ಜೈಪುರ (ಏ.23) :  ಯಾವುದೇ ಕುಟುಂಬದಲ್ಲಿ ಮಗುವಾದರೆ ಹಿತೈಷಿಗಳಿಗೆ ಸಿಹಿ ತಿನಿಸು ಅಥವಾ ಊರಿಗೆಲ್ಲಾ ಊಟ ಹಾಕ್ತಾರೆ. ಆದರೆ ರಾಜಸ್ಥಾನದ ಕುಟುಂಬವೊಂದು ಹೆಣ್ಣು ಮಗು ಹುಟ್ಟಿದ ಕಾರಣಕ್ಕೆ ಇಡೀ ಊರಿಗೆ ಊರೇ ಸಂಭ್ರಮದಲ್ಲಿ ಮುಳುಗಿದೆ ಎಂದರೆ ನಂಬಲೇಬೇಕು.

ಹೌದು 35 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದ ಕಾರಣಕ್ಕೆ ತಾಯಿ ತವರು ಮನೆಯಲ್ಲಿ ಜನಿಸಿದ್ದ ಹೆಣ್ಣು ಮಗುವಾದ ರಿಯಾಳನ್ನು ರಾಮನವಮಿಯಂದು ಗ್ರಾಮಕ್ಕೆ ಕರೆಸಿಕೊಳ್ಳಲಾಯಿತು.

ಹೆಣ್ಣು ಮಗು ಜನಿಸಿದ್ದಕ್ಕೆ ಮಹಿಳೆಯನ್ನ ಮನೆಯಿಂದ ಹೊರ ಹಾಕಿದ ಗಂಡ

ಮಾರ್ಚ್ 3 ರಂದು ಹನುಮಾನ್ ಪ್ರಜಾಪತಿ ಹಾಗೂ ಚುಕ್ಕಿ ದೇವಿ ಎಂಬ ದಂಪತಿಗೆ ಹೆಣ್ಣು ಮಗು ರಿಯಾ ಜನಿಸಿದ್ದು, ಅದ್ದೂರಿಯಾಗಿ ಆಕೆಯನ್ನು ಆಕೆಯ ತಮದೆಯ ಊರು ಹರ್ಸೋಲವ್ ಹಳ್ಳಿಗೆ ಕರೆತರಲಾಯಿತು. 

 ಇದಕ್ಕಾಗಿ ಬರೋಬ್ಬರಿ 4.5 ಲಕ್ಷ ರು. ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲಿ ಬರಮಾಡಿಕೊಳ್ಳಲಾಗಿದೆ. ಅಲ್ಲದೆ ಊರಲ್ಲೆಲ್ಲಾ ಭಜನೆ ಮಾಡಿ, ಪೂಜೆ ನಡೆಸಿ ಸಂಭ್ರಮಿಸಲಾಯಿತು. ಅನೇಕ ವರ್ಷಗಳ ಕಾಲ ಹೆಣ್ಣು ಮಕ್ಕಳೇ ಜನಿಸಿದ ಕುಟುಂಬದಲ್ಲಿ ಭಾರೀ ಸಂಭ್ರಮ ಮನೆ ಮಾಡಿತ್ತು.