ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಮನೋಹರ ಜೋಶಿ (85) ಅವರ ಸ್ಥಿತಿ ಗಂಭಿರವಾಗಿದೆ. ಮಿದುಳಿನ ರಕ್ತಸ್ರಾವದ ಕಾರಣ ಮಂಗಳವಾರ ಸಂಜೆ ಅವರನ್ನು ಪಿ.ಡಿ. ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭೆಯ ಮಾಜಿ ಸ್ಪೀಕರ್ ಮನೋಹರ ಜೋಶಿ (85) ಅವರ ಸ್ಥಿತಿ ಗಂಭಿರವಾಗಿದೆ. ಮಿದುಳಿನ ರಕ್ತಸ್ರಾವದ ಕಾರಣ ಮಂಗಳವಾರ ಸಂಜೆ ಅವರನ್ನು ಪಿ.ಡಿ. ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ಅವರ ಸ್ಥಿತಿ ವಿಷಮಿಸಿದ್ದು, ಕೋಮಾ ಅವಸ್ಥೆಗೆ ಜಾರಿದ್ದಾರೆ ಎಂದು ಅವರ ಪುತ್ರ ಉನ್ಮೇಶ್ ಜೋಶಿ ಹೇಳಿದ್ದಾರೆ.
ವೈದ್ಯರು ಕೂಡ ಹೇಳಿಕೆ ನೀಡಿ, ‘ಜೋಶಿ ಪ್ರಜ್ಞಾಹೀನರಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದಿದ್ದಾರೆ. ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಪತ್ಮಿ ರಶ್ಮಿ ಠಾಕ್ರೆ ಅವರು ಆಸ್ಪತ್ರೆಗೆ ಭೇಟಿ ನೀಡಿ ಜೋಶಿ ಆರೋಗ್ಯ ವಿಚಾರಿಸಿದರು. 1995ರಲ್ಲಿ ಜೋಶಿ ಅವರು ಬಿಜೆಪಿ-ಶಿವಸೇನೆ ಮೈತ್ರಿಕೂಟ ಅಧಿಕಾರಕ್ಕೆ ಬಂದಾಗ ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿದ್ದರು. ಅವರು ಶಿವಸೇನೆಯ ಮೊದಲ ಮುಖ್ಯಮಂತ್ರಿ ಎನ್ನಿಸಿಕೊಂಡಿದ್ದರು. 1966ರಲ್ಲಿ ಶಿವಸೇನೆ ಸ್ಥಾಪನೆ ಆದಾಗಿನಿಂದಲೇ ಪಕ್ಷದ ಸದಸ್ಯರಾಗಿರುವ ಅವರು ಮಹಾರಾಷ್ಟ್ರ ವಿಪಕ್ಷ ನಾಯಕರಾಗಿ, ಮುಂಬೈ ಮೇಯರ್ ಆಗಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಭಾರಿ ಕೈಗಾರಿಕಾ ಸಚಿವರಾಗಿ ಹಾಗೂ ಲೋಕಸಭೆ ಸ್ಪೀಕರ್ ಆಗಿ ಕೆಲಸ ಮಾಡಿದ್ದಾರೆ.
ಮಹಿಳೆಯರಿಗೆ ಶೇ.50 ಟಿಕೆಟ್ ದರ ಎಫೆಕ್ಟ್: ಮಹಾರಾಷ್ಟ್ರದಲ್ಲಿ ಕರ್ನಾಟಕ ಸಾರಿಗೆ ಬಸ್ ಖಾಲಿ ಖಾಲಿ..!