ಪಂಜಾಬ್‌ನ ಬಥಿಂಡಾದಲ್ಲಿರುವ ಮಿಲಿಟರಿ ಸ್ಟೇಷನ್‌ನಲ್ಲಿ  ಇಂದು ಮುಂಜಾನೆ ಸಂಭವಿಸಿದ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ.  

ಬತಿಂಡಾ: ಪಂಜಾಬ್‌ನ ಬಥಿಂಡಾದಲ್ಲಿರುವ ಮಿಲಿಟರಿ ಸ್ಟೇಷನ್‌ನಲ್ಲಿ ಇಂದು ಮುಂಜಾನೆ ಸಂಭವಿಸಿದ ಗುಂಡಿನ ದಾಳಿಗೆ ನಾಲ್ವರು ಬಲಿಯಾಗಿದ್ದಾರೆ. ಘಟನಾ ಸ್ಥಳವನ್ನು ಈಗ ಸೇನೆ ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆ ನಡೆಯುತ್ತಿದೆ. ತುರ್ತು ರಕ್ಷಣಾ ತಂಡಗಳು ಸ್ಥಳದಲ್ಲಿ ಶೋಧ ನಡೆಸುತ್ತಿವೆ. ಎಂದ ಸೇನೆಯ ನೈಋತ್ಯ ಕಾಮಂಡ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಬಥಿಂಡಾದಲ್ಲಿ ಮುಂಜಾನೆ 4.30 ರ ಸುಮಾರಿಗೆ ಈ ಗುಂಡಿನ ದಾಳಿ ನಡೆದಿದೆ. ಕೂಡಲೇ ಸ್ಟೇಷನ್‌ನ ಕ್ಷಿಪ್ರವಾಗಿ ಪ್ರತಿಕ್ರಿಯಿಸುವ ತಂಡಗಳು ಕಾರ್ಯಾಚರಣೆಗೆ ಇಳಿದಿದ್ದು, ಕೂಡಲೇ ಸ್ಥಳವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಾಲ್ವರ ಸಾವಾದ ಬಗ್ಗೆ ವರದಿಯಾಗಿದೆ ಹೆಚ್ಚಿನ ವಿವರಗಳನ್ನು ಎದುರು ನೋಡುತ್ತಿದ್ದೇವೆ ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 

ಬಥಿಂಡಾದ (Bathinda) ಸೀನಿಯರ್ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಜಿಎಸ್ ಖುರಾನಾ (GS Khurana) ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಘಟನೆ ನಂತರ ಮಿಲಿಟರಿ ಪೊಲೀಸ್ ಸ್ಟೇಷನ್ (Bathinda Military Station) ಹೊರಭಾಗದಲ್ಲಿ ಪೊಲೀಸ್ ತಂಡಗಳು ಕಾಯುತ್ತಿದ್ದು, ಅವರ ಪ್ರವೇಶವನ್ನು ಸೇನೆ ಇದುವರೆಗೆ ಖಚಿತಪಡಿಸಿಲ್ಲ. ಅಲ್ಲದೇ ಇದೊಂದು ಭಯೋತ್ಪಾದಕ ಕೃತ್ಯ ಅಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದೊಂದು ಆಂತರಿಕ ವಿಚಾರದಿಂದ ಉಂಟಾದ ಘಟನೆ ಎಂದು ಅವರು ಹೇಳಿದ್ದಾರೆ. 

Scroll to load tweet…