ನವದೆಹಲಿ (ಅ. 16): ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ, ಮಂಗಳವಾರ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಬೋಟ್‌ ಅನ್ನು ಯಶಸ್ವಿಯಾಗಿ ಬಳಕೆ ಮಾಡಿದೆ. ಈ ಮೂಲಕ ಟ್ಯಾಕ್ಸಿಬೋಟ್‌ ಬಳಕೆ ಮಾಡಿದ ವಿಶ್ವದ ಮೊದಲ ವಿಮಾನಯಾನ ಸಂಸ್ಥೆಗೆ ಎಂಬ ಹಿರಿಮೆಗೆ ಪಾತ್ರವಾಗಿದೆ.

ಕ್ಷಿಪಣಿ ದಾಳಿಯಿಂದಲೂ ಮೋದಿ ರಕ್ಷಿಸುವ ವಿಶೇಷ ವಿಮಾನ ಮೂಮದಿನ ವರ್ಷ ಭಾರತಕ್ಕೆ!

ವಿಮಾನಗಳು ರನ್‌ವೇನಲ್ಲಿ ಇಳಿದ ಬಳಿಕ ಅಲ್ಲಿಂದ ಪಾರ್ಕಿಂಗ್‌ ಜಾಗಕ್ಕೆ ಬರಲು, ಅಥವಾ ಪಾರ್ಕಿಂಗ್‌ ಜಾಗದಿಂದ ರನ್‌ವೇ ಬರಲು ಸ್ವಯಂ ಎಂಜಿನ್‌ ಚಾಲು ಮಾಡಿಕೊಂಡು ಬರುತ್ತವೆ. ಆದರೆ ಟ್ಯಾಕ್ಸಿಬೋಟ್‌ ಎಂಬ ಸೆಮಿ ರೋಬೋಟಿಕ್‌ ಏರ್‌ಕ್ರಾಪ್ಟ್‌ ಟ್ರ್ಯಾಕ್ಟರ್‌ ಈ ಕೆಲಸವನ್ನು ಬುಧವಾರ ಯಶಸ್ವಿಯಾಗಿ ನಿರ್ವಹಿಸಿತ್ತು.

ತೇಜಸ್ ವಿಶೇಷತೆ: ರೋಚಕವಾಗಿದೆ ನಿರ್ಮಾಣದ ಕತೆ!

ವಿಮಾನಗಳ ಎಂಜಿನ್‌ ಚಾಲೂ ಆದಾಗ ಆಗುವ ವೆಚ್ಚಕ್ಕೆ ಹೋಲಿಸಿದರೆ ಟ್ಯಾಕ್ಸಿಬೋಟ್‌ ಮಾಡುವ ಅದೇ ಕೆಲಸಕ್ಕೆ ಶೇ.85ರಷ್ಟುಕಡಿಮೆ ವೆಚ್ಚ ತಗಲುತ್ತದೆ. ಪರಿಸರ ಸ್ನೇಹಿಯೂ ಹೌದು. ಫ್ರಾನ್ಸ್‌ ಕಂಪನಿ ಸಹಯೋಗದೊಂದಿಗೆ ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರೀಸ್‌ ಸಂಸ್ಥೆ ಅಭಿವೃದ್ಧಿಪಡಿಸಿದ ಸೆಮಿ ರೊಬೊಟಿಕ್‌ ಏರ್‌ಕ್ರಾಫ್ಟ್‌ ಟ್ರಾಕ್ಟರ್‌(ಟ್ಯಾಕ್ಸಿಬೋಟ್‌) ಪೈಲಟ್‌ ನಿಯಂತ್ರಿತವಾಗಿದೆ.