ಗಂಗೆಯಲ್ಲಿ ಮಿಂದು ಪಾವನಳಾದ ಸನ್ನಿ ಲಿಯೋನ್: ಗಂಗೆ ಮಲಿನಗೊಂಡಳು ಎನ್ನೋದಾ ನೆಟ್ಟಿಗರು
ಬಾಲಿವುಡ್ ನಟಿ, ಮಾಜಿ ಅಡಲ್ಟ್ ಸಿನಿಮಾಗಳ ನಟಿ ಸನ್ನಿ ಲಿಯೋನ್ ಗಂಗೆಯಲ್ಲಿ ಮಿಂದು ಪಾವನಗೊಂಡಿದ್ದಾಳೆ. ಆದರೆ ಆಕೆಯ ಗಂಗಾಸ್ನಾನದಿಂದ ನದಿ ಮಲಿನಗೊಂಡಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.
ಬಾಲಿವುಡ್ ನಟಿ, ಮಾಜಿ ಅಡಲ್ಟ್ ಸಿನಿಮಾಗಳ ನಟಿ ಸನ್ನಿ ಲಿಯೋನ್ ಗಂಗೆಯಲ್ಲಿ ಮಿಂದು ಪಾವನಗೊಂಡಿದ್ದಾಳೆ. ಆದರೆ ಆಕೆಯ ಗಂಗಾಸ್ನಾನದಿಂದ ನದಿ ಮಲಿನಗೊಂಡಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ. ಸನ್ನಿ ಲಿಯೋನ್ ಗಂಗಾ ಸ್ನಾನ ಮಾಡಿ ಗಂಗಾರತಿ ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಿವುಡ್ ನಟಿ ಸನ್ನಿ ಲಿಯೋನ್ ಈಗ ತಮ್ಮ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಸುಂದರ ಜೀವನ ಮಾಡುತ್ತಿದ್ದು, ಹಳೆಯದೆಲ್ಲವನ್ನು ಮರೆತು ಸದ್ಗ್ರಹಿಣಿಯಾಗಿ ಬದುಕುತ್ತಿರುವ ಅವರ ಜೀವನ ಶೈಲಿಗೆ ಅನೇಕರು ಫಿದಾ ಆಗಿದ್ದಾರೆ. ಒಂದು ಅನಾಥ ಹೆಣ್ಣು ಮಗುವನ್ನು ದತ್ತು ಪಡೆದು ನಂತರ ಬಾಡಿಗೆ ತಾಯಿ ಮೂಲಕ ಇನ್ನೆರಡು ಅವಳಿ ಮಕ್ಕಳನ್ನು ಪಡೆದಿರುವ ಸನ್ನಿಗೆ ಅಭಿಮಾನಿಗಳ ದೊಡ್ಡ ಪಡೆಯೇ ಇದೆ. ಇತ್ತೀಚೆಗಷ್ಟೇ ಸನ್ನಿ ಅವರು ತಮ್ಮ ಮನೆ ಕೆಲಸದಾಕೆಯ ಪುತ್ರಿ ಕಾಣೆಯಾದಾಗ ಆಕೆಯನ್ನು ಹುಡುಕಿ ಕೊಟ್ಟವರಿಗೆ 50 ಸಾವಿರ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಅದೇ ರೀತಿ ಇದಕ್ಕೂ ಮೊದಲು ಕೇರಳದಲ್ಲಿ ಪ್ರವಾಹ ಕಾಣಿಸಿಕೊಂಡಾಗಲೂ ಕೋಟ್ಯಾಂತರ ರೂ ದಾನ ಮಾಡಿದ್ದರು. ಇವರ ಈ ದೊಡ್ಡತನ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಕಾರಣದಿಂದಲೇ ಸನ್ನಿಗೆ ಕೋಟ್ಯಾಂತರ ಜನ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅಂತಹ ಸನ್ನಿ ಈಗ ಗಂಗಾಯಾತ್ರೆ ಕೈಗೊಂಡಿದ್ದು, ಅದರ ವೀಡಿಯೋ ವೈರಲ್ ಆಗಿದೆ.
ದೀಪಾವಳಿಗೆ ಸನ್ನಿ ಹೊಸ ಫೋಟೋಶೂಟ್, 'ನನ್ನ ಮದುವೆಯಾಗ್ತೀಯಾ' ಅಂತನ್ನೋದಾ ಈ ವ್ಯಕ್ತಿ!
ಗಂಗಾಸ್ನಾನ ತುಂಗಾಪಾನ ಎಂಬ ಮಾತಿನಂತೆ ಭಾರತೀಯರಲ್ಲಿ ಗಂಗೆಯ ಬಗ್ಗೆ ಭಾರೀ ಪವಿತ್ರ ಭಾವನೆ ಇದೆ. ಜೀವನದಲ್ಲಿ ಒಮ್ಮೆಯಾದರೂ ಗಂಗಾಯಾತ್ರೆ ಮಾಡಿ ಗಂಗೆಯಲ್ಲಿ ಸ್ನಾನ ಮಾಡಿ ಮಾಡಿದ ಪಾಪಗಳನ್ನೆಲ್ಲಾ ಪರಿಹಾರ ಮಾಡಬೇಕು ಎಂಬುದು ಬಹುತೇಕ ಹಿಂದೂ ಸನಾತನ ಧರ್ಮದ ಜನರ ನಂಬಿಕೆ. ಹೀಗಾಗಿ ಬಹುತೇಕರು ಸಾಯುವ ಮೊದಲೊಮ್ಮೆ ಗಂಗೆಗೆ ಭೇಟಿ ನೀಡಲು ಬಯಸುತ್ತಾರೆ. ಗಂಗೆ ಸತ್ತವರಿಗೆ ಮುಕ್ತಿ ನೀಡುತ್ತಾಳೆ. ಬದುಕಿದವರಿಗೆ ಪಾಪ ವಿಮೋಚನೆ ಮಾಡುತ್ತಾಳೆ ಎಂಬ ನಂಬಿಕೆ ನಮ್ಮ ಭಾರತೀಯರಲ್ಲಿದೆ. ಅದೇ ರೀತಿ ಮಾಜಿ ಪೋರ್ನ್ ಸ್ಟಾರ್ ಬಾಲಿವುಡ್ ನಟಿ ಸನ್ನಿ ಲಿಯೋನ್ ಗಂಗೆಗೆ ಭೇಟಿ ನೀಡಿದ್ದು, ಅಲ್ಲಿ ಗಂಗಾರತಿ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎದೆ ಸೀಳು ತೋರಿಸಿದ Sunny Leone: ಮಾಜಿ ನೀಲಿ ತಾರೆಯ ನೀಲಿ ಡ್ರೆಸ್ ಪೋಟೋಸ್ ವೈರಲ್!
ಆದರೆ ವೀಡಿಯೋ ನೋಡಿದ ಜನ ಮಾತ್ರ ಕೆಲವರು ಸನ್ನಿ ಬೆಂಬಲಿಸಿ ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ಗಂಗೆ ಮಲಿನಗೊಂಡಳು ಎಂದು ಕಾಮೆಂಟ್ ಮಾಡಿದ್ದಾರೆ. ಎಲ್ಲರ ಪಾಪಗಳ ತೊಳೆದು ತೊಳೆದು ಗಂಗೆ ಮಲಿನಗೊಂಡಳು ಎಂದು ಕಾಮೆಂಟ್ ಮಾಡಿದ್ದಾರೆ. ಹೋ ಈಗ ಭಾರತದಲ್ಲಿ ಪೋರ್ನ್ ಸ್ಟಾರ್‌ಗಳು ಗಂಗಾರತಿ ಮಾಡಲು ಶುರು ಮಾಡಿದರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಅಯ್ಯೋ ರಾಮ ಗಂಗ ಪಾಪಿಗಳ ಪಾಪ ತೊಳೆದು ಗಂಗೆ ಮಲಿನಗೊಂಡಳು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಸನ್ನಿಯನ್ನು ಬೆಂಬಲಿಸಿದ್ದು, ಸನ್ನಿ ಪಕ್ಕಾ ಭಾರತೀಯ ನಾರಿ ಆಗಿ ಬದಲಾಗಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ.
ವೀಡಿಯೋದಲ್ಲಿ ಸನ್ನಿ ಅಭಿಷೇಕ್ ಸಿಂಗ್ ಅವರ ಜೊತೆ ಪಿಂಕ್ ಬಣ್ಣದ ಸಲ್ವಾರ್ ಸೂಟ್ ಧರಿಸಿ ತಲೆಗೆ ಶಾಲು ಹೊದ್ದು ಗಂಗಾರತಿ ಮಾಡಿದ್ದಾರೆ. ಅಲ್ಲದೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.