ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುಗೆ ಸಿಐಡಿ ಕಂಟಕ!
ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುಗೆ ಸಿಐಡಿ ಕಂಟಕ| ಅಮರಾವತಿ ಲ್ಯಾಂಡ್ ಸ್ಕ್ಯಾಮ್ ವಿಚಾರದಲ್ಲಿ ನೋಟಿಸ್| ನೋಟಿಸ್ ನೀಡಿದ ಸಿಐಡಿ ಅಧಿಕಾರಿಗಳು| 500 ಕೋಟಿ ಭೂ ಹಗರಣ ಅಂತ ಆರೋಪ ಕೇಳಿಬಂದಿದೆ
ಅಮರಾವತಿ(ಮಾ.16): ಆಂಧ್ರ ಪ್ರದೇಶದ ಮಾಜಿ ಸಿಎಂ ಹಾಗೂ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡುಗೆ ಅಮರಾವತಿ ಲ್ಯಾಂಡ್ ಸ್ಕ್ಯಾಮ್ ವಿಚಾರದಲ್ಲಿ ಸಿಐಡಿ ಕಂಟಕ ಎದುರಾಗಿದೆ.
ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ವಿರುದ್ಧ ಅಮರಾವತಿ ಲ್ಯಾಂಡ್ ಸ್ಕ್ಯಾಮ್ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಇದು ಬರೋಬ್ಬರಿ 500 ಕೋಟಿ ಭೂ ಹಗರಣ ಎನ್ನಲಾಗಿತ್ತು. ಸದ್ಯ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಐಟಿ ಅಧಿಕಾರಿಗಳು ಮಾಜಿ ಸಿಎಂಗೆ ನೋಟಿಸ್ ರವಾನಿಸಿದ್ದಾರೆ.
ನೋಟಿಸ್‌ನಲ್ಲಿ ಮಾರ್ಚ್ 23ರ ಒಳಗಾಗಿ ಬಂದು ಮಾಹಿತಿ ನೀಡುವಂತೆ ಸೂಚನೆ ನೀಡಿರುವ ಅಧಿಕಾರಿಗಳು, ನಾಯ್ಡು ಹೈದರಾಬಾದ್ ಮನೆಗೆ ತೆರಳಿ ನೋಟೀಸ್ ನೀಡಿದ್ದಾರೆ.