Asianet Suvarna News Asianet Suvarna News

ವಿಮಾನದಿಂದ ರಾಕೆಟ್ ಲಾಂಚ್ ದೃಶ್ಯ ಸೆರೆ ಹಿಡಿದ ಪ್ರಯಾಣಿಕ, ಸಂಚಲನ ಸೃಷ್ಟಿಸಿದ ವಿಡಿಯೋ!

ವಿಮಾನದಲ್ಲಿ ಬಹುತೇಕರು ವಿಂಡೋ ಸೀಟ್ ಪ್ರಯಾಣವನ್ನೇ ಬಯಸುತ್ತಾರೆ. ಪ್ರಯಾಣದ ವೇಳೆ ಸುಂದರ ದೃಶ್ಯಗಳನ್ನು ನೋಡುತ್ತಾ ಪ್ರಯಾಣಿಸುವ ಆನಂದ ಸಿಗಲಿದೆ. ಹೀಗೆ ಪ್ರಯಾಣದ ವೇಳೆ ಒರ್ವ ರಾಕೆಟ್ ಉಡಾವಣೆ ಮಾಡುತ್ತಿದ್ದ ದೃಶ್ಯ ಸೆರೆ ಹಿಡಿದಿದ್ದಾನೆ. ಈ ವಿಡಿಯೋ ಭಾರಿ ಸಂಚಲನ ಸೃಷ್ಟಿಸಿದೆ.
 

Flight Passenger capture rocket launch on Mobile camera viral video impress netizens ckm
Author
First Published May 19, 2023, 4:42 PM IST | Last Updated May 19, 2023, 5:13 PM IST

ನವದೆಹಲಿ(ಮೇ.19): ವಿಮಾನ ಪ್ರಯಾಣ ಅನುಭವ ಸುಂದರವಾಗಿಸಲು ವಿಂಡೋ ಸೀಟ್ ಪ್ರಯಾಣ ಮಾಡಬೇಕು. ಬಾನೆತ್ತರದಿಂದ ಭೂಮಿಯನ್ನು ನೋಡುವುದು ಆನಂದಿಸುವುದೇ ಆಹ್ಲಾದಕರ. ಇನ್ನು ಮೋಡಗಳ ನಡುವಿನಿಂದ ವಿಮಾನ ಸಾಗುವ ಸುಂದರ ಅನುಭವವೂ ಸಿಗಲಿದೆ. ಹೀಗೆ ಪ್ರಯಾಣಿಕನೋರ್ವ ವಿಂಡೋ ಸೀಟ್‌ನಲ್ಲಿ ಕುಳಿತು ಸುಂದರ ದೃಶ್ಯಗಳನ್ನು ಸೆರೆಹಿಡಿಯುತ್ತಾ ಸಾಗುತ್ತಿದ್ದ. ಈ ವೇಳೆ ರಾಕೆಟ್ ಉಡಾವಣೆ ಮಾಡುತ್ತಿದ್ದ ದೃಶ್ಯವೂ ಸೆರೆಯಾಗಿದೆ. ಭೂಮಿಯಿಂದ ಭಾನೆತ್ತರಕ್ಕೆ ಹಾರಿದ ರಾಕೆಟ್ ಲಾಂಚ್ ದೃಶ್ಯ ಇದೀಗ ಭಾರಿ ವೈರಲ್ ಆಗಿದೆ.

ಪ್ಲೇನ್ ಫೋಕಸ್ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ನೀವು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ದಿಢೀರ್ ರಾಕೆಟ್ ಉಡಾವಣೆ ಮಾಡುತ್ತಿರುವ ದೃಶ್ಯ ಸೆರೆ ಹಿಡಿದಾಗ ಎಂದು ಬರೆಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇಷ್ಟು ದಿನ ರಾಕೆಟ್ ಲಾಂಚ್ ದೃಶ್ಯವನ್ನು ಭೂಮಿಯಿಂದ ನೋಡಿದ್ದೇವೆ. ಇದೇ ಮೊದಲ ಬಾರಿಗೆ ಬಾನೆತ್ತರದಿಂದ ನೋಡುತ್ತಿದ್ದೇವೆ. ಈ ಸುಂದರ ದೃಶ್ಯ ಸೆರೆ ಹಿಡಿದ ನಿಮಗೆ ಧನ್ಯವಾದ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ. 

 

 

ಇಸ್ರೋದಿಂದ ಒನ್‌ವೆಬ್‌ ಮಿಶನ್‌ನ 36 ಉಪಗ್ರಹಗಳ ಯಶಸ್ವಿ ಉಡಾವಣೆ, ವರ್ಷಾಂತ್ಯಕ್ಕೆ ಸೇವೆ ಆರಂಭ ಸಾಧ್ಯತೆ

ವಿಮಾನ ಸ್ಪೇಸ್ ಕೇಂದ್ರದ ಆಕಾಶದಲ್ಲಿ ಸಾಗುತ್ತಿತ್ತು. ಪ್ರಯಾಣಿಕ ಬಾನೆತ್ತರದಿಂದ ಭೂಮಿಯ ಸುಂದರ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಈ ವೇಳೆ ಸ್ಪೇಸ್ ಸೆಂಟರ್‌ನಿಂದ ರಾಕೆಟ್ ಉಡಾವಣೆ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಸ್ಪೇಸ್ ಸೆಂಟರ್ ಜೂಮ್ ಮಾಡಿದ ಪ್ರಯಾಣಿಕ ರಾಕೆಡ್ ಉಡಾವಣೆ ಆರಂಭದಿಂದ ಬಾನೆತ್ತರಕ್ಕೆ ಹಾರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

ಭೂಮಿಯಿಂದ ಸೆರೆ ಹಿಡಿಯುವ ರಾಕೆಟ್ ಲಾಂಚ್ ದೃಶ್ಯದಲ್ಲಿ ಮೋಡದವರೆಗಿನ ದೃಶ್ಯ ಮಾತ್ರ ಲಭ್ಯವಿದೆ.ಆದರೆ ಇಲ್ಲ ರಾಕೆಟ್ ಮೋಡಗಳನ್ನು ಸೀಳಿಕೊಂಡು ಹೋಗುವ ದೃಶ್ಯವಿದೆ. ಮೋಡ ಸೀಳಿ ಮುಂದೆ ಸಾಗಿದ ರಾಕೆಟ್ ಮತ್ತೊಂದು ಫೈರ್ ಸ್ಪೀಡ್ ತೆರೆದುಕೊಂಡು ಸಾಗುತ್ತಿರುವ ದೃಶ್ಯ ಲಭ್ಯವಿದೆ. 

 

ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು

ವಿಮಾನದಿಂದ ಸೆರೆ ಹಿಡಿದ ಹಲವು ದೃಶ್ಯಗಳು ಈಗಾಗಲೈ ವೈರಲ್ ಆಗಿದೆ. ಬಹುತೇಕರು ನಿಗದಿತ ಸ್ಥಳಗಳು ಆಕಾಶದಿಂದ ಹೇಗೆ ಕಾಣುತ್ತವೆ ಎಂಬ ವಿಡಿಯೋಗಳನ್ನು ಮಾಡಿದ್ದಾರೆ. ರಾತ್ರಿ ವೇಳೆ ನಗರ ಹೇಗೆ ಕಾಣುತ್ತದೆ. ಆಕಾಶದಿಂದ, ಭೂಮಿ ಸಮುದ್ರ, ಸುಂದರ ತಾಣಗಳ ಹೇಗೆ ಕಾಣುತ್ತದೆ ಅನ್ನೋ ದೃಶ್ಯಗಳು ವೈರಲ್ ಆಗಿದೆ. ಇದೀಗ ರಾಕೆಟ್ ಲಾಂಚ್ ದೃಶ್ಯ ಭಾರಿ ವೈರಲ್ ಆಗಿದೆ.
 

Latest Videos
Follow Us:
Download App:
  • android
  • ios