ಸಾಲವನ್ನು ಸರಿಯಾಗಿ ಕಟ್ಟಿಲ್ಲ ಎನ್ನುವ ಕಾರಣಕ್ಕಾಗಿ ಬ್ಯಾಂಕ್‌ನವರು ಅಟಾಚ್‌ಮೆಂಟ್ ನೋಟಿಸ್ ಕೊಟ್ಟಿದ್ದರು. ಆದರೆ, ಮೀನುಗಾರನ ಅದೃಷ್ಟ ಚೆನ್ನಾಗಿತ್ತು. ಬ್ಯಾಂಕ್‌ನವರು ನೋಟಿಸ್ ಕೊಟ್ಟ ಕೆಲವೇ ಸಮಯದಲ್ಲಿ ಕೇರಳ ಸರ್ಕಾರ ನಡೆಸುವ ಅಕ್ಷಯ ಲಾಟರಿಯಲ್ಲಿ 70 ಲಕ್ಷದ ಜಾಕ್‌ಪಾಟ್ ಹೊಡೆದಿದೆ.
ಕೊಚ್ಚಿ (ಅ.14): ಸಾಲ ಮರುಪಾವತಿಯನ್ನು ಸರಿಯಾಗಿ ಮಾಡಿಲ್ಲ ಎನ್ನುವ ಕಾರಣಕ್ಕೆ ಕೇರಳದಲ್ಲಿ ಮೀನುಗಾರನೊಬ್ಬನಿಗೆ ಬ್ಯಾಂಕ್ ಆಸ್ತಿಯನ್ನು ಅಟ್ಯಾಚ್‌ಮೆಂಟ್ ಮಾಡುವ ನೋಟಿಸ್ ಕಳಿಸಿಕೊಟ್ಟಿತ್ತು. ಆದರೆ, ಅವರ ಅದೃಷ್ಟ ಚೆನ್ನಾಗಿತ್ತು. ಮೀನು ಮಾರಾಟಗಾರ ಈ ನೋಟಿಸ್ ಸ್ವೀಕರಿಸಿದ ಕೆಲವೇ ಗಂಟೆಯಲ್ಲಿ ಕೇರಳ ಸರ್ಕಾರ ನಡೆಸುವ ಅಧಿಕೃತ ಲಾಟರಿಯಲ್ಲಿ 70 ಲಕ್ಷದ ಜಾಕ್‌ಪಾಟ್ ಗೆದ್ದಿದ್ದಾರೆ. ಅದರೊಂದಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅಕ್ಟೋಬರ್ 12 ರಂದು ಪೂಕುಂಜು ಅವರು ಮೀನು ಸಂಗ್ರಹಿಸಲು ತೆರಳುತ್ತಿದ್ದಾಗ ಮೊದಲ ಬಹುಮಾನವಾಗಿ 70 ಲಕ್ಷ ರೂಪಾಯಿಯ ಜಾಕ್‌ಪಾಟ್ ಹೊಂದಿದ್ದ ಲಾಟರಿ ಟಿಕೆಟ್‌ಅನ್ನು ಖರೀದಿ ಮಾಡಿದ್ದರು. ಆದರೆ, ಅದೇ ದಿನ ಮನೆಗೆ ಹಿಂದಿರುಗುವ ವೇಳೆ ಸುಮಾರು 9 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ ಮಾಡಲು ವಿಫಲವಾಗಿದ್ದಕ್ಕಾಗಿ ಬ್ಯಾಂಕ್ ಅವರ ಮನೆಗೆ ಅಟ್ಯಾಚ್‌ಮೆಂಟ್ ನೋಟಿಸ್ ಕಳುಹಿಸಿತ್ತು. "ಬ್ಯಾಂಕ್‌ನಿಂದ ನೋಟಿಸ್ ಬಂದ ನಂತರ ನಾವು ಹತಾಶೆಯಲ್ಲಿದ್ದೆವು. ನಮಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ನಮ್ಮ ಆಸ್ತಿಯನ್ನು ಮಾರಾಟ ಮಾಡಬೇಕೇ ಎಂದು ಯೋಚನೆ ಮಾಡುತ್ತಿದ್ದೆವು' ಎಂದು ಮೀನು ಮಾರಾಟಗಾರನ ಹೆಂಡತಿ ಮಾಧ್ಯಮಗಳಿಗೆ ಹೇಳಿದ್ದಾರೆ.
ಆದರೆ, ಅವರ ಅದೃಷ್ಟ ಬೇರೆಯದೇ ಆಗಿತ್ತು. ಬ್ಯಾಂಕ್‌ನಿಂದ ಅಟ್ಯಾಚ್‌ಮೆಂಟ್ ನೋಟಿಸ್ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಪೂಕಂಜು ಅವರು ಖರೀದಿ ಮಾಡಿದ್ದ ಲಾಟರಿ ಟಿಕೆಟ್‌ಗೆ 70 ಲಕ್ಷ ರೂಪಾಯಿ ಜಾಕ್‌ಪಾಟ್ ದಾಖಲಾಗಿತ್ತು. ಕೆಲ ಕ್ಷಣದ ಹಿಂದೆ ಕುತ್ತಿಗೆ ತನಕ ಬಂದ ಸಾಲದಿಂದ ಕುಗ್ಗಿಹೋಗಿದ್ದ ಕುಟುಂಬ ಕೆಲವೇ ಸಮಯದಲ್ಲಿ ಲಕ್ಷಗಳ ಒಡೆಯರಾಗಿತ್ತು. ಲಾಟರಿ ಗೆಲುವಿನ ಬಳಿಕ ತಮ್ಮ ಯೋಜನೆಗಳ ಕುರಿತು, ಪೂಕುಂಜು ಪತ್ನಿ ಮಾತನಾಡಿದ್ದು, ಮೊದಲು ಎಲ್ಲಾ ಸಾಲಗಳನ್ನು ತೀರಿಸಲು ಬಯಸುವುದಾಗಿ ಹೇಳಿದ್ದಾರೆ. ಆ ನಂತರ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವುದಕ್ಕಾಗಿ ಕೆಲವು ಹಣವನ್ನು ಮೀಸಲಿಡಲಿದ್ದೇವೆ. ಇದರಿಂದ ಅವರು ಜೀವನದಲ್ಲಿ ಉತ್ತಮ ಮಟ್ಟವನ್ನು ತಲುಪುತ್ತಾರೆ ಎಂದು ಹೇಳಿದರು.
40 ವರ್ಷದ ಪೂಕಂಜು ಅವರಿಗೆ ಲಾಟರಿ ತೆಗೆದುಕೊಳ್ಳುವುದು ವಿರಳ ಹವ್ಯಾಸ. ಆದರೆ, ಆ ದಿನ ಅದ್ಯಾವ ಮನಸ್ಸು ಬಂತೋ ಗೊತ್ತಿಲ್ಲ. ಕೇರಳ ಅಕ್ಷಯ ಲಾಟರಿ (akshaya lottery) ಎಕೆ 570 ಲಾಟರಿಯನ್ನು ಖರೀದಿ ಮಾಡಿದ್ದರು. ಅದೃಷ್ಟಕ್ಕೆ ಅವರಿಗೇ ಜಾಕ್‌ಪಾಟ್ ಹೊಡೆದಿದೆ. ತಮ್ಮ ದ್ವಿಚಕ್ರ ವಾಹನದಲ್ಲಿ ಮೀನು ಮಾರಾಟ (Fish) ಮಾಡುವ ಮೂಲಕ ದಿನ ಸಾಗಿಸುವ ಪೂಕಂಜು ಕಳೆದ ಬುಧವಾರ ಎಂದಿನಂತೆ ಮನೆಗೆ ಬಂದಾಗ ಮನೆಗೆ ನೋಟಿಸ್ ಬಂದಿರುವುದು ಹಾಗೂ ಲಾಟರಿಗೆ 70 ಲಕ್ಷ ಜಾಕ್‌ಪಾಟ್ ಹೊಡೆದಿರುವ ವಿಚಾರ ಗೊತ್ತಾಗಿದೆ. ಮನೆ ಕಟ್ಟುವ ಕಾರಣಕ್ಕಾಗಿ ಪಡೆದುಕೊಂಡಿದ್ದ 9 ಲಕ್ಷ ರೂಪಾಯಿ ಸಾಲವನ್ನು ಮರುಪಾವತಿ (Loan Repayment) ಮಾಡದ ಕಾರಣಕ್ಕಾಗಿ ಅವರಿಗೆ ಬ್ಯಾಂಕ್‌ನವರು ಅಟ್ಯಾಚ್‌ಮೆಂಟ್ (Bank Attachment Notice) ನೋಟಿಸ್ ಕಳಿಸಿದ್ದರು. ಇದನ್ನು ನೋಡಿ ಪೂಕುಂಜು (Pookunju) ಆಘಾತಗೊಂಡಿದ್ದರು.
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನಲ್ಲಿ ಕೇರಳದ ಲಾಟರಿ ಮಾರಾಟ
ಇನ್ನೇನು ಮನೆಯನ್ನು ಕಳೆದುಕೊಳ್ಳುತ್ತೇನೆ ಎನ್ನುವ ಆತಂಕದಲ್ಲಿದ್ದಾಗಲೇ ಅಚ್ಚರಿಯ ಸುದ್ದಿ ಅವರಿಗೆ ತಿಳಿದುಬಂದಿದೆ. ಅವರ ಸಹೋದರ ಕರೆ ಮಾಡಿ ಅಕ್ಷಯ ಎಕೆ 570 ಲಾಟರಿಯಲ್ಲಿ ಜಾಕ್‌ಪಾಟ್ ಹೊಡೆದಿರುವ ಮಾಹಿತಿಯನ್ನು ತಿಳಿಸಿದಾಗ ಪೂಕುಂಜು ಅವರ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಕೇರಳದ ಆಟೋ ಡೈವರ್‌ಗೆ ಬಂಪರ್ ಲಾಟರಿ: ದೇಶ ಬಿಡಲು ನಿರ್ಧರಿಸಿದವನಿಗೆ ಒಲಿದ ಲಕ್ಷ್ಮಿ
ಜುಲೈನಲ್ಲಿ ಆಗಿತ್ತು ಇಂಥದ್ದೇ ಘಟನೆ: ಜುಲೈನಲ್ಲಿ ಕೇರಳದಲ್ಲಿ ಸಾಲದ ಸುಳಿಗೆ ಸಿಲುಕಿದ ವ್ಯಕ್ತಿಯೊಬ್ಬರು ಸಾಲವನ್ನು ತೀರಿಸಲು ತನ್ನ ಮನೆಯನ್ನು ಮಾರಾಟ ಮಾಡುವ ಗಂಟೆಗಳ ಮೊದಲು 1 ಕೋಟಿ ರೂಪಾಯಿಗಳ ಲಾಟರಿ ವಿಜೇತರಾಗಿದ್ದು ಸುದ್ದಿಯಾಗಿತ್ತು. ಉತ್ತರ ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮೂಲದ ಮೊಹಮ್ಮದ್ ಬಾವ ಅವರು ತಮ್ಮ 45 ಲಕ್ಷ ಸಾಲವನ್ನು ತೀರಿಸಲು ಹೊಸದಾಗಿ ನಿರ್ಮಿಸಿದ ಮನೆಯನ್ನು ಮಾರಾಟಕ್ಕೆ ಇಟ್ಟಿದ್ದರು. ಆದರೆ ಸಂಕಷ್ಟದ ಮಾರಾಟವಾಗಿದ್ದರಿಂದ ಎಂಟು ತಿಂಗಳ ಹಿಂದೆ ನಿರ್ಮಿಸಿದ 2,000 ಚದರ ಅಡಿಯ ಮನೆಯನ್ನು 40 ಲಕ್ಷ ರೂ.ಗೆ ಮಾರಾಟ ಮಾಡಬೇಕಾಯಿತು. ಕನಸಿನ ಮನೆಯನ್ನು ಮಾರಾಟ ಮಾಡಿ ಕುಟುಂಬ ಸಮೇತ ಬಾಡಿಗೆ ಮನೆಗೆ ತೆರಳಲು ಮುಂದಾಗಿದ್ದರು. ಮನೆಯ ಖರೀದಿದಾರರು ಜುಲೈ 25 ರಂದು ಮನೆಗೆ ಮುಂಗಡವನ್ನು ಪಾವತಿಸಲು ಒಪ್ಪಿಕೊಂಡಿದ್ದರು, ಆದರೆ ಒಪ್ಪಂದಕ್ಕೆ ಗಂಟೆಗಳ ಮೊದಲು ಬಾವಾ ಅವರು ಕೇರಳ ಸರ್ಕಾರ ನಡೆಸುತ್ತಿರುವ 1 ಕೋಟಿ ರೂ. ಫಿಫ್ಟಿ-ಫಿಫ್ಟಿ ಲಾಟರಿಯಲ್ಲಿ ವಿಜೇತರಾಗಿದ್ದರು.
