ಅಮರಾವತಿ ಮಾಸ್ಟರ್ ಪ್ಲಾನ್,ಇನ್ನರ್ ರಿಂಗ್ ರೋಡ್ ಅವ್ಯವಹಾರ ಮಾಜಿ ಸಿಎಂ ವಿರುದ್ಧ ಎಫ್ಐಆರ್ ದಾಖಲಿಸಿ ಸಿಐಡಿ ಪೊಲೀಸ್ ಆಂಧ್ರ ಪ್ರದೇಶದಲ್ಲಿ ರಾಜಕೀಯ ಕೆಸರೆರೆಚಾಟ ಆರಂಭ
ಆಂಧ್ರಪ್ರದೇಶ(ಮೇ.10): ಆಂಧ್ರಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಸಿಐಡಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಅಮರಾವತಿ ಮಾಸ್ಟರ್ ಪ್ಲಾನ್ ಮತ್ತು ಇನ್ನರ್ ರಿಂಗ್ ರೋಡ್ ವಿನ್ಯಾಸದಲ್ಲಿ ಅವ್ಯವಹಾರ ನಡೆದಿದೆ ಎಂದು ಮಂಗಳಗಿರಿ ಶಾಲಕ ಅಲ್ಲಾ ರಾಮಕೃಷ್ಣ ರೆಡ್ಡಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಸಿಐಡಿ ಪೊಲೀಸರು ಮಾಜಿ ಸಿಎಂ ವಿರುದ್ಧವೇ ಎಫ್ಐಆರ್ ದಾಖಲಿಸಿದ್ದಾರೆ. ಇದು ಆಂಧ್ರ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಅವ್ಯವಹಾರ ದೂರಿನಲ್ಲಿ ಚಂದ್ರಬಾಬು ನಾಯ್ಡು ಜೊತೆಗೆ ಮಾಜಿ ಸಚಿವ ನಾರಾಯಣ, ಲಿಂಗಮನೇನಿ ರಮೇಶ್, ಲಿಂಗಮನೇನಿ ವೆಂಕಟ ಸೂರ್ಯರಾಜಶೇಖರ್, ಇಪಿಎಲ್ ಪ್ರಾಜೆಕ್ಟ್ಸ್, ರಾಮಕೃಷ್ಣ ಹೌಸಿಂಗ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಅಂಜನಿ ಕುಮಾರ್ ಮತ್ತು ಹೆರಿಟೇಜ್ ಫುಡ್ಸ್ ವಿರುದ್ಧವೂ ದೂರು ದಾಖಲಾಗಿದೆ.
ಅಧಿಕಾರಕ್ಕೆ ಮರಳುವವರೆಗೂ ಸದನದಲ್ಲಿ ಕಾಲಿಡುವುದಿಲ್ಲ : ಚಂದ್ರಬಾಬು ನಾಯ್ಡು!
ಆಂಧ್ರಪ್ರದೇಶ ಸಿಐಡಿ ಪೊಲೀಸರು ಮೇ 09ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಚಂದ್ರಬಾಬು ನಾಯ್ಡು ವಿರುದ್ಧವೇ ಎಫ್ಐಆರ್ ದಾಖಲಾಗಿದ್ದು, ಇದೀಗ ಆಂಧ್ರದಲ್ಲಿ ಆಡಳಿತ ಪಕ್ಷ ಹಾಗೂ ಟಿಡಿಪಿ ನಡುವೆ ಸಮರ ನಡೆಯುತ್ತಿದೆ. ಇದರ ನಡುವೆ ಟಿಡಿಪಿ ಹಿರಿಯ ನಾಯಕ ಪಿ. ನಾರಾಯಣ ಅವರ ಬಂಧನವಾಗಿದೆ. ಇದನ್ನು ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಈ ಬಂಧನವನ್ನು ಖಂಡಿಸಿದ್ದಾರೆ. ಈ ಬಂಧನ ರಾಜಕೀಯವಾಗಿದೆ. ಜಗನ್‌ಮೋಹನ್ ರೆಡ್ಡಿ ಸರ್ಕಾರ ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಇದೀಗ ಬಂಧನ ತಂತ್ರ, ಪೊಲೀಸ್ ಪ್ರಕರಣ ತಂತ್ರ ಮಾಡುತ್ತಿದ್ದಾರೆ ಎಂದು ನಾರಾ ಲೋಕೇಶ್ ಆರೋಪಿಸಿದ್ದಾರೆ.
ಜಗನ್ ಸರ್ಕಾರ ಟಿಡಿಪಿ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ. ಸರ್ಕಾರದ ವೈಫಲ್ಯ ಮುಚ್ಚಿಹಾಕಲು ಟಿಡಿಪಿ ನಾಯಕರ ಬಂಧನದ ನಾಟವಾಡುತ್ತಿದೆ. ಇದಕ್ಕೆ ಜನ ಉತ್ತರ ನೀಡಲಿದ್ದಾರೆ. ಸರ್ಕಾರದ ಅಸಮರ್ಥ ಆಡಳಿತದಿಂದ ಜನ ಬೇಸತ್ತಿದ್ದಾರೆ ಎಂದು ನಾರಾ ಲೋಕೇಶ್ ಹೇಳಿದ್ದಾರೆ.
10ನೇ ತರಗತಿ ಪತ್ರಿಕೆ ಸೋರಿಕೆ ವಿಚಾರದಲ್ಲಿ ಸರ್ಕಾರದ ವೈಫಲ್ಯ ಮರೆ ಮಾಚಲು ನಾಯಕ ಪಿ ನಾರಾಯಣ ಅವರನ್ನು ಬಂಧಿಸಲಾಗಿದೆ ಎಂದು ನಾರಾ ಲೋಕೇಶ್ ಹೇಳಿದ್ದಾರೆ. 10ನೇ ತರಗತಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸಿಎಂ ಜಗನ್‌ಮೋಹನ್ ರೆಡ್ಡಿ ಹಾಗೂ ಶಿಕ್ಷಣ ಸಚಿವ ಸತ್ಯನಾರಾಯಣ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಜಗನ್ ಸರ್ಕಾರ ತನ್ನ ಅವ್ಯವಹಾರಗಳನ್ನು ಹೊಸ ರೂಪದಲ್ಲಿ ವಿಪಕ್ಷಗಳ ಮೇಲೆ ಹಾಕುತ್ತಿದೆ ಎಂದಿದ್ದಾರೆ.
ನಾಯ್ಡು ಹತಾಶ: ‘ಕಣ್ಣೀರಧಾರೆ’ಗೆ ಜಗನ್ ತಿರುಗೇಟು
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ವೈಎಸ್‌ಆರ್ ಕಾಂಗ್ರೆಸ್ ತನ್ನನ್ನು ವೈಯಕ್ತಿಕವಾಗಿ ಅವಮಾನಿಸಿದೆ ಎಂದು ಆರೋಪಿಸಿ ಕಣ್ಣೀರು ಹಾಕಿದ್ದಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರತಿಕ್ರಿಯಿಸಿದ್ದು, ‘ನಾಯ್ಡು ಎಷ್ಟುಹತಾಶರಾಗಿದ್ದಾರೆ ಎಂಬುದು ಇಡೀ ರಾಜ್ಯಕ್ಕೆ ತಿಳಿದಿದೆ’ ಎಂದು ತಿರುಗೇಟು ನೀಡಿದ್ದಾರೆ.
ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುಗೆ ಸಿಐಡಿ ಕಂಟಕ!
‘ನಾಯ್ಡು ಅವರನ್ನು ಜನತೆಯೇ ತಿರಸ್ಕರಿಸಿದ್ದಾರೆ. ತವರು ಕ್ಷೇತ್ರವಾದ ಕುಪ್ಪಂ ಚುನಾವಣೆಯಲ್ಲೂ ಅವರು ಸೋತಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಟಿಡಿಪಿ ಅಧಿಕಾರ ಕಳೆದುಕೊಂಡಿದೆ. ಸದನದಲ್ಲಿ ಅನಗತ್ಯ ವಿಷಯಗಳನ್ನು ಪ್ರಸ್ತಾಪಿಸಿ ಆಡಳಿತ ಪಕ್ಷದ ಸದಸ್ಯರನ್ನು ಅವರೇ ಪ್ರಚೋದಿಸಿದರು. ಅವರು ತಿರುಗಿ ಪ್ರತಿಕ್ರಿಯಿಸಿದ್ದಕ್ಕೆ ನಾಯ್ಡು ಈ ರೀತಿ ವರ್ತಿಸುತ್ತಿರುವುದು ಅವರ ಹತಾಶೆಯನ್ನು ತೋರಿಸುತ್ತದೆ’ ಎಂದಿದ್ದಾರೆ.
ಶುಕ್ರವಾರ ನಾಯ್ಡು ವೈಎಸ್‌ಆರ್ ಕಾಂಗ್ರೆಸ್ ತನ್ನನ್ನು ಹಾಗೂ ತನ್ನ ಪತ್ನಿಯನ್ನು ಸದನದಲ್ಲೇ ಅವಾಚ್ಯ ಪದಗಳಿಂದ ನಿಂದಿಸಿದೆ ಎಂದು ಆರೋಪಿಸಿ ತಾವು ಮತ್ತೇ ಸಿಎಂ ಆಗುವವರೆಗೂ ಸದನವನ್ನು ಪ್ರವೇಶಿಸುವುದಿಲ್ಲ ಎಂದು ಶಪಥ ಮಾಡಿದ್ದರು ಹಾಗೂ ಕಣ್ಣೀರು ಹಾಕಿದ್ದರು.
