ಕೇರಳದಲ್ಲಿ ದೇಶದ ಮೊದಲ ಸರ್ಕಾರಿ ಒಟಿಟಿ ಉದ್ಘಾಟನೆ
ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸರ್ಕಾರಿ ಪ್ರಾಯೋಜಿತ ಒಟಿಟಿ ವೇದಿಕೆ ‘ಸಿಸ್ಪೇಸ್’ ಅನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಉದ್ಘಾಟಿಸಿದರು.
ತಿರುವನಂತಪುರ: ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸರ್ಕಾರಿ ಪ್ರಾಯೋಜಿತ ಒಟಿಟಿ ವೇದಿಕೆ ‘ಸಿಸ್ಪೇಸ್’ ಅನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ವಿಜಯನ್ ‘ಒಟಿಟಿ ವೇದಿಕೆಗಳು ಕೇವಲ ಲಾಭವನ್ನೇ ಮುಕ್ಯ ಗುರಿಯಾಗಿಸಿಕೊಂಡಿರುವ ಕಾಲದಲ್ಲಿ ಮಲಯಾಳಂ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಸಲುವಾಗಿ ಸರ್ಕಾರದ ವತಿಯಿಂದಲೇ ಒಟಿಟಿ ಮಾಧ್ಯಮ ಅನಾವರಣ ಮಾಡಲಾಗಿದೆ’ ಎಂದರು.
ಹೇಗೆ ಕಾರ್ಯಾಚರಣೆ?
ಸಿಸ್ಪೇಸ್ ಒಟಿಟಿ ವೇದಿಕೆಯಲ್ಲಿ ಕೇವಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮತ್ತು ಪ್ರಶಸ್ತಿ ವಿಜೇತ ಚಿತ್ರಗಳನ್ನು ಮಾತ್ರ ಖರೀದಿಸಲಾಗುತ್ತದೆ. ಇದಕ್ಕಾಗಿ 60 ಮಂದಿಯ ಆಯ್ಕೆ ಸಮಿತಿಯನ್ನು ಸರ್ಕಾರ ರಚಿಸಿದ್ದು, ಕಥೆಯ ತಿರುಳನ್ನು ಆಧರಿಸಿ ಚಿತ್ರಗಳನ್ನು ಆರಿಸಲಾಗುತ್ತದೆ. ಇದಕ್ಕಾಗಿ ಗ್ರಾಹಕರಿಂದ ಚಲನಚಿತ್ರ ವೀಕ್ಷಣೆಗೆ ₹75 ವಂತಿಗೆ ನಿಗದಿಪಡಿಸಲಾಗಿದೆ. ಮೊದಲ ಹಂತದಲ್ಲಿ 42 ಚಿತ್ರಗಳನ್ನು ಆಯ್ಕೆ ಮಾಡಲಾಗಿದ್ದು, ಪ್ಲೇಸ್ಟೋರ್‌ನಿಂದ ಸಿಸ್ಪೇಸ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಸೂಕ್ತ ವಂತಿಗೆ ಪಾವತಿಸಿ ಚಿತ್ರ ವೀಕ್ಷಣೆ ಮಾಡಬಹುದುದು.
'ದೃಶ್ಯಂ' ರೀತಿ ಅದ್ಭುತ ಟ್ವಿಸ್ಟ್ ಇರೋ ಥ್ರಿಲ್ಲರ್ ಮೂವೀಸ್ ಇಷ್ಟಾನಾ? ಒಟಿಟಿಯಲ್ಲಿ ಈ 8 ಚಿತ್ರ ಮಿಸ್ ಮಾಡಬೇಡಿ!
ಫೈಟರ್ ಚಿತ್ರ ಒಟಿಟಿ ಬಿಡುಗಡೆ ದಿನಾಂಕ; ಶಾಕಿಂಗ್ ಮೊತ್ತಕ್ಕೆ ಚಿತ್ರ ಖರೀದಿ ಮಾಡಿದ್ದು ಯಾವ ವೇದಿಕೆ?