19 ರಾಜ್ಯಗಳಲ್ಲಿ ಬಿಜೆಪಿಗೆ ಅಧಿಕಾರ| ಕೇಂದ್ರಾಡಳಿತ ಪ್ರದೇಶ ಪುದುಚೇರಿ ಬಿಜೆಪಿ ತೆಕ್ಕೆಗೆ

ಪುದುಚೇರಿ(ಮೇ.03) ವಿಧಾನಸಭೆಯಲ್ಲಿ ಗೆಲುವು ಸಾಧಿಸುವದರೊಂದಿಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಸಂಖ್ಯೆಈಗ 18ಕ್ಕೆ ಏರಿಕೆ ಆಗಿದೆ. ಈ ಮುನ್ನ ಬಿಜೆಪಿ ಸ್ವಂತ ಬಲದಲ್ಲಿ, ಮಿತ್ರಪಕ್ಷಗಳ ಜೊತೆಗೂಡಿ ಒಟ್ಟು 18 ರಾಜ್ಯಗಳಲ್ಲಿ ಅಧಿಕಾರದಲ್ಲಿ ಇತ್ತು. ಪಂಚ ರಾಜ್ಯ ಚುನಾಣೆಯಲ್ಲಿ ಅಸ್ಸಾಂನಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಪುದುಚೇರಿ ಹೊಸದಾಗಿ ಬಿಜೆಪಿಯ ತೆಕ್ಕೆಗೆ ಸೇರ್ಪಡೆ ಆಗಿದೆ.

ಬಿಜೆಪಿ ಹಾಗೂ ಬಿಜೆಪಿ ಮೈತ್ರಿಕೂಟದ ಸರ್ಕಾರಗಳು ಅಧಿಕಾರದಲ್ಲಿರುವ ರಾಜ್ಯಗಳ ಪಟ್ಟಿ ಹೀಗಿದೆ.

1.ಅಸ್ಸಾಂ, 2.ಅರುಣಾಚಲ ಪ್ರದೇಶ, 3.ಬಿಹಾರ, 4.ಗೋವಾ, 4.ಗುಜರಾತ್‌, 6.ಹರ್ಯಾಣ, 7.ಹಿಮಾಚಲ 8.ಪ್ರದೇಶ, 9.ಕರ್ನಾಟಕ, 10.ಮಧ್ಯ ಪ್ರದೇಶ, 11.ಮಿಜೋರಂ, 13.ನಾಗಾಲ್ಯಾಂಡ್‌, 13.ಸಿಕ್ಕಿಂ, 14.ತ್ರಿಪುರಾ, 15.ಉತ್ತರಾಖಂಡ, 16.ಉತ್ತರ ಪ್ರದೇಶ, 17.ಮಣಿಪುರ, 18. ಮೇಘಾಲಯ.

ರಾಷ್ಟ್ರ ರಾಜಕೀಯದ ಮೇಲೆ ಸಂಭಾವ್ಯ ಪರಿಣಾಮ

- ಬಂಗಾಳದಲ್ಲಿ ಮಮತಾ, ಕೇರಳದಲ್ಲಿ ಎಡರಂಗದ ಗೆಲುವು ತೃತೀಯ ರಂಗಕ್ಕೆ ಆಶಾಕಿರಣ

- 2024ರಲ್ಲಿ ರಾಷ್ಟ್ರ ಮಟ್ಟದಲ್ಲಿ ಮಮತಾ ನಾಯಕಿಯಾಗಿ ಹೊರಹೊಮ್ಮುತ್ತಾರಾ ಎಂಬ ಕುತೂಹಲ

- ದಕ್ಷಿಣದಲ್ಲಿ ಗೆದ್ದಿರುವ ಸ್ಟಾಲಿನ್‌ ಜತೆ ಮಮತಾ ಕೈಜೋಡಿಸಿ ಧ್ರುವೀಕರಣಕ್ಕೆ ಕೈಹಾಕುವ ಸಾಧ್ಯತೆ

- 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಪರಾರ‍ಯಯವಾಗಿ ರಂಗ ರಚನೆ ಪ್ರಕ್ರಿಯೆಗೆ ಚಾಲನೆ ನೀರೀಕ್ಷೆ

- ಪಕ್ಷಾಂತರಿಗಳ ನಂಬಿದ್ದ ಬಿಜೆಪಿಗೆ ಬಂಗಾಳದಲ್ಲಿ ಸೋಲು; ಇದು ದೇಶದ ರಾಜಕೀಯಕ್ಕೇ ಎಚ್ಚರಿಕೆ ಗಂಟೆ

- ಬರೀ ಪಕ್ಷಾಂತರಿಗಳನ್ನು ನಂಬಿ ಅಧಿಕಾರಕ್ಕೆ ಬರುವುದು ಕಷ್ಟಎಂಬ ಸ್ಪಷ್ಟಸಂದೇಶ ರವಾನೆ

- ಬರೀ ಮೋದಿ ಅಲೆ ನಂಬದೇ ಇನ್ನು ಬಿಜೆಪಿಯಿಂದ ಮುಂದಿನ ಚುನಾವಣೆಯಲ್ಲಿ ಪ್ರತ್ಯೇಕ ರಣನೀತಿ ಸಾಧ್ಯತೆ

- ಕೇರಳ, ಅಸ್ಸಾಂ ಸೋಲಿನಿಂದ ವಿಚಲಿತವಾಗಿ ಕಾಂಗ್ರೆಸ್‌ ಕೂಡ ಹೊಸ ತಂತ್ರ ಹೆಣೆಯುವ ನಿರೀಕ್ಷೆ