ಇದೇ ಮೊದಲ ಬಾರಿಗೆ ಭಾರತದಲ್ಲಿ ಸಣ್ಣ ಪುಟ್ಟ ಅಪರಾಧಗಳಿಗೆ ಹೊಸ ರೀತಿಯ ಶಿಕ್ಷೆ ಎನ್ನುವಂತೆ 'ಕಮ್ಯುನಿಟಿ ಸರ್ವೀಸ್‌' ಅನ್ನು ಪ್ರಸ್ತಾಪ ಮಾಡಲಾಗಿದೆ. ಇದು ಅಂಗೀಕಾರವಾದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳಾದ ಅಮೆರಿಕ, ಇಂಗ್ಲೆಂಡ್‌, ಸ್ವೀಡನ್‌ ದೇಶಗಳಂಥ ಸಾಲಿಗೆ ಭಾರತ ಸೇರಲಿದೆ. 

ನವದೆಹಲಿ (ಆ.12): ಭಾರತೀಯ ದಂಡ ಸಂಹಿತೆಯ ಬದಲಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶುಕ್ರವಾರ ಲೋಕಸಭೆಯಲ್ಲಿ 2023 ಭಾರತೀಯ ನ್ಯಾಯ ಸಂಹಿಂತಾ (ಬಿಎನ್‌ಎಸ್‌) ಪ್ರಸ್ತಾಪ ಮಾಡಿದರು. ಆಧುನಿಕ ಯುಗದಲ್ಲಿ ನಡೆಯುವ ಅಪರಾಧಗಳಿಗೆ ಹೊಸ ರೀತಿಯ ಕಾನೂನುಗಳನ್ನು ಇದರಲ್ಲಿ ಸೇರಿಸಲಾಗಿದೆ. ಇದರಲ್ಲಿ ಬಹಳ ಪ್ರಮುಖವಾಗಿ ದೇಶದ್ಲಿ ನಡೆಯುವ ಚಿಕ್ಕಪುಟ್ಟ ಅಪರಾಧಗಳಿಗೂ ಹೊಸ ರೀತಿಯ ಶಿಕ್ಷೆಯನ್ನು ಪ್ರಸ್ತಾಪಿಸಲಾಗಿದೆ. ಸಣ್ಣಪುಟ್ಟ ಅಪರಾಧಗಳಿಗೆ ಇನ್ನು ಮುಂದೆ ಕಮ್ಯುನಿಟಿ ಸರ್ವೀಸ್‌ ಶಿಕ್ಷೆಯನ್ನು ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಪ್ರಸ್ತಾಪ ಮಾಡಿದೆ. ಇದಕ್ಕೂ ಮುನ್ನ ಇದ್ದ ಐಪಿಸಿಯಲ್ಲಿ ಬಹುತೇಕ ಎಲ್ಲಾ ರೀತಿಯ ಅಪರಾಧಗಳಿಗೂ ಶಿಕ್ಷೆಗಳನ್ನು ತಿಳಿಸಲಾಗಿತ್ತು. ಮರಣದಂಡನೆ, ಜೀವಾವಧಿ ಶಿಕ್ಷೆ, ಕಠಿಣ ಕಾರಾಗೃಹ ಶಿಕ್ಷೆ, ಸರಳ ಜೈಲು ಶಿಕ್ಷೆ, ಆಸ್ತಿ ಮುಟ್ಟುಗೋಲು ಮತ್ತು ದಂಡದ ರೂಪದಲ್ಲಿ ನೀಡಲಾಗುವ ಶಿಕ್ಷೆಯನ್ನು ಹೊಂದಿತ್ತು. ಈಗ ಇದರೊಂದಿಗೆ ಕಮ್ಯುನಿಟಿ ಸರ್ವೀಸ್‌ ಅಂದರೆ ಸಮುದಾಯ ಸೇವೆಯ ಶಿಕ್ಷೆಯನ್ನೂ ಸೇರಿಸಲಾಗಿದೆ.

ಪ್ರಸ್ತಾವಿತ ಕಾನೂನಿನಲ್ಲಿ ಆತ್ಮಹತ್ಯೆ ಯತ್ನ, ಸರ್ಕಾರಿ ನೌಕರರು ಕಾನೂನು ಬಾಹಿರವಾಗಿ ವ್ಯಾಪಾರದಲ್ಲಿ ತೊಡಗಿಕೊಳ್ಳುವುದು, 5 ಸಾವಿಕ್ಕಿಂತ ಕಡಿಮೆ ಆಸ್ತಿಯ ಕಳ್ಳತನ, ಸಾರ್ವಜನಿಕವಾಗಿ ಮದ್ಯಪಾನ ಅಥವಾ ಅಮಲು ಪದಾರ್ಥ ಸೇವನೆ ಮತ್ತು ಮಾನನಷ್ಠ ಪ್ರಕರಣದಲ್ಲಿ ಕಮ್ಯುನಿಟಿ ಸರ್ವೀಸ್‌ ಶಿಕ್ಷೆ ನೀಡಬಹುದು ಎಂದು ಹೇಳಲಾಗಿದೆ.

ಪಾಶ್ಚಿಮಾತ್ಯ ದೇಶಗಳಲ್ಲಿ ಸಮುದಾಯ ಸೇವೆ ಸಾಮಾನ್ಯವಾಗಿದೆ: ಪಾಶ್ಚಿಮಾತ್ಯ ನ್ಯಾಯಾಂಗ ವ್ಯವಸ್ಥೆಯಲ್ಲಿ, ವಿಶೇಷವಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಮುದಾಯ ಸೇವೆಯು ಸಾಮಾನ್ಯ ದಂಡನೆಯಾಗಿದೆ. ಈ ಪಾಲನೆ-ಅಲ್ಲದ ಶಿಕ್ಷೆಯು ಸಾಮಾನ್ಯವಾಗಿ ಸೆರೆವಾಸಕ್ಕೆ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತದೆ, ಶಿಕ್ಷೆಯ ಕ್ರಮದ ಒಂದು ರೂಪವಾಗಿ ಆರೋಪಿಯನ್ನು ಕಾರ್ಮಿಕರನ್ನಾಗಿ ನಡೆಸಿಕೊಳ್ಳಲಾಗುತ್ತದೆ 

ನ್ಯಾಯಾಲಯದ ಆದೇಶದ ಸಮುದಾಯ ಸೇವೆಯು ಘಟನೆಯಿಂದ ಘಟನೆಬೆ ಬದಲಾಗುತ್ತಿರಯತ್ತದೆ. ಇದು ವಿವಿಧ ರೀತಿಯ ಸೇವೆಗಳು ಮತ್ತು ಅಪರಾಧಗಳನ್ನು ಪ್ರತಿಬಿಂಬಿಸುತ್ತದೆ. ಸಮುದಾಯ ಸೇವೆಯು ಪ್ರಾಯಶ್ಚಿತ್ತದ ಜೊತೆಗೆ ನಾಗರಿಕ ಜವಾಬ್ದಾರಿಯ ಅಭ್ಯಾಸಗಳನ್ನು ಬೆಳೆಸಲು ಪ್ರಯತ್ನಿಸುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹಣೆ, ಗೀಚುಬರಹ ತೆಗೆಯುವಿಕೆ, ಅಥವಾ ಸಾರ್ವಜನಿಕ ಸೌಲಭ್ಯಗಳನ್ನು ನಿರ್ವಹಿಸುವುದು, ಪಾತ್ರೆಗಳನ್ನು ತೊಳೆಯುವುದು ಸೇರಿದಂತೆ ಸಮುದಾಯ ಸೇವೆಯ ಅತ್ಯಂತ ಪ್ರಚಲಿತ ಉದಾಹರಣೆಗಳು. 

ಮದುವೆಯಾದ್ಮೇಲೆ ಸೆಕ್ಸ್ ನಿರಾಕರಿಸೋದು ಕ್ರೌರ್ಯ: ಕರ್ನಾಟಕ ಹೈ ಕೋರ್ಟ್

ಇನ್ನೊಂದು ರೀತಿಯ ಕಮ್ಯುನಿಟಿ ಶಿಕ್ಷೆ ಎಂದರೆ ಶೈಕ್ಷಣಿಕ ಅಥವಾ ಜಾಗೃತಿ ಕಾರ್ಯಕ್ರಮಗಳು. ಅಪರಾಧಿಗಳು ಡ್ರಗ್ ಅಥವಾ ಆಲ್ಕೋಹಾಲ್ ಶಿಕ್ಷಣ, ಕೋಪ ನಿರ್ವಹಣೆ ಅಥವಾ ಸುರಕ್ಷಿತ ಡ್ರೈವಿಂಗ್ ಕೋರ್ಸ್‌ಗಳಂತಹ ಮಾಹಿತಿ ತರಗತಿಗಳಿಗೆ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ. ಅದಲ್ಲದೆ, ದತ್ತಿ ಕಾರ್ಯಗಳಿಗೂ ಅವರನ್ನು ನಿಯೋಜಿಸಬಹುದು. ನಿರಾಶ್ರಿತರಿಗೆ ಸಹಾಯ ಮಾಡುವುದು, ಆಸ್ಪತ್ರೆಯಲ್ಲಿರುವ ಆಹಾರ ಮಳಿಗೆಗಳಲ್ಲಿ ಕೆಲಸ ಮಾಡುವಂಥ ಶಿಕ್ಷೆಗಳನ್ನು ಒಳಗೊಂಡಿರುತ್ತದೆ.

ಸೆಕ್ಷನ್‌ 377ಗೆ ಕೊಕ್‌ ನೀಡಿದ ಕೇಂದ್ರ, ಪುರುಷರ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆಯೇ ಇಲ್ಲ!

ಆರೋಪ ಮಾಡಿರುವ ವ್ಯಕ್ತಿ ಯಾವುದಾದರೂ ಕ್ಷೇತ್ರದಲ್ಲಿ ಪಳಗಿದ ವ್ಯಕ್ತಿಯಾಗಿದ್ದಲ್ಲಿ, ಉದಾಹರಣೆಗೆ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದಲ್ಲಿ ಆತನಿಂದ ಆದಾಯ ರಹಿತ ಸಂಸ್ಥೆಗಳಿಗೆ ವೆಬ್‌ಸೈಟ್‌ ಡೆವಲಪ್‌ ಮಾಡುವ ಶಿಕ್ಷೆಯನ್ನು ನೀಡಬಹುದು. ಫೈನಾನ್ಸ್‌ ಸಂಬಂಧಿತ ವ್ಯಕ್ತಿಯಾದಲ್ಲಿ ಕೆಳ ಸಮುದಾಯದ ಕುಟುಂಬಗಳಿಗೆ ಆರ್ಥಿಕ ಸಲಹೆ ನೀಡುವ ಶಿಕ್ಷೆಯನ್ನು ನೀಡಬಹುದು.