Asianet Suvarna News Asianet Suvarna News

ಮುಸ್ಲಿಂ ಸಚಿವರಿಲ್ಲದೆ ನಿತೀಶ್ ಸಂಪುಟ, ಅಸಲಿಗೆ ಒಬ್ಬ ಶಾಸಕನೂ ಇಲ್ಲ!

ಬಿಹಾರದಲ್ಲಿ ನಿತೀಶ್ ಸರ್ಕಾರ/ ಒಬ್ಬೆ ಒಬ್ಬ ಮುಸ್ಲಿಂ ಸಚಿವರಿಲ್ಲ/ ಸ್ವಾತಂತ್ರ್ಯದ ನಂತರ ಇದೆ ಮೊದಲ ಸಾರಿ ಇಂಥ ಸಾಧ್ಯತೆ/ ಮುಸ್ಲಿಂ ಶಾಸಕರು ಆಯ್ಕೆಯೇ ಆಗಿಲ್ಲ/ ಎನ್‌ಡಿಎ ನಲ್ಲಿ ಮುಸ್ಲಿಂ ಶಾಸಕರೇ ಇಲ್ಲ

For the first time no Muslim minister or elected MLA in Bihar govt mah
Author
Bengaluru, First Published Nov 18, 2020, 6:19 PM IST

ಪಾಟ್ನಾ(ನ 18) ಬಿಹಾರದಲ್ಲಿ ಮತ್ತೆ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಎನ್ ಡಿಎ ಅಧಿಕಾರದ ಚುಕ್ಕಾಣಿ ಹಿಡಿದಿದೆ.  ಮಂತ್ರಿಮಂಡಳ ರಚನೆಯಾಗಿದ್ದು ಒಬ್ಬರೆ ಒಬ್ಬ ಮುಸ್ಲಿಂ ಸಚಿವರಿಲ್ಲ.

ಅಸಲಿಗೆ ಒಬ್ಬ ಮುಸ್ಲಿಂ ಎಂಎಲ್‌ಎನೂ ಆಯ್ಕೆಯಾಗಿಲ್ಲ.  ಸ್ವಾತಂತ್ರ್ಯ ನಂತರ ಇದೇ ಮೊದಲ ಸಾರಿ ಮುಸ್ಲಿಂ ಶಾಸಕ ಅಥವಾ ಸಚಿವರಿಲ್ಲದೇ ಆಡಳಿತರೂಢ ಪಕ್ಷ ಅಧಿಕಾರ ಚಲಾಯಿಸಲಿದೆ.

ಬಿಹಾರದ ಎನ್‌ಡಿಎ ಭಾರತೀಯ ಜನತಾ ಪಕ್ಷ, ಜನತಾದಳ (ಯುನೈಟೆಡ್), ಹಿಂದೂಸ್ತಾನಿ ಅವಂ ಮೋರ್ಚಾ (ಜಾತ್ಯತೀತ) ಮತ್ತು ವಿಕಾಸ್ ಶೀಲ್ ಇನ್ಸಾನ್ ಪಕ್ಷವನ್ನು ಒಳಗೊಂಡಿದೆ. ಸಮ್ಮಿಶ್ರ ಸರ್ಕಾರವಾದರೂ ಮೈತ್ರಿ ಪಕ್ಷಗಳಲ್ಲಿಯೂ ಮುಸ್ಲಿಂ ಶಾಸಕರಿಲ್ಲ. ರಾಜ್ಯದ ಜನಸಂಖ್ಯೆಯ ಶೇಕಡಾ 16 ಕ್ಕಿಂತ ಹೆಚ್ಚು ಜನ ಮುಸ್ಲಿಮರು ಬಿಹಾರದಲ್ಲಿ ಇದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ 2020 ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು 11 ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು ಯಾರೂ ಗೆದ್ದಿಲ್ಲ. 

ಬಿಹಾರ ಕ್ಯಾಬಿನೆಟ್ ಸೋಮವಾರ ಪ್ರಮಾಣವಚನ ಸ್ವೀಕರಿಸಿದಾಗ, ಸಿಎಂ ನಿತೀಶ್ ಅವರಿಗೆ ಮುಸ್ಲಿಮರನ್ನು ಕ್ಯಾಬಿನೆಟ್ ಮಂತ್ರಿಯಾಗಿ ನೇಮಕ ಮಾಡಲು ಅವಕಾಶವಿತ್ತು.  ವಿಧಾನಪರಿಷತ್ ಮೂಲಕ ಒಳಗೆ ತೆಗೆದುಕೊಳ್ಳಬಹುದಿತ್ತು. ಆದರೆ ಸಿಎಂ ಅಂಥ ಕ್ರಮಕ್ಕೆ ಮುಂದಾಗಿಲ್ಲ.

ಸಿಎಂ ಸೇರಿದಂತೆ ಒಟ್ಟು 15 ಸದಸ್ಯರಿಗೆ ರಾಜ್ಯಪಾಲ ಫಾಗು ಚೌಹಾನ್ ಪ್ರಮಾಣ ವಚನ ಸ್ವೀಕರಿಸಿದರು. ಈ ಪೈಕಿ ನಾಲ್ವರು ಮೇಲ್ಜಾತಿ ಮತ್ತು ಹಿಂದುಳಿದ ಜಾತಿಗಳನ್ನು ಪ್ರತಿನಿಧಿಸಿದರೆ, ತಲಾ ಮೂವರು ಅತ್ಯಂತ ಹಿಂದುಳಿದ ಜಾತಿ ಮತ್ತು ಪರಿಶಿಷ್ಟ ಜಾತಿಗಳಿಂದ ಬಂದವರು.

Follow Us:
Download App:
  • android
  • ios