Asianet Suvarna News Asianet Suvarna News

ಡಾ. ಸಿಂಗ್ ಹುಟ್ಟುಹಬ್ಬ: 'ನಿಮ್ಮ ಪ್ರಾಮಾಣಿಕತೆ, ಶಿಸ್ತು ಹಾಗೂ ಸಮರ್ಪಣೆ ನಮಗೆ ಪ್ರೇರಣೆ!'

ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಹುಟ್ಟುಹಬ್ಬದ ಸಂಭ್ರಮ| ರಾಹುಲ್ ಗಾಂಧಿ, ದೇವೇಗೌಡರಿಂದ ಶುಭ ಹಾರೈಕೆ| ನಿಮ್ಮ ಪ್ರಾಮಾಣಿಕತೆ, ಶಿಸ್ತು ಹಾಗೂ ಸಮರ್ಪಣೆ ನಮಗೆ ಪ್ರೇರಣೆ!

Former PM Rahul Gandhi Wishes Dr Manmohan Singh on His 88th Birthday pod
Author
Bangalore, First Published Sep 26, 2020, 2:53 PM IST

ನವದೆಹಲಿ(ಸೆ.26): ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇಂದು ಅವರು ತಮ್ಮ 88ನೇ ಜನ್ಮ ಜನ್ಮದಿನವನ್ನಾಚರಿಸುತ್ತಿದ್ದಾರೆ.  ಮಾಜಿ ಪಿಎಂ ಎಚ್. ಡಿ. ದೇವೇಗೌಡ ಸೇರಿ ದೇಶದ ದಿಗ್ಗಜ ನಾಯಕರು ಡಾ. ಸಿಂಗ್‌ಗೆ ಶುಭ ಕೋರಿದ್ದಾರೆ.

ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ವಯನಾಡ್‌ನ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿ ಮನಮೋಹನ್ ಸಿಂಗ್‌ರಿಗೆ ಶುಭ ಹಾರೈಸಿದ್ದಾರೆ.  ಟ್ವೀಟ್ ಮಾಡಿರುವ ರಾಹುಲ್ ಗಾಂಧಿ 'ಭಾರತಕ್ಕೆ ಡಾ. ಮನಮೋಹನ್‌ ಸಿಂಗ್‌ರಂತಹ ಆಳವಾದ ಜ್ಞಾನವಿರುವ ಪ್ರಧಾನ ಮಂತ್ರಿಯ ಅನುಪಸ್ಥಿತಿ ಕಾಡುತ್ತಿದೆ. ಅವರ ಪ್ರಾಮಾಣಿಕತೆ, ಶಿಸ್ತು ಹಾಗೂ ಸಮರ್ಪಣಾ ಭಾವ ನಮಗೆಲ್ಲರಿಗೂ ಪ್ರೇರಣೆ. ಅವರಿಗೆ ಜನ್ಮ ದಿನದ ಹಾರ್ಧಿಕ ಶುಭಾಶಯಗಳು. ಅವರ ಮುಂದಿನ ವರ್ಷಗಳು ಸುಖಕರವಾಗಿರಲಿ #HappyBirthdayDrMMSingh' ಎಂದು ಬರೆದಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಶಶಿ ತರೂರ್, ಜಯವೀರ್ ಶೆರ್ಗೀಲ್, ರೋಹನ್ ಗುಪ್ತಾ ಸೇರಿ ಅನೇಕ ಮಂದಿ ಸೋಶಿಯಲ್‌ ಮೀಡಿಯಾ ಮೂಲಕ ಶುಭ ಹಾರೈಸಿದ್ದಾರೆ. ಮನಮೋಹನ್ ಸಿಂಗ್  2004 ರಿಂದ 2014 ರವರೆಗೆ ಭಾರತದ ಪಿಎಂ ಆಗಿದ್ದರು. ಅವರು ಭಾರತದ ವಿಭಜನೆಗೂ ಮುನ್ನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 1932 ರ ಸೆಪ್ಟೆಂಬರ್  26ರಂದು ಜನಿಸಿದ್ದರು.

ಡಾ. ಸಿಂಗ್ ಪಂಜಾಬ್ ಹಾಗೂ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಶಿಕ್ಷಣ ಪಡೆದಿದ್ದಾರೆ. ಆಕ್ಸ್‌ಫರ್ಡ್‌ ಯೂನಿವರ್ಸಿಟಿಯಿಂದ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಕೂಡಾ ಗಳಿಸಿದ್ದಾರೆ. ಅವರು ಪಂಜಾಬ್ ಯೂನಿವರ್ಸಿಟಿ ಮಾತ್ರವಲ್ಲದೇ ದಿಲ್ಇ ಸ್ಕೂಲ್ ಆಫ್ ಇಕಾನಾಮಿಕ್ಸ್ ಹಾಗೂ ದಿಲ್ಲಿ ಯೂನಿವರ್ಟಿಟಿಯಲ್ಲೂ ಕಲಿಸಿದ್ದಾರೆ. ಅಲ್ಲದೇ ಭಾರತದ ಯೋಜನಾ ಆಯೋಗದ ಮುಖ್ಯಸ್ಥರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 
 

Follow Us:
Download App:
  • android
  • ios