ಪಂಜಾಬ್‌ನಲ್ಲಿ ಲಡ್ಡಿಗೆ ಭಾರಿ ಬೇಡಿಕೆ ದೊಡ್ಡ ದೊಡ್ಡ ಆರ್ಡರ್ ಮಾಡಿದ ರಾಜಕೀಯ ನಾಯಕರು ನಾಳೆ ಪಂಜಾಬ್ ಸೇರಿ ಐದು ರಾಜ್ಯಗಳ ಚುನಾವಣಾ ಫಲಿತಾಂಶ
ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ಸಿಹಿ ತಿಂಡಿ ಲಡ್ಡಿಗೆ ಭಾರಿ ಬೇಡಿಕೆಯುಂಟಾಗಿದೆ. ರಾಜಕೀಯ ನಾಯಕರು ಲಡ್ಡಿಗೆ ದೊಡ್ಡ ಪ್ರಮಾಣದಲ್ಲಿ ಆರ್ಡರ್ ಮಾಡಿದ್ದಾರೆ. ಫಲಿತಾಂಶಕ್ಕೂ ಮುನ್ನವೇ ಗೆಲುವಿನ ನಿರೀಕ್ಷೆಯಲ್ಲಿರುವ ಜನ ನಾಯಕರು ಈಗಾಗಲೇ ಸಂಭ್ರಮಾಚರಣೆಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರಿಂದ 'ಮೋತಿಚೂರು ಲಡ್ಡೂ' ಹಾಗೂ ಇತರೆ ಸಿಹಿತಿಂಡಿಗಳಿಗೆ ದೊಡ್ಡ ಪ್ರಮಾಣದಲ್ಲಿ ಆರ್ಡರ್‌ಗಳು ಬರುತ್ತಿರುವುದರಿಂದ ನಗರದ ಕೆಲ ಸಿಹಿತಿಂಡಿ ಅಂಗಡಿಗಳ ಮಾಲೀಕರಿಗೆ ಲಾಟರಿ ಹೊಡೆದಂತಾಗಿದೆ.
ವಿಶೇಷವಾಗಿ ದೇಸಿ ತುಪ್ಪದಿಂದ (Desi Ghee) ತಯಾರಿಸಿದ 'ಮೋತಿ ಚುರ್ ಲಡ್ಡೂ'ಗೆ ಆರ್ಡರ್‌ಗಳ ಮಹಾಪೂರವೇ ಹರಿದು ಬರುತ್ತಿದೆ. ಲೂಧಿಯಾನದ (Ludhiana) ಅನೇಕ ದೊಡ್ಡ ದೊಡ್ಡ ಸಿಹಿ ತಿನಿಸುಗಳ ಅಂಗಡಿಗಳಲ್ಲಿ ಮುಂಗಡ ಆರ್ಡರ್‌ಗಳು ಬರುತ್ತಿವೆ. ಹೀಗಾಗಿ ಬೇಕರಿಗಳು ಸಿಹಿ ತಿಂಡಿ ಅಂಗಡಿಗಳು ಬೇಡಿಕೆ ಈಡೇರಿಸುವ ಸಲುವಾಗಿ ಲಡ್ಡುಗಳ ತಯಾರಿಯಲ್ಲಿ ತೊಡಗಿದ್ದಾರೆ.
ಚುನಾವಣಾ ಫಲಿತಾಂಶಕ್ಕೂ ಮೊದಲು ತಮಗೆ ಈಗಾಗಲೇ ಅನೇಕ ಆರ್ಡರ್‌ಗಳು ಬಂದಿವೆ, ವಿಶೇಷವಾಗಿ ಶಾಸಕರಾಗಲು ಹೊರಟಿರುವವರು ಲಡ್ಡು ಆರ್ಡರ್ ಮಾಡಿದ್ದಾರೆ. ಶಾಸಕರಿಗೆ ಆಪ್ತರಾಗಿರುವವರು ಕೂಡ ಲಡ್ಡಿಗೆ ಬೇಡಿಕೆ ಇರಿಸಿದ್ದಾರೆ ದೇಸಿ ತುಪ್ಪದಿಂದ ಲಡ್ಡೂ ತಯಾರಿಸುವ ಕಾರಣದಿಂದ ಬೇಡಿಕೆ ಹೆಚ್ಚಿದೆ ಎಂದು ಲೂಧಿಯಾನದ ಸಿಹಿ ಮಾರಾಟಗಾರರು ಹೇಳಿದ್ದಾರೆ.
ಚುನಾವಣಾ ಫಲಿತಾಂಶದ ಮೊದಲೇ ಸಿಹಿ ಮಾರಾಟಗಾರರಿಗೆ ಹೆಚ್ಚಿನ ಸಂಖ್ಯೆಯ ಆರ್ಡ್‌ರ್‌ಗಳು ಬಂದಿವೆ. ಸಿಹಿ ತಯಾರಿಗಾಗಿ ಕಚ್ಚಾವಸ್ತು ಮಾತ್ರವಲ್ಲದೇ ಸಮಯಕ್ಕೆ ಸರಿಯಾಗಿ ಆರ್ಡರ್ ಪೂರ್ಣಗೊಳಿಸುವವರ ಅಗತ್ಯವೂ ಇದೆ ಎಂದು ಸಿಹಿ ಮಾರಾಟಗಾರರು ಹೇಳಿದ್ದಾರೆ. ಫಲಿತಾಂಶ ಹೊರಬೀಳುವ ಸುಮಾರು ದಿನಗಳ ಮೊದಲೇ ಅವರಿಗೆ ಆರ್ಡರ್ ಬಂದಿದ್ದಂತೂ ನಿಜ ಆದರೆ ಈಗ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಸ್ಪಷ್ಟವಾಗಿದ್ದರೂ ಕೂಡ ಕೆಲವರು ಸುಮ್ಮನೇ ಆರ್ಡರ್ ನೀಡುತ್ತಿದ್ದಾರೆ ಎಂದು ಸಿಹಿ ಮಾರಾಟಗಾರರು ಹೇಳಿದ್ದಾರೆ. ಒಟ್ಟಿನಲ್ಲಿ ಯಾರೂ ಗೆಲ್ಲುತ್ತಾರೆ ಅಥವಾ ಸೋಲುತ್ತಾರೆ ಎಂಬುದನ್ನು ತಿಳಿಯಲು ನಾಳೆಯವರೆಗೆ ಕಾಯಲೇಬೇಕು. ಈ ಮಧ್ಯೆ ರಾಜಕೀಯ ನಾಯಕರ ಬೇಡಿಕೆ ಹಿನ್ನೆಲೆ ಲಡ್ಡು ತಯಾರಕರು ಈಗ ಭಾರಿ ಬ್ಯುಸಿಯಾಗಿರುವುದಂತೂ ನಿಜ.
Exit Poll 2020: ಉ.ಪ್ರ.ಕ್ಕೆ ಮತ್ತೆ ಯೋಗಿ, ಪಂಜಾಬ್‌ಗೆ ಆಪ್?
ಇತ್ತ ಸೋಮವಾರ ಮುಕ್ತಾಯಗೊಂಡ ಪಂಚರಾಜ್ಯ ಚುನಾವಣೆಗಳ ಫಲಿತಾಂಶ ಏನಾಗಬಹುದು ಎಂಬ ಕುತೂಹಲದ ಮಧ್ಯೆಯೇ ಪ್ರಕಟವಾಗಿರುವ ಚುನಾವಣೋತ್ತರ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಬಿಜೆಪಿ ದಾಖಲೆಯ 2ನೇ ಬಾರಿ ಅಧಿಕಾರಕ್ಕೆ ಬರಲಿದೆ ಎಂಬ ಸ್ಪಷ್ಟ ಭವಿಷ್ಯ ನುಡಿದಿವೆ. ಇದೇ ವೇಳೆ, ಪಂಜಾಬ್‌ನಲ್ಲಿ(Punjab) ಇದೇ ಮೊದಲ ಬಾರಿ ಕಾಂಗ್ರೆಸ್ (Congress) ಹಾಗೂ ಅಕಾಲಿದಳದ ಹೊರತಾದ ಪಕ್ಷವೊಂದು ಉದಯಿಸಲಿದ್ದು, ಅರವಿಂದ ಕೇಜ್ರಿವಾಲ್ (Arvind Kejriwal) ನೇತೃತ್ವದ ಆಮ್ ಆದ್ಮಿ ಪಕ್ಷ ಅಭೂತಪೂರ್ವ ಜಯ ಸಾಧಿಸಿ ಅಧಿಕಾರಕ್ಕೇರಲಿದೆ, ಎಎಪಿ (AAP) ದಿಲ್ಲಿ ಹೊರಗೆ ಮೊದಲ ಬಾರಿ ಅಧಿಕಾರಕ್ಕೆ ಬಂದು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಚುನಾವಣೆಯಲ್ಲಿ ಗೆಲ್ಲಲು ತಿರುಪತಿ ಲಡ್ಡು ವಿತರಣೆ!
ಆದರೆ, ಗೋವಾ (Goa), ಉತ್ತರಾಖಂಡ (Uttarakhand) ಹಾಗೂ ಮಣಿಪುರದಲ್ಲಿ (Manipur) ಸಮೀಕ್ಷೆಗಳು ಭಿನ್ನ-ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿವೆ. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೂ, ಎಲ್ಲ ಸಮೀಕ್ಷೆಗಳು ಏಕ ಸ್ವರದಲ್ಲಿ ‘ಬಿಜೆಪಿ ಜಯಿಸಲಿದೆ’ ಎಂದು ಹೇಳಿಲ್ಲ. ಕೆಲವು ಸಮೀಕ್ಷೆಗಳು ‘ಬಿಜೆಪಿ ಗೆಲ್ಲಲಿದೆ’ ಎಂದು ಹೇಳಿದ್ದರೆ, ಕೆಲವು ‘ಅತಂತ್ರ ವಿಧಾನಸಭೆ’ ಸುಳಿವು ನೀಡಿವೆ. ಹೀಗಾಗಿ ಈ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ನಿಜ ಆಗುತ್ತವೆಯೇ ಎಂಬುದನ್ನು ಗುರುವಾರದವರೆಗೆ ಜನರು ಚಾತಕಪಕ್ಷಿಯಂತೆ ಕಾಯುವಂತೆ ಮಾಡಿವೆ.