ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ 5 ವರ್ಷದ ಮಗಳನ್ನು ಸ್ಕೂಟರ್ ಮೂಲಕ ಆಸ್ಪತ್ರೆಯಿಂದ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಯದ್ವಾ ತದ್ವಾ BMW ಕಾರೊಂದು ಚಲಾಯಿಸಿದ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ 5 ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ.

ನೋಯ್ಡಾ (ಜು.27) ತೀವ್ರ ಅನಾರೋಗ್ಯದ ಕಾರಣ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ತಂದೆ ಮರಳಿ ಬರುವಾಗ ದುರಂತ ನಡೆದುಹೋಗಿದೆ. ಯದ್ವಾ ತದ್ವಾವಾಗಿ ಬಂದ BMW ಕಾರೊಂದು ಅಪ್ಪ ಮಗಳಿದ್ದ ಸ್ಕೂಟರ್‌ಗೆ ಡಿಕ್ಕಿಯಾಗಿ ಅಪಘಾತ ನಡೆದಿದೆ. ಭೀಕರ ಅಪಘಾತದಲ್ಲಿ 5 ವರ್ಷದ ಮಗಳು ಸ್ಥಳದಲ್ಲೆ ಮೃತಪಟ್ಟರೆ, ತಂದೆ ಹಾಗೂ ಸಂಬಂಧಿ ಗಂಭೀರವಾಗಿ ಗಾಯಗೊಂಡ ಘಟನೆ ನೋಯ್ಡಾದಲ್ಲಿ ನಡೆದಿದೆ. BMW ಕಾರಿನ ಚಾಲಕ ಹಾಗೂ ಸಹ ಪ್ರಯಾಣಿಕನ ಪೊಲೀಸರು ಬಂಧಿಸಿದ್ದಾರೆ.

ಆಸ್ಪತ್ರೆಯಿಂದ ಮನೆಗೆ ತೆರಳುವಾಗ ವೇಳೆ ಅಪಘಾತ

ಸೆಕ್ಟರ್ 45 ನಿವಾಸಿ ಗುಲ್ ಮೊಹಮ್ಮದ್ ತಮ್ಮ 5 ವರ್ಷದ ಮಗಳ ಆಯತ್‌ಳನ್ನು ಮಕ್ಕಳ ಪಿಜಿಐ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜ್ವರ ಸೇರಿದಂತೆ ತೀವ್ರ ಅನಾರೋಗ್ಯದಿಂದ ಅಸ್ವಸ್ಥಳಾಗಿದ್ದ ಮಗಳ ಚಿಕಿತ್ಸೆಗಾಗಿ ಆಸ್ಪತ್ಪೆಗೆ ದಾಖಲಿಸಿದ್ದರು. ವೈದ್ಯರ ಭೇಟಿ ಮಾಡಿ ಔಷಧಿ ಪಡೆದ ಬಳಿಕ ಗುಲ್ ಮೊಹಮ್ಮದ್, ಪುತ್ರಿ ಆಯತ್ ಹಾಗೂ ಮತ್ತೊರ್ವ ಸಂಬಂಧಿ ತಮ್ಮ ಹೋಂಡಾ ಆ್ಯಕ್ಟಿವಾ ಸ್ಕೂಟರ್ ಮೂಲಕ ಮನೆಗೆ ಮರಳಿದ್ದಾರೆ. ಈ ವೇಳೆ ಅಪಘಾತ ಸಂಭವಿಸಿದೆ.

ವಿದ್ಯಾರ್ಥಿಗಳ ಚಲಾಯಿಸುತ್ತಿದ್ದ BMW ಕಾರು

ವಿದ್ಯಾರ್ಥಿಗಳಿಬ್ಬರು ಯದ್ವಾ ತದ್ವಾ ತಾರು ಡ್ರೈವ್ ಮಾಡಿದ್ದಾರೆ. ಆಸ್ಪತ್ರೆಯಿಂದ ಹೊರಬಂದು ಸ್ಕೂಟರ್ ಹಿತ್ತದ ತಕ್ಷಣವೇ ಕಾರು ಇವರ ಮೇಲೆ ಹರಿದಿದೆ. ವೇಗವಾಗಿ ಸಾಗಿ ಬಂದ ಕಾರು ಆಸ್ಪತ್ರೆಯ ಗೇಟ್ 3ರ ಬಳಿ ಮನೆಗೆ ಹೊರಡುತ್ತಿದ್ದ ಅಪ್ಪ, ಮಗಳು ಹಾಗೂ ಸಂಬಂಧಿ ಮೇಲೆ ಹರಿದಿದೆ. ಭೀಕರ ಅಪಘಾತದಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಬಳಿಕ ಪರಾರಿಯಾದ BMW ಕಾರು

ಅತೀ ವೇಗದಿಂದ ನಿಯಂತ್ರಣಕ್ಕೆ ಸಿಗದ BMW ಕಾರು ಭೀಕರ ಅಪಘಾತ ಸೃಷ್ಟಿಸಿದೆ. ಅಪಘಾತವಾಗುತ್ತಿದ್ದಂತೆ BMWಕಾರಿನ ಮೂಲಕ ವಿದ್ಯಾರ್ಥಿಗಳಿಬ್ಬರು ಪರಾರಿಯಾಗಿದ್ದಾರೆ. ಇತ್ತ ಕಾರಿನ ರಿಜಿಸ್ಟ್ರೇಶನ್ ನಂಬರ್ ಮೂಲಕ ಪೊಲೀಸರು ವಾಹನ ಪತ್ತೆ ಹಚ್ಚಿದ್ದಾರೆ. ಬಳಿಕ ಆರೋಪಿಗಳಾದ ಯಶ್ ಶರ್ಮಾ ಹಾಗೂ ಅಭಿಷೇಕ್ ರಾವತ್ ಅರೆಸ್ಟ್ ಮಾಡಿದ್ದಾರೆ.

ತಂದೆ ಹಾಗೂ ಸಂಬಂಧಿಗೆ ಚಿಕಿತ್ಸೆ

ಮಗಳು ಸ್ಥಳದಲ್ಲೇ ಮೃತಪಟ್ಟರೆ, ತಂದೆ ಹಾಗೂ ಮತ್ತೊರ್ವ ಸಂಬಂಧಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅದೇ ಅಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡಿರುವ ಕಾರಣ ಚಿಕಿತ್ಸೆ ಮುಂದುವರಿದಿದೆ. ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.