Asianet Suvarna News Asianet Suvarna News

ರಾಷ್ಟ್ರ ರಾಜಧಾನಿಯಲ್ಲಿ ಅಗ್ನಿ ದುರಂತ!

* ರಾಷ್ಟ್ರ ರಾಜಧಾನಿಯಲ್ಲಿ ಬೆಂಕಿ ಅವಘಡ

* ಲಾಜ್‌ಪತ್‌ ನಗರದ ಸೆಂಟ್ರಲ್ ಮಾರ್ಕೆಟ್‌ನಲ್ಲಿ ಕಾಣಿಸಿಕೊಂಡ ಬೆಂಕಿ

* ಬೆಂಕಿ ನಂದಿಸಲು ಸ್ಥಳಕ್ಕೆ ದೌಡಾಯಿಸಿದ ಮೂವತ್ತು ವಾಹನಗಳು

Fire Breaks Out At Showroom In South Delhi 30 Fire Engines At Spot pod
Author
Bangalore, First Published Jun 12, 2021, 3:47 PM IST

ನವದೆಹಿ(ಜೂ.12): ರಾಷ್ಟ್ರ ರಾಜಧಾನಿಯ, ಲಾಜ್‌ಪತ್‌ನಗರದ ಸೆಂಟ್ರಲ್‌ ಮಾರ್ಕೆಟ್‌ನಲ್ಲಿ ಶನಿವಾರ ಬೆಳಗ್ಗೆ ಅಗ್ನಿ ದುರಂತ ಸಂಭವಿಸಿದೆ. ಶೋರೂಂ ಒಂದರಿಂದ ಬೆಂಕಿ ಕೆನ್ನಾಲಿಗೆ ಕಂಡು ಬಂದಿದೆ. ಆರಂಭದಲ್ಲಿ ಅಲ್ಲಿದ್ದ ಜನರೇ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಆದರೆ ಸಾಧ್ಯವಾಗದಾಗ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ನಿಡಿರುವ ಮಾಹಿತಿ ಅನ್ವಯ ಈ ಅಗ್ನ ಅವಘಡ ಬೆಳಗ್ಗೆ ಸುಮಾರು 10.20 ಗಂಟೆಗೆ ಸಮಭವಿಸಿದೆ. ಸ್ಥಳಕ್ಕೆ ಮೂವತ್ತಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳನ್ನು ಕಳುಹಿಸಿ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ.

ಈ ಬ್ಗಗೆ ಹೆಚ್ಚಿನ ಮಾಹಿತಿ ನಿಡಿರುವ ಅಗ್ನಿಶಾಮಕ ದಳ ಸಿಬ್ಬಂದಿ 'ನಮಗೆ ಲಾಜ್‌ಪತ್‌ ನಗರದ ಮಾರ್ಕೆಟ್‌ನ ಬ್ಲಾಕ್‌ 1ರ ಸೆಮಟ್ರಲಗ್ ಮಾರ್ಕೆಟ್ನಲ್ಲಿ ಬೆಂಕಿ ದುರಂತ ಸಂಭವಿಸಿರುವ ಮಾಹಿತಿ ಸಿಕ್ಕಿದೆ. ಇನ್ನು ಮೂವತ್ತಕ್ಕೂ ಹೆಚ್ಚು ವಾಹನಗಳನ್ನು ಬೆಂಕಿ ನಂದಿಸಲು ಕಳುಹಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಸದ್ಯ ಇಲ್ಲಿ ಕೂಲಿಂಗ್ ಆಪರೇಷನ್ ನಡೆಯುತ್ತಿದೆ. ಈ ದುರಂತದಲ್ಲಿ ಅದೃಷ್ಟವಶಾತ್ ಜೀವ ಹಾನಿಯಾಗಿಲ್ಲ. ಆದರೆ ಬೆಂಕಿ ತಗುಲಿದ್ದು ಹೇಗೆ ಎಂಬ ಕಾರಣ ಮಾತ್ರ ತಿಳಿದು ಬಂದಿಲ್ಲ' ಎಂದಿದ್ದಾರೆ.

ಇದಕ್ಕೂ ಮುನ್ನ ಏಪ್ರಿಲ್ 8ರಂದು ದಿಲ್‌ಶಾಯಿ ಗಾರ್ಡನ್‌ನಲ್ಲಿ ಸ್ಟೇಷನರಿ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇಲ್ಲೂ ಬೆಂಕಿ ನಂದಿಸಲು ಹದಿನೈದಸು ಅಗ್ನಿಶಾಮಕ ವಾಹನಗಳು ಆಗಮಿಸಿದ್ದವು. 

Follow Us:
Download App:
  • android
  • ios