ಗಂಡ ಹಾಗೂ ಅವರ ಮನೆಯವರ ಮೇಲೆ ದೂರು ದಾಖಲಿಸಿದ ಮಹಿಳೆ| ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರಿಂದ ಮಹಿಳೆ ಮೇಲೆ ಹಲ್ಲೆ| ಈ ಸಂಬಂಧ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು|  

ಹುಬ್ಬಳ್ಳಿ(ಜ.26): ಎರಡನೇ ಬಾರಿ ಹೆಣ್ಣು ಮಗು ಜನಿಸಿದ್ದಕ್ಕೆ ಇಲ್ಲಿನ ಮದನಿ ಕಾಲನಿಯ ಮಹಿಳೆಯನ್ನು ರೈಲ್ವೆ ಇಲಾಖೆ ನೌಕರನಾಗಿರುವ ಪತಿ ಮನೆಯಿಂದ ಹೊರದಬ್ಬಿರುವ ಘಟನೆ ಕಳೆದ ವರ್ಷ ನ. 8ರಂದು ನಡೆದಿದ್ದು, ತಡವಾಗಿ ಇಲ್ಲಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಯ್ಯದ್‌ ಜಮೀರ್‌ ಖಾದರಸಾಬ್‌ (33) ಹಾಗೂ ಮನೆಯವರ ಮೇಲೆ ಮಹಿಳೆ ದೂರು ದಾಖಲಿಸಿದ್ದಾರೆ. 

ವಿಜಯಪುರ; ಕುಡುಕರ ಅಡ್ಡೆಯಾದ ಐಬಿ, ಗುತ್ತಿಗೆದಾರಂದೆ ಹವಾ!

ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರಿಂದ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ. ಅಲ್ಲದೆ, ಹೆಣ್ಣು ಮಗುವಿನ ಖರ್ಚಿಗೆ ತಂದೆ ಮನೆಯಿಂದ 9 ಲಕ್ಷ ತರಬೇಕು. ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿ ಮನೆಯಿಂದ ಹೊರಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಮಹಿಳಾ ಠಾಣೆ ಪೊಲೀಸರು ಕಾನೂನು ಕ್ರಮ ಜರುಗಿಸುತ್ತಿದ್ದಾರೆ.