ಹರಿಯಾಣ, ಪಂಜಾಬ್ ಸೇರಿ ಇತರ ರಾಜ್ಯಗಳ ಸಾವಿರಾರು ರೈತರು ದೆಹಲಿ ಗಡಿಯಲ್ಲಿ ಪ್ರತಿಭನೆ ನಡೆಸುತ್ತಿದ್ದಾರೆ. ಅನಿರ್ದಿಷ್ಆವಧಿಯ ಪ್ರತಿಭಟನೆ ನಡೆಸುತ್ತಿರುವ ರೈತರು ನ್ಯೂ ಫಾರ್ಮ್ ಬಿಲ್‌ಗಳನ್ನು ವಿರೋಧಿಸುತ್ತಿದ್ದಾರೆ. ಪ್ರತಿಭಟನೆ ನಡೆಸುತ್ತಿರುವ ರೈತರ ಲೈಫ್ ಹೇಗಿದೆ ಗೊತ್ತಾ...? ಇದೇ ವಿಚಾರವಾಗಿ ಪ್ರತಿಭಟನೆ ವಿಷಯ ಇದೀಗ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ.

ಕನಿಷ್ಢ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸುತ್ತಿರುವ ರೈತರ ಪ್ರತಿಭಟನಾ ಸ್ಥಳದ ಜೀವನ ಭಿನ್ನವಾಗಿದೆ. ಪ್ರತಿಭಟನಾಕಾರರು ಊರು, ಮನೆ ಬಿಟ್ಟು ದೆಹಲಿಗೆ ಬಂದಿರುವಾಗ ಅವರ ಊಟ, ನಿದ್ದೆಯ ಕಥೆ ಏನು..?

ಕೃಷಿ ಕಾಯ್ದೆ ರದ್ದು ಮಾಡಿದರೆ ಪ್ರತಿಭಟನೆ: ಹರ್ಯಾಣ ರೈತರು!

ದೆಹಲಿಯ ಡಿಸೆಂಬರ್ ಚಳಿ ಮಧ್ಯೆ ಕಷ್ಟಪಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ ರೈತರು. ಪ್ರತಿಭಟನಾಕಾರರಿಗೆ ರೊಟ್ಟಿ ಮಾಡುವ ಯಂತ್ರವನ್ನು ಒದಗಿಸಲಾಗಿದೆ. ಒಂದು ಗಂಟೆಯಲ್ಲಿ ಈ ಮೆಷಿನ್ 1500ರಿಂದ 2000 ರೊಟ್ಟಿಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ.

ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರೇ ಭಾಗಿಯಾಗಿರುವುದರಿಂದ ಅವರಿಗೆ ಆರೋಗ್ಯ ಸಮಸ್ಯೆಯಾಗದಂತೆ ಅಂತಾರಾಷ್ಟ್ರೀಯ ಎನ್‌ಜಿಒ ಖಲ್ಸಾ ಫೂಟ್ ಮಸಾಜರ್ ಕೂಡಾ ಅಳವಡಿಸಿದೆ. ಸುಮಾರು 25 ಮೆಷಿನ್‌ಗಳನ್ನು ಅಳವಡಿಸಲಾಗಿದ್ದು, 10 ನಿಮಿಷ ರೈತರಿಗೆ ಫೂಟ್ ಮಸಾಜ್‌ ಸೇವೆಯೂ ಇದೆ.

ಟೆಸ್ಟ್‌ಗೆ ಒಳಗಾಗಲು ನಕಾರ, ಕೊರೋನಾದಿಂದ ರೈತರ ಹೋರಾಟ ದುರ್ಬಲ ಭೀತಿ!

ಟೀ, ಸ್ನ್ಯಾಕ್ಸ್ ಮಾತ್ರವಲ್ಲದೆ, ಬಾರ್ಮಿ ಮತ್ತು ಬೋಪಾಲನ್ ಗ್ರಾಮದ ಭಾರತೀಯ ಕಿಸಾನ್ ಯೂನಿಯನ್ ಪಿಝಾ ಹಂಚಿತ್ತು. ಬಹಳಷ್ಟು ಜನರು ರೈತರಿಗೆ ನೆರವಾಗುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಇದೆಂಥಾ ಪ್ರತಿಭಟನೆಗೆ ಬಂದು ಲ್ಯಾವಿಷ್ ಲೈಫ್ ಎಂಜಾಯ್ ಮಾಡ್ತಿದ್ದಾರೆ ಎಂದು ಟೀಕಿಸಿದ್ದಾರೆ. ನಿಜವಾದ ರೈತರು ಗದ್ದೆಯಲ್ಲಿ ಕೆಲಸ ಮಾಡುತ್ತಾರೆ ಎಂದಿದ್ದಾರೆ.