Asianet Suvarna News Asianet Suvarna News

11ನೇ ಮಹಡಿಯಲ್ಲಿ ಕೆಟ್ಟ ಲಿಫ್ಟ್ : 25 ನಿಮಿಷ ಒದ್ದಾಡಿದ ಮೂವರು ಮಕ್ಕಳು

ಉತ್ತರಪ್ರದೇಶದ ಗಾಜಿಯಾಬಾದ್‌ನ ಹೌಸಿಂಗ್ ಸೊಸೈಟಿಗೆ ಸೇರಿದ ಬಹುಮಹಡಿ ಕಟ್ಟಡದ ಲಿಫ್ಟ್ ಒಳಗೆ ಮೂವರು ಬಾಲಕಿಯರು ಬರೋಬ್ಬರಿ 25 ನಿಮಿಷಗಳ ಕಾಲ ಸಿಕ್ಕಿಹಾಕಿಕೊಂಡು ಹೊರಗೆ ಬರಲು ಒದ್ದಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

FIR registered against Ghaziabad housing society after 3 children stuck 25 minutes inside lift of highrise building akb
Author
First Published Dec 1, 2022, 4:23 PM IST

ಗಾಜಿಯಾಬಾದ್‌: ಉತ್ತರಪ್ರದೇಶದ ಗಾಜಿಯಾಬಾದ್‌ನ ಹೌಸಿಂಗ್ ಸೊಸೈಟಿಗೆ ಸೇರಿದ ಬಹುಮಹಡಿ ಕಟ್ಟಡದ ಲಿಫ್ಟ್ ಒಳಗೆ ಮೂವರು ಬಾಲಕಿಯರು ಬರೋಬ್ಬರಿ 25 ನಿಮಿಷಗಳ ಕಾಲ ಸಿಕ್ಕಿಹಾಕಿಕೊಂಡು ಹೊರಗೆ ಬರಲು ಒದ್ದಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಯಾರು ಇಲ್ಲದ ವೇಳೆ ಪುಟಾಣಿಗಳು ಲಿಫ್ಟ್‌ನಲ್ಲಿ ಸಿಲುಕಿ ಹಾಕಿಕೊಂಡರೆ ಗತಿಯೇನು ಎಂಬುದನ್ನು ತೋರಿಸುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಈ ಅಪಾರ್ಟ್‌ಮೆಂಟ್‌ನ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 

ಲಿಫ್ಟ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ( CCTV footage) ಈ ದೃಶ್ಯ ಸೆರೆ ಆಗಿದ್ದು, 8 ರಿಂದ 9 ವರ್ಷ ಪ್ರಾಯದ ಮಕ್ಕಳು ಒಬ್ಬರಿಗೊಬ್ಬರು ಸಮಾಧಾನ ಹೇಳಿಕೊಳ್ಳುತ್ತಾ ಹೊರಗೆ ಬರುವ ದಾರಿ ಹುಡುಕಲು ಪ್ರಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಈ ಘಟನೆ ಹೌಸಿಂಗ್ ಸೊಸೈಟಿಗಳ ನಿರ್ವಹಣೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ.

ನವಂಬರ್ 29 ರಂದು ಈ ಘಟನೆ ನಡೆದಿದ್ದು, ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಪದಾಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಗಾಜಿಯಾಬಾದ್‌ನ ಅಶೋಟೆಕ್ ದಿ ನೆಸ್ಟ್ ನ ಕ್ರಾಸಿಂಗ್ ರಿಪಬ್ಲಿಕ್ ಟೌನ್‌ಶಿಪ್‌ನಲ್ಲಿ ಈ ಘಟನೆ ನಡೆದಿದೆ. ಮೂವರು ಮಕ್ಕಳು ಒಳಗಿರುವಾಗಲೇ ಲಿಫ್ಟ್ ಸ್ಥಗಿತಗೊಂಡಿದ್ದು, ಇವರ ಜೊತೆ ಹಿರಿಯರು ಯಾರೂ ಇರಲಿಲ್ಲ. ಇನ್ನು ಲಿಫ್ಟ್ ಜಾಮ್ ಆಗಿದೆ ಎಂಬುದು ತಿಳಿಯುತ್ತಿದ್ದಂತೆ ಮಕ್ಕಳು ಹೊರಗೆ ಬರಲು ಏನು ಮಾಡಬಹುದೋ ಅದೆಲ್ಲವನ್ನು ಮಾಡಿದ್ದಾರೆ. ಲಿಫ್ಟ್‌ನಲ್ಲಿರುವ ಎಚ್ಚರಿಕೆ ಕರೆಗಂಟೆ ಬೆಲ್ ಒತ್ತಿದ್ದಾರೆ. ಲಿಫ್ಟ್ ಬಾಗಿಲನ್ನು ತೆರೆಯಲು ಯತ್ನಿಸಿದ್ದಾರೆ ಅಲ್ಲದೇ ಭಯಗೊಂಡಿದ್ದರು ಒಬ್ಬರಿಗೊಬ್ಬರು ಸಮಾಧಾನಪಡಿಸಿಕೊಂಡಿದ್ದಾರೆ. 

ಲಿಫ್ಟ್‌ನಲ್ಲಿ ಪುಟ್ಟ ಬಾಲಕನ ಕಚ್ಚಿ ಎಳೆದಾಡಿದ ಬೇರೆಯವರ ಸಾಕುನಾಯಿ

ಲಿಫ್ಟ್‌ನಲ್ಲಿ ಸಿಲುಕಿಕೊಂಡ ಓರ್ವ ಬಾಲಕಿಯ ಪೋಷಕರಾದ ಶಿವಂ ಗೆಹ್ಲೋಟ್ (Shivam Gehlot) ಎಂಬುವವರು ಪೊಲೀಸರಿಗೆ ದೂರು ನೀಡಿದ್ದು ಡೆವಲಪರ್‌ಗಳು ಕಟ್ಟಡ ನಿರ್ವಹಣೆಯಲ್ಲಿ ಲೋಪವೆಸಗಿದ್ದಾರೆ ಎಂದು ದೂರಿದ್ದಾರೆ. ನಂತರ ಗಾಜಿಯಾಬಾದ್ ಪೊಲೀಸರು (Ghaziabad police) ನ.30 ರಂದು ಪ್ರಕರಣ ದಾಖಲಿಸಿದ್ದು, ಮಕ್ಕಳು ಸುಮಾರು 25 ನಿಮಿಷಗಳ ಕಾಲ ಕ್ರಾಸಿಂಗ್ ರಿಪಬ್ಲಿಕ್ ಟೌನ್‌ಶಿಪ್‌ನ ಬಹುಮಹಡಿ ಕಟ್ಟಡದ 11ನೇ ಮಹಡಿಯಲ್ಲಿ ಸಿಲುಕಿದ್ದರು ಎಂದು ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈ ಟೌನ್‌ಶಿಪ್‌ನ ಅಧ್ಯಕ್ಷೆ ಚೈತ್ರ ಚತುರ್ವೇದಿ (Chitra Chaturvedi), ಕಾರ್ಯದರ್ಶಿ ಅಭಯ್ ಜಾ (Abhay Jha), ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ಲಿಫ್ಟ್ ಜೊತೆ ಆಟ ಬೇಡ : ಲಿಫ್ಟ್‌ನಲ್ಲಿ ಸಿಲುಕಿ ಟೀಚರ್ ಸಾವು

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 287 (ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆ) ಸೆಕ್ಷನ್ 336( ಮಾನವ ಜೀವಕ್ಕೆ ಅಥವಾ ಇತರರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ನಿರ್ಲಕ್ಷ್ಯ) ದಡಿ ಪ್ರಕರಣ ದಾಖಲಿಸಲಾಗಿದೆ. ನನ್ನ ಮಗಳು 20ನೇ ಮಹಡಿಯಲ್ಲಿ ಲಿಫ್ಟ್‌ ಏರಿದ್ದಾಳೆ. ಇನ್ನಿಬ್ಬರು ಮಕ್ಕಳು 11ನೇ ಫ್ಲೋರ್‌ನಲ್ಲಿ ಲಿಫ್ಟ್‌ಗೆ ಹತ್ತಿದ್ದು, ಅದಾದ ನಂತರ ಲಿಫ್ಟ್ ಸ್ಥಗಿತಗೊಂಡಿದ್ದು 24 ನಿಮಿಷಗಳ ಕಾಲ ಒಳಗೆ ಭಯದಿಂದ ಮಕ್ಕಳು ಪರದಾಡಿದ್ದಾರೆ ಎಂದು ಶಿವಮ್ ಗೆಹ್ಲೋಟ್ ಹೇಳಿದ್ದಾರೆ.  ಸಿಸಿಟಿವಿ ದೃಶ್ಯಾವಳಿಯ ವ್ಯವಸ್ಥೆ ಇದ್ದರೂ 6 ಗಂಟೆಯ ನಂತರ ಮೈಂಟೆನೆನ್ಸ್ ಸ್ಟಾಪ್ ಅಲ್ಲಿಂದ ತೆರಳುವುದರಿಂದ ಎಲ್ಲವೂ ಕ್ಲೋಸ್ ಆಗುತ್ತದೆ. ಈ ದೃಶ್ಯಾವಳಿ ಪಡೆಯಲು ನಾನು ಹರಸಾಹಸ ಪಡಬೇಕಾಯಿತು. ದೃಶ್ಯಾವಳಿ ಸಿಕ್ಕಿದ ಬಳಿಕ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ.
 

Follow Us:
Download App:
  • android
  • ios