ಪಂಚರಾಜ್ಯ ಚುನಾವಣೆಯಲ್ಲಿ ಹಿಂದುಳಿದ ಕಾಂಗ್ರೆಸ್‌| ರಾಷ್ಟ್ರೀಯ ಪಕ್ಷಕ್ಕೆ ಸಿಗದ ಗೆಲುವು| ಐದರಲ್ಲಿ ಎಲ್ಲೂ ಸಿಕ್ಕಿಲ್ಲ ಬಹುಮತ

ನವದೆಹಲಿ(ಮೇ.02): ಪಂಚರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಕೊನೆಯಾಗುತ್ತಾ ಬಂದಿದೆ. ಅಸ್ಸಾಂ, ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ಹೀಗೆ ಒಟ್ಟು 822 ಸ್ಥಾನಗಳ ಮತ ಎಣಿಕೆ ನಡೆಯುತ್ತಿದೆ. ಈವರೆಗೆ ಬಂದ ಫಲಿತಾಂಶವನ್ನು ಗಮನಿಸಿದರೆ ಬಂಗಾಳದಿಂದ ಕೇರಳದವರೆಗೆ ಕಾಂಗ್ರೆಸ್‌ಗೆ ಎಲ್ಲೆಡೆ ಕಹಿ ಸುದ್ದಿಯೇ ಕೇಳಲು ಸಿಗುತ್ತಿದೆ. ಈ ಪಂಚ ರಾಜ್ಯ ಚುನಾವಣೆ ಬಳಿಕ ಮಮತಾ ಬ್ಯಾನರ್ಜಿ, ಎಡಪಕ್ಷಗಳ ಜೊತೆ ಕಾಂಗ್ರೆಸ್‌ ಭವಿಷ್ಯವೂ ಅಪಾದಲ್ಲಿತ್ತು. ಅತ್ತ ಬಿಜೆಪಿಗ್ಊ ಅಗಗ್ನಿಪರೀಕ್ಷೆ ಎದುತರಾಗಿತ್ತು. ಹೀಗಿರುವಾಗ ಕಾಂಗ್ರೆಸ್‌ನಂತಹ ದೊಡ್ಡ ಪಕ್ಷ ಈ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು ಸ್ಪಷ್ಟವಾಗಿದೆ.

YouTube video player

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಿನ್: ಮತ ಗಳಿಕೆಯಲ್ಲಿ ಬಿಜೆಪಿ ನಂಬರ್ ಒನ್

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಭಾರೀ ಮುನ್ನಡೆ ಸಾಧಿಸಿದ್ದರೆ, ಅಸ್ಸಾಂನಲ್ಲಿ ಆಡಳಿತರೂಢ ಬಿಜೆಪಿ ಹಾಗೂ ಕೇರಳದಲ್ಲಿ ಎಲ್‌ಡಿಎಫ್‌ ಪಕ್ಷಗಳು ಗೆಲ್ಲುವ ಹಂತದಲ್ಲಿವೆ. ಲಭ್ಯವಾದ ಅಂಕಿ ಅಂಶಗಳ ಅನ್ವಯ ಮತ್ತೊಮ್ಮೆ ಈ ರಾಜ್ಯಗಳಲ್ಲಿ ಆಡಳಿತರೂಢ ಪಕ್ಷಗಳೇ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಇನ್ನು ತಮಿಳುನಾಡಿನಲ್ಲಿ ವಿಪಕ್ಷದಲ್ಲಿದ್ದ ಡಿಎಂಕೆ, ಆಡಳಿತ ಪಕ್ಷ ಎಐಎಡಿಎಂಕೆಯನ್ನು ಕೆಳಗಿಳಿಸಲು ಸಜ್ಜಾಆಗಿರುವುದು ಸ್ಪಷ್ಟವಾಗಿದೆ. ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಎಐಎನ್‌ಆರ್‌ಸಿ ನೇತೃತ್ವದ ಎನ್‌ಡಿಎ ಗೆಲುವಿನತ್ತ ದಾಪುಗಾಲಿಡುತ್ತಿದೆ.

ಮುಸ್ಲಿಂ, ಮಟುವಾ, ಮಹಿಳೆ ಹಾಗೂ ಮಮತಾ: ಬಂಗಾಳದಲ್ಲಿ ಟಿಎಂಸಿ ಗೆಲುವಿನ ರಹಸ್ಯ!

ಇನ್ನು ಅನೇಕ ವರ್ಷ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಹಿಡಿತ ಸಾದಿಸಿದ್ದ ಎಡ ಪಕ್ಷ ಹಾಗೂ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಹೆಸರಿಲ್ಲದಂತಾಗಿದೆ. ಸದ್ಯ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲೂ ಪರದಾಡುವಂತಾಗಿದೆ. ಒಂದು ಸಂದರ್ಭದಲ್ಲಿ ದೇಶದ ಉದ್ದಗಲಕ್ಕೂ ಹಿಡಿತ ಸಾಧಿಸಿದ್ದ ರಾಷ್ಟ್ರೀಯ ಪಕ್ಷ ಬಹುತೇಕ ಕಡೆ ಅಧಿಕಾರ ಕಳೆದುಕೊಂಡಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಲು ಮೈತ್ರಿ ಮಾಡಿಕೊಳ್ಳುತ್ತಿದೆ. ಪರಿಸ್ಥಿತಿ ಹೀಗೇ ಮುಂದರೆದರೆ ಕಾಂಗ್ರೆಸ್‌ ರಾಜಕೀಯದಿಂದ ಬದಿಗೆ ಸರಿಯುವುದರಲ್ಲಿ ಅನುಮಾನವಿಲ್ಲ. ರಾಜಕೀಯದಲ್ಲಿ ಉಳಿಯಬೇಕಿದ್ದರೆ ಎಲ್ಲಾ ಸಮಸ್ಯೆಗಳನ್ನು ಅರಿತು ಪರಿಹಾರ ಕಂಡುಕೊಳ್ಳಬೇಕಷ್ಟೇ. 

"