ದೆಹಲಿ ಮೆಟ್ರೋದಲ್ಲಿ ಕೊಳಲು ವಾದಕನೋರ್ವನ ಕೊಳಲ ನಾದಕ್ಕೆ ಮಗುವನ್ನು ಅಮ್ಮನ ಕೈಯಿಂದಿಳಿದು ಅಂಬೆಗಾಲಿಡುತ್ತಲೇ ಆತನ ಬಳಿ ಹೋಗಿದೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಕೊಳಲು ವಾದನಕ್ಕೆ ಬೆರಗಾದವರಿಲ್ಲ, ದ್ವಾಪರಯುಗದಲ್ಲಿ ಕೃಷ್ಣನ ಕೊಳಲನಾದಕ್ಕೆ ಗೋವುಗಳೆಲ್ಲಾ ಓಡೋಡಿ ಬಂದಂವಂತೆ. ಅದೇ ರೀತಿ ಇಲ್ಲೊಂದು ಕಡೆ ಸಂಗೀತಗಾರನ ಕೊಳಲು ವಾದನಕ್ಕೆ ಬೆರಗಾದ ಮಗುವೊಂದು ಅಂಬೆಗಾಲಿಡುತ್ತಲೇ ಆತನ ಬಳಿ ಬಂದು ಆತ ಕೊಳಲು ನುಡಿಸುತ್ತಿದ್ದರೆ, ಆತನ ಬಳಿ ಇದ್ದ ಹಾರ್ಮೋನಿಯಂ ಅನ್ನು ಮುಟ್ಟಿ ನೋಡಿ ಅದನ್ನು ತಟ್ಟುತ್ತಾ ಆತನನ್ನೇ ನೋಡುತ್ತಿದೆ. ಕೊಳಲು ವಾದಕನ ಮಗು ಆಸಕ್ತಿಯಿಂದ ನೋಡುತ್ತಿದ್ದು, ಮಗು ಹಾಗೂ ಕೊಳಲುವಾದಕನ ಈ ಆಸಕ್ತಿಕರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಕೊಳಲು ವಾದನಕ್ಕೆ ಬೆರಗಾದ ಕಂದ: ಅಂಬೆಗಾಲಿಡುತ್ತಲೇ ಸಂಗೀತಗಾರನ ಬಳಿ ಬಂದ:
ಲಿಂಕ್ಡಿನ್‌ನಲ್ಲಿ The Logical Indianನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ಮಗುವಿನ ಆ ಕುತೂಹಲ ಆಸಕ್ತಿಗೆ ಬೆರಗಾಗಿದ್ದಾರೆ. ಅಂದಹಾಗೆ ಇಲ್ಲಿ ಮೆಟ್ರೋ ರೈಲಿನಲ್ಲಿ ಕೊಳಲು ನುಡಿಸುತ್ತಿರುವರು ಸೋಶಿಯಲ್ ಮೀಡಿಯಾದಲ್ಲಿ ಕೊಳಲು ವಾದನದ ವೀಡಿಯೋಗಳಿಂದಲೇ ಪ್ರಸಿದ್ಧಿ ಪಡೆದಿರುವ ಸಂಗೀತಗಾರ ತನಿಷ್ಕ್ ಗೋಡ್ಕೆ. ಕೊಳಲು ಗಾಯನದ ಮೂಲಕ ಅವರು ಹಾಲುಗಲ್ಲದ ಕಂದನನ್ನು ಸೆಳೆದಿದ್ದು, ನೋಡಿಲ್ಲಿ ಪುಟ್ಟ ಕೃಷ್ಣ ಎಂದು ಬರೆದುಕೊಂಡಿದ್ದಾರೆ. ಇವರು ಕೊಳಲು ನುಡಿಸುವುದನ್ನು ನೋಡಿದ ಮಗು ಅಪ್ಪ ಅಮ್ಮನ ಕೈಯಿಂದ ಕೆಳಗಿಳಿದು ಬಂದು ಅಂಬೆಗಾಲಿಡುತ್ತಲೇ ಈ ಗಾಯಕನ ಬಳಿ ಬಂದಿದೆ.
ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದ ದೆಹಲಿ ಮೆಟ್ರೋ:
ಈ ವೀಡಿಯೋ ನೋಡಿದ ಅನೇಕರು ತೊದಲು ನುಡಿಯುವ ಕಂದನ ಕೊಳಲು ವಾದನದಿಂದ ಸೆಳೆದ ಸಂಗೀತಗಾರನಿಗೆ ಭೇಷ್ ಎಂದಿದ್ದಾರೆ. ಅಲ್ಲದೇ ಮೆಟ್ರೋ ಅಧಿಕಾರಿಗಳು ಕೂಡ ಖುಷಿಯನ್ನು ಹಂಚುವ ಸಂಗೀತಗಾರನ ಈ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇಲ್ಲಿ ಕೊಳಲುವಾದನಕ್ಕಿಂತಲೂ ಹೆಚ್ಚು ಮಗು ಆತನ ಬಳಿ ಅಂಬೆಗಾಲಿಡುತ್ತಾ ಸಾಗಿದ ವಿಚಾರ ಜನರನ್ನು ಸಾಕಷ್ಟು ಸೆಳೆದಿದೆ. ಅನೇಕರು ಸಂಗೀತಕ್ಕೆ ಜನರನ್ನು ಒಂದು ಮಾಡುವ ಜೊತೆಗೆ ಸೆಳೆಯುವ ಶಕ್ತಿ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ದೆಹಲಿ ಮೆಟ್ರೋದಲ್ಲಿ ಈ ಘಟನೆ ನಡೆದಿದ್ದು, ದೆಹಲಿ ಮೆಟ್ರೋ ರೈಲು ಕರ್ಪೋರೇಷನ್‌ನ ವಕ್ತಾರ, ಇಂತಹ ಕ್ಷಣಗಳು ಸಾರ್ವಜನಿಕ ಪ್ರಯಾಣಗಳನ್ನು ಹೆಚ್ಚು ಸ್ಮರಣೀಯವಾಗಿಸುವಲ್ಲಿ ಕಲೆಯ ಮಹತ್ವವನ್ನು ಎತ್ತಿ ತೋರಿಸುತ್ತವೆ ಎಂದು ಹೇಳಿದ್ದಾರೆ.
ವೀಡಿಯೋಗೆ ನೆಟ್ಟಿಗರಿಂದ ಶ್ಲಾಘನೆಯ ಸುರಿಮಳೆ:
ಇದೊಂದು ನನ್ನ ಜೀವನದ ಅತ್ಯಂತ ಸಿಹಿಯಾದ ಕ್ಷಣ ಎಂದು ಬರೆದು ತಾನಿಷ್ಕ್ ಅವರು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ವೀಡಿಯೋ ನೋಡಿದ ಒಬ್ಬರು ನಿಮ್ಮ ಗುರು ಯಾರು ಎಂದು ಕೇಳಿದ್ದಾರೆ ಅದಕ್ಕೆ ಅವರು ಪ್ರತಿಯೊಬ್ಬ ಶ್ರೇಷ್ಠ ಕೊಳಲುವಾದಕರು ನನ್ನ ಗುರುಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇದು ದೆಹಲಿ ಮೆಟ್ರೋ ರೈಲಾಗಿದ್ದರೆ ಇದೇ ಮೊದಲ ಬಾರಿಗೆ ದೆಹಲಿ ಮೆಟ್ರೋ ರೈಲಿನಲ್ಲೊಂದು ಒಳ್ಳೆಯ ಕ್ಷಣ ನೋಡಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನೀವು ಕೊಳಲು ನುಡಿಸುತ್ತಿದ್ದರೆ ಆ ಮಗು ಡೋಲು ಬಾರಿಸಲು ಬಂದಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ವೀಡಿಯೋ ಬಗ್ಗೆ ನಿಮಗೇನನಿಸುತ್ತೆ ಕಾಮೆಂಟ್ ಮಾಡಿ..
