Asianet Suvarna News Asianet Suvarna News

ಮೋದಿ ಆಡಳಿತಕ್ಕೆ ಆಸಿಸ್‌ ಮಾಜಿ ಪಿಎಂ ಟರ್ನ್‌ಬುಲ್‌ ಫುಲ್‌ ಮಾರ್ಕ್ಸ್‌

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಹತ್ತಕ್ಕೆ ಹತ್ತು ಸಂಪೂರ್ಣ ಅಂಕಗಳನ್ನು ಕೊಡುವುದಾಗಿ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮಾಲ್ಕಮ್‌ ಟರ್ನ್‌ಬುಲ್‌ ಹೇಳಿದ್ದಾರೆ.

Former Australian PM Malcolm Turnbull gives full marks to Modi administration akb
Author
First Published Feb 4, 2024, 9:12 AM IST

ಜೈಪುರ: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಗೆ ಹತ್ತಕ್ಕೆ ಹತ್ತು ಸಂಪೂರ್ಣ ಅಂಕಗಳನ್ನು ಕೊಡುವುದಾಗಿ ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮಾಲ್ಕಮ್‌ ಟರ್ನ್‌ಬುಲ್‌ ಹೇಳಿದ್ದಾರೆ.

ಜೈಪುರ ಸಾಹಿತ್ಯೋತ್ಸವದಲ್ಲಿ ಮಾತನಾಡಿದ ಅವರು, ‘ಭಾರತದ ಪ್ರಧಾನಿ ಮೋದಿ ಒಬ್ಬ ಸ್ಫೂರ್ತಿಯುತ ನಾಯಕನಾಗಿದ್ದು, ಆಡಳಿತದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತಿದ್ದಾರೆ. ಅವರ ಕಾರ್ಯವೈಖರಿಗೆ ನಾನು ಹತ್ತಕ್ಕೆ ಹತ್ತು ಸಂಪೂರ್ಣ ಅಂಕಗಳನ್ನು ಕೊಡಬಯಸುತ್ತೇನೆ. ಅವರು ಭಾರತದೊಳಗೆ ವಿವಾದಾತ್ಮಕ ನಡೆ ಅನುಸರಿಸಿರಬಹುದು. ಆದರೆ ಜಾಗತಿಕವಾಗಿ ಅವರೊಬ್ಬ ಕ್ರಾಂತಿಕಾರಿ ನಾಯಕ’ ಎಂದು ತಿಳಿಸಿದರು.

ಲಸಿಕಾ ತಯಾರಕರ ಜೊತೆ ಮೋದಿ ಮಾತುಕತೆ; ಪ್ರಧಾನಿ ಕೊಂಡಾಡಿದ ಆದರ್ ಪೂನಾವಲ್ಲ!

ಭಾರತದ ಮೆಲುಕು:

ಪ್ರಧಾನಿಯಾಗಿದ್ದ ವೇಳೆ 2017ರಲ್ಲಿ ಭಾರತದ ಪ್ರವಾಸ ಮಾಡಿದ್ದನ್ನು ಮೆಲುಕು ಹಾಕಿದ ಟರ್ನ್‌ಬುಲ್‌, ‘2017ರಲ್ಲಿ ನಾನು ಭಾರತಕ್ಕೆ ಬಂದಿದ್ದು, ನನ್ನ ಅವಿಸ್ಮರಣೀಯ ಕ್ಷಣ. ಈ ವೇಳೆ ಮೋದಿಯವರೊಂದಿಗೆ ಹಲವು ದ್ವಿಪಕ್ಷೀಯ ಒಪ್ಪಂದ ಮಾತುಕತೆ ನಡೆಸುವ ವೇಳೆ ತುಸು ಕಷ್ಟವಾಯಿತು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದು ತುಸು ತ್ರಾಸದಾಯಕ’ ಎಂದು ಉದ್ಯಮಿಯೂ ಆಗಿರುವ ಟರ್ನ್‌ಬುಲ್‌ ತಿಳಿಸಿದರು.

6ರಿಂದ 8 ದಶಕದಲ್ಲಿ ಸರ್ವವೂ ಡಿಜಿಟಲ್‌ಮಯ: ಅರ್ಧ ಶತಮಾನದಲ್ಲಾಗಬೇಕಿದ್ದನ್ನ ಅರ್ಧ ದಶಕಕ್ಕಿಳಿಸಿದ ಮೋದಿ 

ವಿಶ್ವದ ಅತಿದೊಡ್ಡ ಸಾಹಿತ್ಯ ಹಬ್ಬ ಎಂದು ಕರೆಸಿಕೊಳ್ಳುವ ಜೈಪುರ ಸಾಹಿತ್ಯೋತ್ಸವದ 17ನೇ ಸಂಚಿಕೆಗೆ ಫೆಬ್ರವರಿ 1 ರಂದು ಚಾಲನೆ ನೀಡಲಾಗಿತ್ತು. ಜೈಪುರದ ಹೋಟೆಲ್ ಕ್ಲಾಕ್ ಅಮೀರ್‌ನಲ್ಲಿ ಆಯೋಜಿಸಿರುವ ಈ ಸಾಹಿತ್ಯ ಸಮ್ಮೇಳನವನ್ನು ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ  ಉದ್ಘಾಟಿಸಿದ್ದರು. ಫೆ.5ರವರೆಗೆ 5 ದಿನಗಳ ಕಾಲ ಈ ಸಾಹಿತ್ಯೋತ್ಸವ ನಡೆಯಲಿದೆ. 16 ಭಾರತೀಯ ಭಾಷೆಗಳ ಹಾಗೂ 8 ಅಂತಾರಾಷ್ಟ್ರೀಯ ಭಾಷೆಗಳ ಲೇಖಕರು ಸಾಹಿತ್ಯೋತ್ಸವದಲ್ಲಿ ಭಾಗವಹಿಸುತ್ತಿದ್ದಾರೆ. ಸಾಹಿತ್ಯದ ಬಹುಮುಖ್ಯ ಪ್ರಶಸ್ತಿಗಳಾದ ಬೂಕರ್, ಅಂತಾರಾಷ್ಟ್ರೀಯ ಬೂಕರ್, ಪುಲಿಟ್ಜರ್, ಸಾಹಿತ್ಯ ಅಕಾಡೆಮಿ, ದಾದಾ ಸಾಹೇಬ್ ಫಾಲ್ಕೆ, ಡಿಎಸ್‌ಸಿ, ಜೆಸಿಬಿ ಮುಂತಾದ ಪ್ರಶಸ್ತಿ ವಿಜೇತರ ಜತೆಗೆ ಯುವ ಬರಹಗಾರರೂ ಭಾಗವಹಿಸುತ್ತಾರೆ. ಕಥೆ, ಕಾವ್ಯ, ಆತ್ಮಕತೆ, ಆಹಾರ, ಪುರಾಣ, ಕಾನೂನು, ರಾಜಕಾರಣ ಸೇರಿದಂತೆ ಐವತ್ತಕ್ಕೂ ಹೆಚ್ಚು ವಿಭಾಗಗಳಲ್ಲಿ ಗೋಷ್ಠಿಗಳು ನಡೆಯುತ್ತವೆ.
 

ಐರಿಶ್ ಕಾದಂಬರಿಕಾರ ಪೌಲ್ ಲಿಂಚ್, ಅರ್ಜೆಂಟೈನಾದ ಹರ್ನನ್ ಡಯಾಜ್, ಬ್ರಿಟಿಷ್ ಅಂಕಣಕಾರ ಬೆನೆಡಿಕ್ಟ್ ರಿಚರ್ಡ್ ಮ್ಯಾಕಿಂಟೈರ್, ಹಿರೋಶಿಮಾ ಬಾಂಬ್ ದಾಳಿಯ ಕುರಿತು ಬರೆದ ಅಮೆರಿಕಾದ ಲೇಖಕ ಕೈ ಬರ್ಡ್, ಇಂಗ್ಲೆಂಡಿನ ಲೇಖಕಿ ಕೆಥರೀನ್ ರಾಂಡೆಲ್-ಹೀಗೆ ಹಲವು ಪ್ರಶಸ್ತಿ ಪಡೆದ ಕಾದಂಬರಿಕಾರರು ಜೈಪುರದಲ್ಲಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಜೈಪುರ ಸಾಹಿತ್ಯೋತ್ಸವದ ಜತೆಜತೆಗೇ ನಡೆಯುವ ಜೈಪುರ್ ಬುಕ್ ಮಾರ್ಕ್‌ ಹನ್ನೊಂದನೇ ಸಂಚಿಕೆಯಲ್ಲಿ ಜಗತ್ತಿನ ಪ್ರಸಿದ್ಧ ಪ್ರಕಾಶಕರು, ಲಿಟರರಿ ಏಜೆಂಟರು, ಅನುವಾದಕರು, ಸಂಪಾದಕರು ಮತ್ತು ಲೇಖಕರು ಭಾಗವಹಿಸುತ್ತಿದ್ದಾರೆ. ಪುಸ್ತಕ ಮಾರಾಟದ ಕುರಿತು ವಿಶೇಷವಾದ ಸಂಕಿರಣ ಕೂಡ ನಡೆಯಲಿದೆ.

Follow Us:
Download App:
  • android
  • ios