Asianet Suvarna News Asianet Suvarna News

ಜನವರಿಯಲ್ಲಿ ಅಯೋಧ್ಯೆ ದೇಗುಲ ನಿರ್ಮಾಣ ಟ್ರಸ್ಟ್?

ಅಯೋಧ್ಯೆ ದೇಗುಲ ನಿರ್ಮಾಣಕ್ಕೆ ಜನವರಿಯಲ್ಲಿ ಟ್ರಸ್ಟ್‌ ಸ್ಥಾಪನೆ ಮಾಡುವ ಸಾಧ್ಯತೆ ಇದೆ | ಕೇಂದ್ರ ಸರ್ಕಾರದಿಂದ ಅಂತಿಮ ಹಂತದ ಸಿದ್ಧತೆ | ಅಯೋಧ್ಯೆ ಸಂತರಿಗೂ ಟ್ರಸ್ಟ್‌ನಲ್ಲಿ ಸ್ಥಾನ ಸಂಭವ

Formation of trust to build Ram Mandir in Ayodhya will be done by January
Author
Bengaluru, First Published Dec 20, 2019, 10:17 AM IST

ನವದೆಹಲಿ (ಡಿ. 20): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಸುಪ್ರೀಂಕೋರ್ಟ್‌ ಆದೇಶದಂತೆ ಕೇಂದ್ರ ಸರ್ಕಾರ ಜನವರಿಯಲ್ಲಿ ಟ್ರಸ್ಟ್‌ ಸ್ಥಾಪಿಸುವ ಸಾಧ್ಯತೆ ಇದೆ. ಈ ಸಂಬಂಧ ಸರ್ಕಾರ ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿದೆ ಎಂದು ಮೂಲಗಳು ತಿಳಿಸಿವೆ.

ಉದ್ದೇಶಿತ ಟ್ರಸ್ಟ್‌ ಕುರಿತಂತೆ ಅಯೋಧ್ಯೆಯಲ್ಲಿನ ಪ್ರಮುಖ ಸಂತರ ಜತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುತ್ತಿದೆ. ಆ ಸಂತರಿಗೂ ಟ್ರಸ್ಟ್‌ನಲ್ಲಿ ಹುದ್ದೆ ಕೊಡುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ನಾಲ್ಕು ತಿಂಗಳಲ್ಲಿ ರಾಮಮಂದಿರ ನಿರ್ಮಾಣ : ಅಮಿತ್ ಶಾ

ಅಯೋಧ್ಯೆಯಲ್ಲಿ ದಶಕಗಳಿಂದ ಕಗ್ಗಂಟಾಗಿದ್ದ 2.77 ಎಕರೆ ಜಾಗವನ್ನು ನ.9ರಂದು ಸುಪ್ರೀಂಕೋರ್ಟ್‌ ರಾಮಮಂದಿರ ನಿರ್ಮಾಣಕ್ಕೆ ಮಂಜೂರು ಮಾಡಿತ್ತು. ಇದೇ ವೇಳೆ, ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ 5 ಎಕರೆಯನ್ನು ನೀಡಲು ನಿರ್ದೇಶನ ನೀಡಿತ್ತು. ಅಲ್ಲದೆ, ದೇಗುಲ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ಟ್ರಸ್ಟ್‌ ಸ್ಥಾಪಿಸಬೇಕು ಎಂದು ನಿರ್ದೇಶನ ನೀಡಿತ್ತು. ಆ ಮೂರು ತಿಂಗಳ ಗಡುವು ಫೆಬ್ರವರಿಯಲ್ಲಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಸರ್ಕಾರ ಜನವರಿಯಲ್ಲಿ ಟ್ರಸ್ಟ್‌ ಸ್ಥಾಪನೆ ಮಾಡಲು ಉದ್ದೇಶಿಸಿದೆ.

4 ತಿಂಗಳಲ್ಲಿ ಭವ್ಯ ರಾಮ ಮಂದಿರ: ಅಮಿತ್ ಶಾ ಭರವಸೆಗೆ ಏನಂತೀರ?

ಅಯೋಧ್ಯೆಯಲ್ಲಿ ಮುಂದಿನ ನಾಲ್ಕು ತಿಂಗಳಲ್ಲಿ ಮುಗಿಲೆತ್ತರದ ದೇಗುಲ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಜಾರ್ಖಂಡ್‌ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭ ಗೃಹ ಸಚಿವ ಅಮಿತ್‌ ಶಾ ಹೇಳಿದ್ದರು.

Follow Us:
Download App:
  • android
  • ios