ದೆಹಲಿ(ಎ.16): ಕೇಂದ್ರವು ಪ್ರತಿ ಶನಿವಾರ ಎಲ್‌ಐಸಿಗೆ ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ. ಕೇಂದ್ರವು ಪ್ರತಿ ಶನಿವಾರವನ್ನು ಪಬ್ಲಿಕ್ ಹಾಲಿಡೇ ಎಂದು ಪರಗಣಿಸಿ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ಸಾರ್ವಜನಿಕ ರಜಾದಿನವೆಂದು ಘೋಷಿದೆ.

ಹಣಕಾಸು ಸೇವೆಗಳ ಇಲಾಖೆಯ (ಡಿಎಫ್‌ಎಸ್) ಈ ಇತ್ತೀಚಿನ ಕ್ರಮವನ್ನು ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ 1881 ರ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಕೇಂದ್ರದ ಈ ನಿರ್ಧಾರದಿಂದ ಒಂದು ಲಕ್ಷಕ್ಕೂ ಹೆಚ್ಚು ಎಲ್‌ಐಸಿ ಉದ್ಯೋಗಿಗಳು ಲಾಭ ಪಡೆಯುವ ನಿರೀಕ್ಷೆಯಿದೆ.

ಕೊರೋನಾ ಪಾಸಿಟಿವ್: ಮಾಜಿ CBI ನಿರ್ದೇಶಕ ಇನ್ನಿಲ್ಲ

ಆಗಸ್ಟ್ 1, 2017 ರಿಂದ ನಡೆಯಲಿರುವ ವೇತನ ಪರಿಷ್ಕರಣೆಗಾಗಿ ಎಲ್ಐಸಿ ನೌಕರರು ಕುತೂಹಲದಿಂದ ಕಾಯುತ್ತಿರುವ ಈ ಸಮಯದಲ್ಲಿ ಈ ನಿರ್ಧಾರ ಬಂದಿದೆ. ಎಲ್ಐಸಿ ಆಡಳಿತವು ಈ ಸೋಮವಾರ ನೌಕರರ ಸಂಘಗಳೊಂದಿಗೆ ವಾಸ್ತವ ಸಭೆ ನಡೆಸಿ ವೇತನ ಪರಿಷ್ಕರಣೆಯ ಅಂತಿಮ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.

ಈಗಾಗಲೇ ದೇಶದಲ್ಲಿ ತಿಂಗಳ 2ನೇ ಮತ್ತು 4ನೇ ಶನಿವಾರವನ್ನೂ ಸರ್ಕಾರಿ ಕಚೇರಿ, ಬ್ಯಾಂಕ್‌ಗಳಿಗೆ ರಜಾದಿನವಾಗಿ ಘೋಷಿಸಲಾಗಿದ್ದು, ಇದೀಗ ಎಲ್‌ಐಸಿಗೆ ಬಂಪರ್ ಸಿಕ್ಕಿದೆ.