* ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್‌ ಸಿಂಗ್ ಅನಾರೋಗ್ಯ* ಕಲ್ಯಾಣ್‌ ಸಿಂಗ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದ ಆಸ್ಪತ್ರೆ* ಜೀವ ರಕ್ಷಕಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ

ಲಖನೌ(ಜು.22): ಅನಾರೋಗ್ಯದಿಂದ ಬಳಲುತ್ತಿರುವ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್‌ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರನ್ನು ಜೀವ ರಕ್ಷಕಾ ವ್ಯವಸ್ಥೆಯಲ್ಲಿ ಇರಿಸಲಾಗಿದೆ ಎಂದು ಸಂಜಯ್‌ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಕಲ್ಯಾಣ್‌ ಸಿಂಗ್‌ (89) ಅವರನ್ನು ಜುಲೈ 4ರಂದು ಅನಾರೋಗ್ಯದ ಕಾರಣದಿಂದ ರಾಮಮನೋಹರ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೇರಿಸಲಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಮಂಗಳವಾರ ಸಾಯಂಕಾಲ ಸಂಜಯ್‌ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲು ಮಾಡಲಾಯಿತು.

ನೀತಿ ಸಂಹಿತೆ ಕೇಸಲ್ಲಿ ಗೌರ್ನರ್‌ಗೆ ಸಂಕಷ್ಟ

ಕೊರೋನಾ ಮಣಿಸಿದ ಕಲ್ಯಾಣ್ ಸಿಂಗ್

ಕಳೆದ ಸೆಪ್ಟೆಂಬರ್ 7ರಂದು ಕಲ್ಯಾಣ್‌ ಸಿಂಗ್‌ರವರಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದಾದ ಬಳಿಕ ಲಕ್ನೋವಿನ ಆಯುರ್ವಿಜ್ಞಾನ ಸಂಸ್ಥೆಗೆ ಅವರನ್ನು ದಾಖಲಿಸಲಾಗಿತ್ತು. ಸುಮಾರು ಒಂದು ತಿಂಗಳ ಚಿಕಿತ್ಸೆ ಬಳಿಕ ಅಕ್ಟೋಬರ್‌ನಲ್ಲಿ ಅವರು ಡಿಸ್ಚಾರ್ಜ್ ಆಗಿದ್ದರು. ಬಿಜೆಪಿಯ ಪ್ರಮುಖ ನಾಯಕರಲ್ಲಿ ಗುರುತಿಸಿಕೊಂಡಿರುವ ಕಲ್ಯಾಣ್‌ ಸಿಂಗ್‌ರವರು ಯುಪಿಯ ಮಾಜಿ ಸಿಎಂ ಮಾತ್ರವಲ್ಲ, ರಾಜಸ್ಥಾನದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.