ದೆಹಲಿ ಮುಂಬೈ ಮಾರ್ಗದಲ್ಲಿ ಚಲಿಸುತ್ತಿದ್ದ 12431 ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲವೇ ಕ್ಷಣದಲ್ಲಿ ಹಲವು ಬೋಗಿಗಳು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕದಳ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದೆ. 

ದೆಹಲಿ (ಮೇ.17) ಹಝ್ರತ್ ನಿಜಾಮುದ್ದೀನ್ ರಾಜಧಾನಿ ಎಕ್ಸ್‌ಪ್ರೆಸ್ (12431 ) ರೈಲಿನ ಹಲವು ಬೋಗಿಗಳು ಬೆಂಕಿಗೆ ಆಹುತಿಯಾಗಿದೆ. ತಿರುವನಂತಪುರಂನಿಂದ ದೆಹಲಿಗೆ ಚಲಿಸುತ್ತಿದ್ದ ರೈಲಿನ ಬಿ1 ಬೋಗಿಲ್ಲಿ ಬೆಂಕಿ ಕಾಣಸಿಕೊಂಡು ಅವಘಢ ಸಂಭವಿಸಿದೆ. ಮಧ್ಯಪ್ರದೇಶಧ ರತ್ನಲಂ ಜಿಲ್ಲೆಯ ಬಳಿ ಚಲಿಸುತ್ತಿದ್ದ ವೇಳೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗೆ 5.30ರ ವೇಳೆಗೆ ಘಟನೆ ನಡೆದಿದೆ. ರೈಲು ಗಾರ್ಡ್ ಸಮಯಪ್ರಜ್ಞೆಯಿಂದ ದುರಂತ ತಪ್ಪಿದೆ. ತಕ್ಷಣವೇ ರೈಲು ನಿಲ್ಲಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ರೈಲಿನಿಂದ ಇಳಿಸಲಾಗಿತ್ತು.

Add Asianetnews Kannada as a Preferred SourcegooglePreferred

15 ನಿಮಿಷದಲ್ಲಿ ಎಲ್ಲಾ ಪ್ರಯಾಣಿಕರ ರಕ್ಷಣೆ

ದೆಹಲಿ ಮುಂಬೈ ಮಾರ್ಗದಲ್ಲಿ ರೈಲು ಚಲಿಸುತ್ತಿದ್ದ ವೇಳೆ ಬಿ1 ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಗಮನಿಸಿದ ಟ್ರೈನ್ ಗಾರ್ಡ್ ತಕ್ಷಣವೇ ಲೋಕೋ ಪೈಲೆಟ್‌ಗೆ ಮಾಹಿತಿ ನೀಡಿದ್ದಾರೆ. ಅಲರ್ಟ್ ಸಂದೇಶ ಸಿಕ್ಕ ಬೆನ್ನಲ್ಲೇ ಲೋಕೋ ಪೈಲೆಟ್ ರೈಲು ಎಮರ್ಜೆನ್ಸಿ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ. ಬಳಿಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ರೈಲು ನಿಲ್ಲಿಸಿ 15 ನಿಮಿಷದಲ್ಲಿ ಎಲ್ಲಾ ರೈಲು ಪ್ರಯಾಣಿಕರನ್ನು ಸುರಕ್ಷಿತವಾಗಿ ರೈಲಿನಿಂದ ಇಳಿಸಲಾಗಿತ್ತು. ಹೀಗಾಗಿ ಮಹಾ ದುರಂತವೊಂದು ತಪ್ಪಿದೆ.

ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ

ರೈಲು ನಿಲ್ಲಿಸಿದ ಅರ್ಧ ಗಂಟೆಯಲ್ಲಿ ಬೆಂಕಿ ವ್ಯಾಪಿಸಿದೆ. ರೈಲು ಧಗಧಗನೆ ಹೊತ್ತಿ ಉರಿದಿದೆ. ಲೋಕೋ ಪೈಲೆಟ್ ಅಲರ್ಟ್ ಸಂದೇಶ ನೀಡಲಾಗಿತ್ತು. ಹೀಗಾಗಿ ರೈಲು ಅಧಿಕಾರಿಗಳು ಸ್ಥಳಕ್ಕೆ ದಾವಿಸಿದ್ದಾರೆ. ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಹಾಸ ಪಟ್ಟಿದೆ. ಇತ್ತ ಈ ರೈಲು ಮಾರ್ಗದ ರೈಲುಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ. ಹಲವು ರೈಲುಗಳು ವಿಳಂಬವಾಗಿದೆ. ಇತ್ತ ರೈಲು ಪ್ರಯಾಣಿಕರಿಗೆ ಆಹಾರ ನೀರು ಸೇರಿದಂತೆ ಇತರ ಮೂಲಭೂತ ವ್ಯವಸ್ಥೆಗಳನ್ನು ರೈಲ್ವೇ ಅಧಿಕಾರಿಗಳು ಮಾಡಿದ್ದಾರೆ. ರೈಲು ಪ್ರಯಾಣಕರಿಗೆ ಬೇರೆ ರೈಲಿನ ವ್ಯವಸ್ಥೆ ಮಾಡಲಾಗಿದೆ.

ದೆಹಲಿ ಮುಂಬೈ ಮಾರ್ಗದ ರೈಲುು ಸಂಚಾರ ತಡೆ ಹಿಡಿಯಲಾಗಿದೆ. ಸದ್ಯ ಬೆಂಕಿ ನಂದಿಸಲಾಗಿದೆ. ಇತ್ತ ರೈಲ್ವೇ ಅಧಿಕಾರಿಗಳು ರೈಲನ್ನು ತೆರವು ಮಾಡುವ ಪ್ರಯತ್ನದಲ್ಲಿದ್ದಾರೆ. ರೈಲು ತೆರವು ಗೊಳಿಸಿ ಹಳಿಗಳ ಪರಿಶೀಲನೆ ನಡೆಸಿದ ಬಳಿಕ ಈ ಮಾರ್ಗದ ಮೂಲಕ ರೈಲು ಸಂಚಾರ ಆರಂಭಗೊಳ್ಳಲಿದೆ.