ತೆಗೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಬೇರೆ ದಾರಿ ಕಾಣದ ಪೋಷಕರು ನೇರವಾಗಿ ತಿರುನೇಲ್ವಲಿ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆ ತಂದಿದ್ದಾರೆ.

Scroll to load tweet…

ಬಾಲನಕ ಪರೀಶೀಲಿಸಿದ ವೈದ್ಯರು, ತಕ್ಷವೇ ಹತ್ತಿರದಲ್ಲೇ ಇರುವ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಪೊಲೀಸ್ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಗೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಪೊಲೀಸ್ ದಳಗಳು, ಪಾತ್ರೆ ತುಂಡರಿಸುವ ಸಲಕರೆಗಳನ್ನು ತಂದಿದ್ದಾರೆ.ಗಾಬರಿಗೊಂಡಿದ್ದ ಬಾಲಕನ ಸಮಾಧಾನಿಸಲು ಪೊಲೀಸರು ಮೊಬೈಲ್‌ನಲ್ಲಿ ವಿಡಿಯೋ ಹಾಕಿ ಬಾಲಕನ ಕೈಗೆ ಕೊಟ್ಟಿದ್ದಾರೆ. ಬಳಿಕ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

40 ಚೂಯಿಂಗ್ ಗಮ್ ನುಂಗಿದ ಐದು ವರ್ಷದ ಬಾಲಕ, ಸರ್ಜರಿ ಮಾಡಿದ ವೈದ್ಯರೇ ಬೆಚ್ಚಿಬಿದ್ರು!

ಸಲಕರಣೆಗಳಿಂದ ಬಾಲಕನಿಗೆ ಅಪಾಯವಾಗದಂತೆ ಪಾತ್ರೆಯನ್ನು ಕತ್ತರಿಸಿದ್ದಾರೆ. ಈ ಮೂಲಕ ಬಾಲಕನ ತಲೆಯಲ್ಲಿ ಸಿಲುಕಿಕೊಂಡಿದ್ದ ಸ್ಟೀಲ್ ಪಾತ್ರೆಯನ್ನು ಯಶಸ್ವಿಯಾಗಿ ತೆಗೆದಿದ್ದಾರೆ. ಬಳಿಕ ಮಾತನಾಡಿದ ಅಗ್ನಿಶಾಮಕ ದಳ ಸಿಬ್ಬಂದಿ, ಪಾತ್ರೆ ತುಂಡರಿಸುವ ವೇಳೆ ಮಗು ಅತ್ತ ಇತ್ತ ತಲೆ ಆಡಿಸಿದರೆ ಅಪಾಯ ಹೆಚ್ಚು. ಕಿವಿ, ಮೂಗು, ಕಣ್ಣಿನ ಭಾಗಕ್ಕೆ ಹೆಚ್ಚು ಅಪಾಯಗಳಾಗಲಿದೆ. ಹೀಗಾಗಿ ಮೊಬೈಲ್ ನೀಡಿ ಕಾರ್ಯಾಚರಣೆ ಮಾಡಿದ್ದೇವೆ. ಮೊಬೈಲ್‌ನಿಂದ ಮಗು, ಸ್ಕ್ರೀನ್‌ನನ್ನೇ ದಿಟ್ಟಿಸಿ ನೋಡಿದ ಕಾರಣ ಕಾರ್ಯಾಚರಣೆ ಅಪಾಯವಿಲ್ಲದೆ ಸಾಗಿದೆ ಎಂದು ಅಗ್ನಿಶಾಮಕ ದಳ ಸಿಬ್ಬಂದಿ ಹೇಳಿದ್ದಾರೆ.