Asianet Suvarna News Asianet Suvarna News

Breaking: ಮಾಜಿ ಕೆಂದ್ರ ಸಚಿವ ಜಸ್ವಂತ್‌ ಸಿಂಗ್‌ ಸೊಸೆ ರಸ್ತೆ ಅಪಘಾತದಲ್ಲಿ ದುರ್ಮರಣ!

ಬಿಜೆಪಿ ನಾಯಕರಾಗಿದ್ದ ಮಾಜಿ ಕೇಂದ್ರ ಸಚಿವ ದಿವಂಗತ ಜಸ್ವಂತ್‌ ಸಿಂಗ್‌ ಅವರ ಸೊಸೆ ಹಾಗೂ ಮಾಜಿ ಸಂಸದ ಮಾನವೇಂದ್ರ ಸಿಂಗ್‌ ಅವರ ಪತ್ನಿ ಚಿತ್ರಾ ಸಿಂಗ್‌ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವು ಕಂಡಿದ್ದಾರೆ.
 

Former Union Minister Jaswant Singh daughter in law Chitra Singh dies in a road accident in Alwar san
Author
First Published Jan 30, 2024, 6:54 PM IST

ನವದೆಹಲಿ (ಜ.30): ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯ ನೌಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇದರಲ್ಲಿ ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರ ಸೊಸೆ ಹಾಗೂ ಮಾಜಿ ಸಂಸದ ಮಾನವೇಂದ್ರ ಸಿಂಗ್ ಅವರ ಪತ್ನಿ ಚಿತ್ರಾ ಸಿಂಗ್ ಸಾವನ್ನಪ್ಪಿದ್ದರೆ, ಮಾನವೇಂದ್ರ ಸಿಂಗ್ ಮತ್ತು ಅವರ ಮಗ ಹಮೀರ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರೂ ಅಲ್ವಾರ್‌ನ ಸೋಲಂಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದಲ್ಲಿ ಮಾನವೇಂದ್ರ ಸಿಂಗ್ ಅವರ ಕಾರು ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಬರೋಡಮೇವ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಚಿಕಿತ್ಸೆಗಾಗಿ ಅವರನ್ನು ಅಲ್ವಾರ್‌ಗೆ ಕಳುಹಿಸಲಾಗಿದೆ. ಘಟನೆಯ ಸಮಯದಲ್ಲಿ ಮಾನವೇಂದ್ರ ಸಿಂಗ್ ಕಾರನ್ನು ಓಡಿಸುತ್ತಿದ್ದರು ಮತ್ತು ಅವರ ಪತ್ನಿ ಚಿತ್ರಾ ಸಿಂಗ್ ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದರು. ಮಾನವೇಂದ್ರ ಅವರ ಮಗ ಹಮೀರ್ ಸಿಂಗ್ ಮತ್ತು ಚಾಲಕ ಹಿಂದಿನ ಸೀಟಿನಲ್ಲಿ ಕುಳಿತಿದ್ದರು.

ಬಾರ್ಮರ್ ಮಾಜಿ ಸಂಸದ ಮಾನವೇಂದ್ರ ಸಿಂಗ್ ಅವರು ತಮ್ಮ ಪತ್ನಿ ಚಿತ್ರಾ ಮತ್ತು ಮಗ ಹಮೀರ್ ಸಿಂಗ್ ಅವರೊಂದಿಗೆ ದೆಹಲಿಯಿಂದ ಜೈಪುರ ಕಡೆಗೆ ಹೋಗುತ್ತಿದ್ದರು. ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಪಾಯಿಂಟ್ 82.8 ಕಿಮೀ ರಸ್ಗನ್ ಮತ್ತು ಖುಷ್ಪುರಿ ನಡುವೆ, ವಾಹನವು ಇದ್ದಕ್ಕಿದ್ದಂತೆ ಬ್ಯಾಲೆನ್ಸ್ ಕಳೆದುಕೊಂಡು ಗೋಡೆಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮಾನವೇಂದ್ರ ಸಿಂಗ್ ಅವರ ಪತ್ನಿ ಚಿತ್ರಾ ಸಿಂಗ್ ಸಾವನ್ನಪ್ಪಿದ್ದಾರೆ. ಮಾನವೇಂದ್ರ ಸಿಂಗ್ ಮತ್ತು ಅವರ ಪುತ್ರನ ಸ್ಥಿತಿ ಚಿಂತಾಜನಕವಾಗಿದೆ. ತಕ್ಷಣ ಇಬ್ಬರನ್ನೂ ಅಲ್ವಾರ್‌ನ ಸೋಲಂಕಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಅಲ್ಲಿ ವೈದ್ಯರು ಚಿತ್ರಾ ಸಿಂಗ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ನಂತರ ಚಿತ್ರಾ ಸಿಂಗ್ ಅವರ ದೇಹವನ್ನು ರಾಜೀವ್ ಗಾಂಧಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮಾನವೇಂದ್ರ ಸಿಂಗ್, ಅವರ ಮಗ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

CDS Gen Rawat's helicopter crash: ಸಿಒಐ ತನಿಖೆಯಲ್ಲಿ ಬಹಿರಂಗವಾಯ್ತು ಅಪಘಾತದ ಕಾರಣ!

ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ಇನ್ನೂ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಎಸ್ಪಿ ತೇಜ್‌ಪಾಲ್‌ ಸಿಂಗ್ ಹೇಳಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳದಲ್ಲೇ ಗಾಯಾಳುಗಳನ್ನು ಅಲ್ವಾರ್‌ಗೆ ಕರೆತರಲಾಯಿತು. ಇಲ್ಲಿ ವೈದ್ಯರು ಚಿತ್ರಾ ಸಿಂಗ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇನ್ನು ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಕಾರು ಚಲಾಯಿಸುತ್ತಿದ್ದ ಚಾಲಕ ಬರೋಡಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆದರೆ ಅವರನ್ನೂ ಅಲ್ವಾರ್ ಗೆ ಶಿಫ್ಟ್ ಮಾಡಲಾಗುತ್ತಿದೆ. ವಿಷಯ ತಿಳಿದು ಬಿಜೆಪಿ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡರು ಆಸ್ಪತ್ರೆಗೆ ಆಗಮಿಸಿದ್ದಾರೆ.  

ರಾಜೆ ವಿರುದ್ಧ ಬಿಜೆಪಿ ನಾಯಕನ ಪುತ್ರನಿಗೆ ಕಾಂಗ್ರೆಸ್ ಟಿಕೆಟ್!

Follow Us:
Download App:
  • android
  • ios