ಹೈದರಾಬಾದ್ ಬಹುಮಹಡಿ ಕಟ್ಟಡದಲ್ಲಿ ಬೆಂಕಿ ಅವಘಡ: ಉಸಿರುಕಟ್ಟಿ 6 ಮಂದಿ ಸಾವು
ಹೈದರಾಬಾದ್‌ನ ಸಿಕಂದರಬಾದ್‌ನಲ್ಲಿ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಹೊಗೆಯಿಂದ ಉಸಿರುಕಟ್ಟಿ ಮಹಿಳೆ ಸೇರಿದಂತೆ ಆರು ಜನ ಪ್ರಾಣ ಬಿಟ್ಟಿದ್ದಾರೆ.
ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದ್‌ನ ಸಿಕಂದರಬಾದ್‌ನಲ್ಲಿ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ವೇಳೆ ಹೊಗೆಯಿಂದ ಉಸಿರುಕಟ್ಟಿ ಮಹಿಳೆ ಸೇರಿದಂತೆ ಆರು ಜನ ಪ್ರಾಣ ಬಿಟ್ಟಿದ್ದಾರೆ.
ತೆಲಂಗಾಣದ ಸಿಕಂದರಬಾದ್‌ನ (Secunderabad) ಬಹುಮಹಡಿ ವಾಣಿಜ್ಯ ಸಂಕೀರ್ಣದಲ್ಲಿ ಈ ಅವಘಡ ಸಂಭವಿಸಿದೆ. ದಟ್ಟ ಹೊಗೆಯಿಂದಾಗಿ ಉಸಿರುಕಟ್ಟಿ 6 ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ಸಂಜೆ 7.30 ರ ಸುಮಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದಾಗಿ (short circuit) ಸ್ವಪ್ನಾಲೋಕ ಸಂಕೀರ್ಣದ 5ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಅಲ್ಲಿ ದಟ್ಟ ಹೊಗೆ ಆವರಿಸಿದ್ದು, 13 ಜನ ಅಲ್ಲಿ ಸಿಲುಕಿಕೊಂಡಿದ್ದರು. ಅವರಲ್ಲಿ 7 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ ಉಳಿದ ಆರು ಜನ ಅಲ್ಲೇ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ.
ರಾಯಚೂರು: ಜಾಗಟಗಲ್‌ನಲ್ಲಿ ವಿದ್ಯುತ್ ತಂತಿ ತಗುಲಿ ಅಗ್ನಿ ಅವಘಡ
ಇದುವರೆಗೆ ಆರು ಜನ ಮೃತಪಟ್ಟಿದ್ದು, ಮೃತರಲ್ಲಿ ನಾಲ್ಕು ಜನ ಹುಡುಗಿಯರಾಗಿದ್ದು, ಇನ್ನಿಬ್ಬರು ಹುಡುಗರು. ರಕ್ಷಣಾ ಕಾರ್ಯಾಚರಣೆ ವೇಳೆಯೇ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ಕರೆದೊಯ್ದ ವೇಳೆ ಅವರು ವೈದ್ಯರು ಈ ಆರು ಜನ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ವೇಳೆ ಇವರೆಲ್ಲರೂ ಒಳಗಿದ್ದರು. ನಾವು ಒಟ್ಟು 7 ಜನರನ್ನು ರಕ್ಷಿಸಿದ್ದೇವೆ ಎಂದು ಉತ್ತರ ವಿಭಾಗದ ಡಿಸಿಪಿ ಚಂದನಾ ದೀಪ್ತಿ (Chandana Deepthi) ಹೇಳಿದ್ದಾರೆ.
ಬೆಳಗಾವಿ: ಪ್ರಯಾಣಿಸುವ ವೇಳೆ ಏಕಾಏಕಿ ಬೆಂಕಿ: ಕಣ್ಮುಂದೆ ಸುಟ್ಟು ಕರಕಲಾದ ಕಾರು!
ಘಟನಾ ಸ್ಥಳದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ವಿಪ್ಪತ್ತು ನಿರ್ವಹಣಾ ತಂಡ ಅಗ್ನಿ ನಂದಿಸುವ ಕಾರ್ಯದಲ್ಲಿ ತೊಡಗಿತ್ತು. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಜಿ. ಕಿಶನ್ ರೆಡ್ಡಿ (G Kishan Reddy) ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಸಿಕಂದರಬಾದ್‌ನ ಸ್ವಪ್ನಲೋಕ ಕಾಂಪ್ಲೆಕ್ಸ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 6 ಜನ ಜೀವ ಕಳೆದುಕೊಂಡಿರುವುದರಿಂದ ತೀವ್ರ ದುಃಖವಾಗಿದೆ,. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಲೆಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.