ಮಾಜಿ ಡಿಜಿಪಿಯನ್ನೇ ಮಣಿಸಿ ಬಿಹಾರ ಟಿಕೆಟ್ ಪಡೆದ ಮಾಜಿ ಕಾನ್‌ಸ್ಟೇಬಲ್!
ಟಿಕೆಟ್ ಗುದ್ದಾಟ | ಮಾಜಿ ಡಿಜಿಪಿಯನ್ನು ಮಣಿಸಿ ಟಿಕೆಟ್ ಪಡೆದ ಮಾಜಿ ಕಾನ್ಸ್‌ಟೇಬಲ್ | ಅಚ್ಚರಿಯ ಬೆಳವಣಿಗೆಯಲ್ಲಿ ಫೇಮಸ್ ಆದ್ರು ಮಾಜಿ ಕಾನ್ಸ್‌ಟೇಬಲ್
ಪಟ್ನಾ(ಅ.09): ಚುನಾವಣೆಗೆ ಸ್ಪರ್ಧಿಸಲು ಮಾಜಿ ಬಿಹಾರ ಪೊಲೀಸ್ ಗುಪ್ತೇಶ್ವರ್ ಪಾಂಡೆ ಕಳೆದ ತಿಂಗಳಷ್ಟೇ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಚುನಾವಣೆಗೆ ಸ್ಪರ್ಧಿಸೋ ಅವಕಾಶವೇ ಅವರಿಗೆ ಸಿಕ್ಕಿಲ್ಲ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಕ್ಸರ್ ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಪೊಲೀಸ್ ಮುಖ್ಯಸ್ಥರೊಬ್ಬರನ್ನು ಹಿಂದಿಕ್ಕಿ ಮಾಜಿ ಕಾನ್‌ಸ್ಟೇಬಲ್‌ವೊಬ್ಬರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಂಗ್ರೆಸ್ ಪ್ರಭಾವಿ ಲಿಂಗಾಯತ ನಾಯಕನಿಗೆ ಬಿಜೆಪಿ ಗಾಳ..!
ಗುಪ್ತೇಶ್ವರ್ ಅವರ ತವರು ಜಿಲ್ಲೆ ಬಕ್ಸಾರ್ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಿಂದ ಸ್ಪರ್ಧಿಸುವ ಬಯಕೆಯನ್ನು ಅವರು ಹೊಂದಿದ್ದರು.
ಬಿಹಾರ ಚುನಾವಣಾ ಕಣದಲ್ಲಿ ಬಿಗ್ ಟ್ವಿಸ್ಟ್, ಬಂಡೆದ್ದ ಚಿರಾಗ್‌ಗೆ ಮುಖಭಂಗ!
ಆದರೆ, ಸೀಟು ಹಂಚಿಕೆಯ ವೇಳೆ ಬಕ್ಸರ್ ಕ್ಷೇತ್ರ ಬಿಜೆಪಿ ಪಾಲಾಗಿದ್ದು, ಮಾಜಿ ಕಾನ್‌ಸ್ಟೇಬಲ್ ಪರಶುರಾಮ್ ಚತುರ್ವೇದಿಗೆ ಬಿಜೆಪಿ ಟಿಕೆಟ್ ನೀಡಿದೆ. ಟಿಕೆಟ್ ರೇಸ್‌ನಲ್ಲಿ ಡಿಜಿಪಿಯನ್ನೇ ಹೊರದಬ್ಬಿದ ಕಾರಣಕ್ಕೆ ಪರಶುರಾಮ್ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಚುನಾವಣೆಗೆ ಸಜ್ಜಾಗಿದ್ದ ನಾಯಕರಿಗೆ ಆಯೋಗದಿಂದ ಬಂತು ಸ್ಟ್ರಿಕ್ಟ್ ಆದೇಶ
ಡಿಜಿಪಿ ನನ್ನ ಹಿರಿಯ ಸಹೋದರನಂತೆ. ಅವರ ಬಗ್ಗೆ ಪ್ರೀತಿ ಇದೆ. ಅವರ ಪಾದವನ್ನೂ ಮುಟ್ಟಿ ಆಶಿರ್ವಾದ ಪಡೆಯುತ್ತೇನೆ ಎಂದು ಚತುರ್ವೇದಿ ಹೇಳಿದ್ದಾರೆ. ಹಾಗೆಯೇ ತಮ್ಮನ್ನು ಆಯ್ಕೆ ಮಾಡಿರುವ ಬಗ್ಗೆ ಬಿಜೆಪಿಗೆ ಥ್ಯಾಂಕ್ಸ್ ಹೇಳಿದ್ದಾರೆ.
ಗುಪ್ತೇಶ್ವರ್ ಪಾಂಡೆ ಸ್ವಯಂ ನಿವೃತ್ತಿ ಪಡೆದು ನಿತೀಶ್ ಕುಮಾರ್ ಅವರ ಪಕ್ಷಕ್ಕೆ ಸೇರಿದ್ದರು. ನಿನ್ನೆ ಪ್ರಕಟವಾದ ಜೆಡಿಯು 11 ಸ್ಪರ್ಧಿಗಳ ಲಿಸ್ಟ್‌ನಲ್ಲಿ ಗುಪ್ತೇಶ್ವರ್ ಹೆಸರು ಇರಲಿಲ್ಲ.
ಬಿಹಾರದಲ್ಲಿ ಅಕ್ಟೋಬರ್ 28ರಿಂದ ಚುನಾವಣೆ ನಡೆಯಲಿದೆ. ಒಟ್ಟು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಈ ಬಾರಿ ಕೊರೋನಾ ಕಾರಣದಿಂದಾಗಿ ಬೂತ್‌ಗಳ ಸಂಖ್ಯೆ ಹೆಚ್ಚಿಸಿ, ಮತಗಟ್ಟೆಯಲ್ಲಿ ಮತದಾರರ ಸಂಖ್ಯೆಗೆ ಮಿತಿ ಇಡಲಾಗಿದೆ.