ಕೊರೋನಾ ಮಣಿಸಿದ ಮಾಜಿ ಪಿಎಂ ಮನಮೋಹನ್ ಸಿಂಗ್, ಏಮ್ಸ್‌ನಿಂದ ಡಿಸ್ಚಾರ್ಜ್!
ಕೊರೋನಾ ಸೋಂಕಿತರಾಗಿದ್ದ ಮಾಜಿ ಪಿಎಂ ಮನಮೋಹನ್ ಸಿಂಗ್| ಕೊರೋನಾ ಂನಿಸಿದ ಮಾಜಿ ಪಿಎಂ ಡಾ. ಸಿಂಗ್| ಎರಡು ಬಾರಿ ಪ್ರಧಾನಿ, ದೇಶದ ಹಿರಿಯ ಅರ್ಥ ಶಾಸ್ತ್ರಜ್ಞ
ನವದೆಹಲಿ(ಏ.29): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೊರೋನಾ ಮಹಾಮಾರಿಯನ್ನು ಮಣಿಸಿದ್ದು, ಗುರುವಾರದಂದು ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಏಪ್ರಿಲ್ 19 ಕೊರೋನಾ ಸೋಂಕು ತಗುಲಿದ್ದ ಹಿನ್ನೆಲೆ ಏಮ್ಸ್‌ನ ಟ್ರಾಮಾ ಸೆಂಟರ್‌ನಲ್ಲಿ ದಾಖಲಾಗಿದ್ದರು.
ಎರಡು ಬಾರಿ ಪ್ರಧಾನಿ, ದೇಶದ ಹಿರಿಯ ಅರ್ಥ ಶಾಸ್ತ್ರಜ್ಞ
ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದ ಡಾ. ಮನಮೋಹನ್ ಸಿಂಗ್ ಸತತ ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ್ದಾರೆ. ಇಷ್ಟೇ ಅಲ್ಲದೇ ದೇಶದ ಹಿರಿಯ ಅರ್ಥ ಶಾಸ್ತ್ರಜ್ಞರೂ ಆಗಿದ್ದರು.
"
ಕೊರೋನಾ ವೈರಸ್ ಹಾಗೂ ಲಸಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಮನ್‌ಮೋಹನ್ ಸಿಂಗ್ ಏ.18 ಪತ್ರ ಬರೆದಿದ್ದರು. ಕೊರೋನಾ ಲಸಿಕೆ, ವಿತರಣೆ ಕುರಿತು ಪಾರದರ್ಶಕತೆ ಬೇಕು ಎಂದು ಪತ್ರದಲ್ಲಿ ಹೇಳಿದ್ದರು. ಇನ್ನು ಲಸಿಕೆ ನೀಡುವಿಕೆ ಸಂಖ್ಯೆ ಕುರಿತು ಗಮನಹರಿಸಿದೆ ಶೇಕಡಾವಾರು ತಿಳಿಸಬೇಕು ಎಂದಿದ್ದರು. ಡಾ.ಸಿಂಗ್ ಪತ್ರಕ್ಕೆ ಆರೋಗ್ಯ ಸಚಿವ ಹರ್ಷವರ್ಧನ್ ತಿರುಗೇಟು ನೀಡಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona