ನವದೆಹಲಿ (ಅ.31): ಗುಜರಾತಿನ ಸಬರ್‌ಮತಿ ನದಿ ತೀರದಿಂದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಸೀಪ್ಲೇನ್‌ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಲಿದ್ದಾರೆ. ಸರ್ದಾರ್‌ ಪಟೇಲ್‌ ಅವರ 146ನೇ ಜನ್ಮ ದಿನದ ನಿಮಿತ್ತ ಈ ಸೇವೆಯನ್ನು ಆರಂಭಿಸಲಾಗುತ್ತಿದೆ.

ಸೀಪ್ಲೇನ್‌ ವಿಮಾನ ಅಹಮದಾಬಾದ್‌ನ ನದಿ ತೀರದಿಂದ 10.15 ನಿಮಿಷಕ್ಕೆ ಹಾರಾಟ ಕೈಗೊಳ್ಳಲಿದ್ದು, 10.45ಕ್ಕೆ ಕೆವಾಡಿಯಾ ತಲುಪಲಿದೆ. ಕೆವಾಡಿಯಾದ ಸರ್ದಾರ್‌ ಸರೋವರ ಡ್ಯಾಮ್‌ನ ಹಿನ್ನೀರಿನಲ್ಲಿ ವಿಮಾನ ಇಳಿಯಲಿದೆ. ಮಾಲ್ಡೀವ್‌್ಸನ ಸೀಪ್ಲೇನ್‌ ಸರ್ದಾರ್‌ ಪ್ರತಿಮೆ ಇರುವ ಕೆವಾಡಿಯಾಕ್ಕೆ ಈಗಾಗಲೇ ಆಗಮಿಸಿದ್ದು, ಮುಂದಿನ ಕೆಲವು ದಿನಗಳಕಾಲ ಪರೀಕ್ಷಾರ್ಥ ಹಾರಾಟ ನಡೆಸಲಿದೆ. ಬಳಿಕ ಸಾರ್ವಜನಿಕ ಸೇವೆಗೆ ಬಳಕೆಗೆ ಲಭ್ಯ ಆಗಲಿದೆ ಎಂದು ಸ್ಪೈಸ್‌ ಶೆಟಲ್‌ ತಿಳಿಸಿದೆ.

300 ಮೊಸಳೆ ಸ್ಥಳಾಂತರವೇಕೆ?

ಏನಿದು ಸೀಪ್ಲೇನ್‌?
ಇವು ಲಘು ವಿಮಾನಗಳಾಗಿದ್ದು, ನೀರು ಮತ್ತು ನೆಲದ ಮೇಲಿಂದ ಹಾರಾಟ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನದಲ್ಲಿ 19 ಆಸನಗಳು ಇದ್ದು, 14 ಮಂದಿ ಪ್ರಯಾಣಿಕರಿಗೆ ಅವಕಾಶ ಕಲ್ಪಿಸಲಾಗುವುದು.

ದರ ಎಷ್ಟು?
ಸಬರ್‌ಮತಿ ರಿವರ್‌ಫ್ರಂಟ್‌ ಪ್ರದೇಶದಿಂದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಪ್ರತಿಮೆಗೆ 205 ಕಿ.ಮೀ. ದೂರ ಇದ್ದು, ಒಬ್ಬ ಪ್ರಯಾಣಿಕರಿಗೆ ಟಿಕೆಟ್‌ ದರ ಟಿಕೆಟ್‌ ದರ ಅಂದಾಜು 4,800 ರು. ಇರಲಿದೆ. ಪ್ರತಿ ದಿನ ವಿಮಾನ ಅಹಮದಾಬಾದ್‌ನಿಂದ ಕೆವಾಡಿಯಾಕ್ಕೆ 4 ಬಾರಿ ಮತ್ತು ಕೆವಾಡಿಯಿಂದ ಅಹಮದಾಬಾದ್‌ಗೆ 4 ಬಾರಿ ಸಂಚಾರ ಕೈಗೊಳ್ಳಲಿದೆ.

 

 

ಕೇರಳ ಆರಂಭಿಸಿತ್ತು, ಹಾರಲಿಲ್ಲ!
2013ರಲ್ಲಿ ಕೇರಳ ಸರ್ಕಾರ ದೇಶದ ಮೊದಲ ಸೀ ಪ್ಲೇನ್‌ಗೆ ಚಾಲನೆ ನೀಡಿತ್ತು. ಆದರೆ ಮೀನುಗಾರರು ಹಾಗೂ ಎಡಪಕ್ಷಗಳ ವಿರೋಧದ ಹಿನ್ನೆಲೆಯಲ್ಲಿ ಉದ್ಘಾಟನಾ ಹಾರಾಟ ನಡೆಸಿದ್ದು ಬಿಟ್ಟರೆ, ಪ್ರಯಾಣಿಕರಿಗೆ ಸೇವೆ ಸಿಗಲಿಲ್