ಏಕಾಏಕಿ IPS ಅಧಿಕಾರಿ ಮನೆಗೆ ಧಾವಿಸಿದ ಅಗ್ನಿಶಾಮಕ ದಳ, ಕಾರಣ ಕೇಳಿದರೆ ಅಚ್ಚರಿ ಖಚಿತ!

ಸೈರನ್ ಮೊಳಗಿಸುತ್ತಾ ಅಗ್ನಿಶಾಮಕ ದಳ ವೇಗವಾಗಿ ಐಪಿಎಸ್ ಅಧಿಕಾರಿ ಮನೆಗೆ ಧಾವಿಸಿದೆ. ರಸ್ತೆಯಲ್ಲಿ ಅಗ್ನಿಶಾಮಕ ದಳದ ವೇಗ ನೋಡಿದ ಜನ ಗಾಬರಿಗೊಂಡಿದ್ದಾರೆ. ಐಪಿಎಸ್ ಅಧಿಕಾರಿಗೆ ಆಗಮಿಸಿದ ಅಗ್ನಿಶಾಮಕ ದಳ ಹಾಗೂ ಸಿಬ್ಬಂದಿ ಮಾಡಿದ್ದೇನು?
 

Fire tender rush to IPS office house video spark outrage over water supply allegations ckm

ಡೆಹ್ರಡೂನ್(ಆ.02) ಬೆಂಕಿ ಸೇರಿದಂತೆ ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವುದು, ರಕ್ಷಣಾ ಕಾರ್ಯದಲ್ಲಿ ತೊಡಗಿ ಜೀವಗಳನ್ನು ಉಳಿಸುತ್ತದೆ, ಅನಾಹುತಗಳನ್ನು ತಡೆಯುತ್ತದೆ. ದಾರಿಯಲ್ಲಿ ಸೈರನ್ ಮೊಳಗಿಸುತ್ತಾ ಅಗ್ನಿಶಾಮಕ ದಳ ಸಾಗುತ್ತಿದ್ದರೆ ಎಲ್ಲರೂ ದಾರಿ ಬಿಡುತ್ತಾರೆ. ಹೀಗೆ ದಾರಿಯಲ್ಲಿ ಅತೀ ವೇಗವಾಗಿ ಸಾಗಿ ಬಂದ ಅಗ್ನಿಶಾಮಕ ದಳಕ್ಕೆ ಜನ ದಾರಿ ಬಿಟ್ಟಿದ್ದರು. ಈ ಅಗ್ನಿಶಾಮಕ ವೇಗವಾಗಿ ಸಾಗಿ ಐಪಿಎಸ್ ಅಧಿಕಾರಿ ಮನೆ ಬಳಿ ನಿಂತಿದೆ. ಅಧಿಕಾರಿ ಮನೆಯಲ್ಲಿ ಬಂಕಿ ಹೊತ್ತಿಕೊಂಡಿರಬೇಕು ಅನ್ನೋದು ಎಲ್ಲರ ಆತಂಕವಾಗಿತ್ತು. ಆದರೆ ಎಲ್ಲೂ ಹೊಗೆ ಇಲ್ಲ, ಬೆಂಕಿ ಜ್ವಾಲೆಗಳಿಲ್ಲ, ಇತ್ತ ಆತಂಕ, ದುಗುಡ ದುಮ್ಮಾನಗಳಿಲ್ಲ. ಮತ್ಯಾಕೆ ಈ ಅಗ್ನಿಶಾಮಕ? ಕಾರಣ ಇಷ್ಟೇ, ಐಪಿಎಸ್ ಅಧಿಕಾರಿ ಮನೆಯ ಟ್ಯಾಂಕಿ ನೀರು ಖಾಲಿಯಾಗಿತ್ತು. ಇದಕ್ಕೆ ಈ ಅಧಿಕಾರಿ ಅಗ್ನಿಶಾಮಕ ದಳವನ್ನೇ ಕರೆಸಿ ನೀರು ತುಂಬಿಸಲಾಗಿದೆ ಅನ್ನೋ ಆಕ್ರೋಶ ಜೋರಾಗಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟೀಕೆಗಳು ವ್ಯಕ್ತವಾಗಿದೆ.

ಉತ್ತರಖಂಡದ ಡೆಹ್ರಡೂನ್‌ನಲ್ಲಿ ಈ ಘಟನೆ ನಡೆದಿದೆ. ಐಪಿಎಸ್ ಅಧಿಕಾರಿ ಅರ್ಚನಾ ತ್ಯಾಗಿ ಮನೆಗೆ ನೀರು ತುಂಬಿಸಲು ಅಗ್ನಿಶಾಮಕ ಕರೆಸಿದ್ದಾರೆ ಅನ್ನೋ ಘಟನೆ ಇದೀಗ ದೇಶಾದ್ಯಂತ ಸದ್ದು ಮಾಡುತ್ತಿದೆ. ಉತ್ತರಖಂಡದ ಈಸ್ಟ್ ಕ್ಯಾನೆಲ್ ರಸ್ತೆಯಲ್ಲಿರುವ ಅರ್ಚನಾ ತ್ಯಾಗಿ ಮನೆಯಲ್ಲಿ ನೀರು ಖಾಲಿಯಾಗಿದೆ ಅನ್ನೋ ಕಾರಣಕ್ಕೆ ತುರ್ತು ಸಂದರ್ಭದಲ್ಲಿ ಬಳಸುವ ಅಗ್ನಿಶಾಮಕ ದಳವನ್ನೇ ಕರೆಸಿ ನೀರು ತುಂಬಿಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. 

ರಜೆ ಕೊಡಿ ಪ್ಲೀಸ್ ತಾಯಿ ಕೊಂದೇ ಬಿಡುತ್ತಾರೆ, ಬಾಸ್‌ಗೆ ಮೆಸೇಜ್ ಹಾಕಿದ ಉದ್ಯೋಗಿಗೆ ಸಿಕ್ಕ ಉತ್ತರವೇನು?

ಖುರುಪೆಂಚ್ ಅನ್ನೋ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಐಪಿಎಸ್ ಅಧಿಕಾರಿಯ ಕೌಂಪೌಂಡ್ ಮೇಲೆ ಹೆಸರಿನ ಬೋರ್ಡ್ ಸ್ಪಷ್ಟವಾಗಿ ಕಾಣುತ್ತಿದೆ. ಅಗ್ನಿಶಾಮಕ ದಳ ಅಧಿಕಾರಿ ಮನೆ ಮುಂದೆ ನಿಲ್ಲಿಸಿ ನೀರಿನ ಪೈಪ್‌ನ್ನು ಅಧಿಕಾರಿಯ ನೀರಿನ ಟ್ಯಾಂಕ್‌ಗೆ ಫಿಕ್ಸ್ ಮಾಡಿದ್ದಾರೆ ಬಳಿಕ ನೀರು ಪೂರೈಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

 

 

ಆಕ್ರೋಶ ಹೆಚ್ಚಾಗುತ್ತಿದ್ದಂತೆ ಈ ಘಟನೆ ಕುರಿತು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಮನೆಯಲ್ಲಿ ಎಲ್‌ಪಿಜಿ ಗ್ಯಾಸ್ ಲೀಕೇಜ್ ಆಗಿತ್ತು. ಹಿರಿಯ ಪೋಷಕರು ಮನೆಯಲಿದ್ದರು. ಈ ಗ್ಯಾಸ್ ಲೀಕೇಜ್ ಹೆಚ್ಚಾದರೆ ಅಕ್ಕ ಪಕ್ಕದ ಮನೆಗಳಿಗೂ ಅಪಾಯದ ಸಾಧ್ಯತೆ ಇತ್ತು. ಹೀಗಾಗಿ ಅಗ್ನಿಶಾಮಕ ದಳ ಕರೆಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಆದರೆ ಈ ವೈರಲ್ ವಿಡಿಯೋದಲ್ಲಿ ಮಹಿಳೆಯೊಬ್ಬರು ಅಗ್ನಿಶಾಮಕ ದಳವನ್ನು ನೀರು ಪೂರೈಕೆಗೂ ಬಳಕ ಮಾಡತ್ತೀರಾ ಎಂದು ಪ್ರಶ್ನಿಸಿದ್ದಾಳೆ. 

ತ್ರಿಬಲ್ ರೈಡಿಂಗ್ ಬೈಕ್‌ನಲ್ಲಿ ಜೋಡಿಯ ಕಿಸ್ಸಿಂಗ್: ಆಕ್ರೋಶ ಹೆಚ್ಚಿಸಿದ ವೈರಲ್ ವಿಡಿಯೋ!
 

Latest Videos
Follow Us:
Download App:
  • android
  • ios