ಆರ್ಥಿಕ ಸಂಕಷ್ಟ: ಮಗಳ ಮದುವೆ ಮಾಡಿಸಿದ್ದ ಫೈವ್ ಸ್ಟಾರ್ ಹೊಟೇಲ್‌ನಲ್ಲೇ ಕೇರಳ ದಂಪತಿ ಆತ್ಮಹತ್ಯೆ
ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಸಿದ ಹೊಟೇಲ್‌ನಲ್ಲೇ ದಂಪತಿ ಸಾವಿಗೆ ಶರಣಾದ ದುರಂತ ಘಟನೆ ಕೇರಳದ ತಿರುವನಂತರಪುರದಲ್ಲಿ ನಡೆದಿದೆ. ಅದ್ದೂರಿ ಮದುವೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಈ ದಂಪತಿ, ಮಗಳ ವಿವಾಹ ನಡೆದು ಕೇವಲ ಮೂರು ತಿಂಗಳಲ್ಲೇ ಸಾವಿನ ಹಾದಿ ಹಿಡಿದಿದ್ದಾರೆ.

ಕೇರಳ: ಮಗಳನ್ನು ಅದ್ದೂರಿಯಾಗಿ ಮದುವೆ ಮಾಡಿಸಿದ ಹೊಟೇಲ್‌ನಲ್ಲೇ ದಂಪತಿ ಸಾವಿಗೆ ಶರಣಾದ ದುರಂತ ಘಟನೆ ಕೇರಳದ ತಿರುವನಂತರಪುರದಲ್ಲಿ ನಡೆದಿದೆ. ಅದ್ದೂರಿ ಮದುವೆಯಿಂದಾಗಿ ಆರ್ಥಿಕ ಸಂಕಷ್ಟಕ್ಕೊಳಗಾದ ಈ ದಂಪತಿ, ಮಗಳ ವಿವಾಹ ನಡೆದು ಕೇವಲ ಮೂರು ತಿಂಗಳಲ್ಲೇ ಸಾವಿನ ಹಾದಿ ಹಿಡಿದಿದ್ದಾರೆ.
ಐದು ದಿನಗಳ ಹಿಂದೆ ಈ ದಂಪತಿ (Death Note) ಈ ಫೈವ್ ಸ್ಟಾರ್ ಹೊಟೇಲ್‌ಗೆ (Five star Hotel) ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ಹೊಟೇಲ್‌ನಲ್ಲಿ ಸ್ವಲ್ಪ ಸಮಯದ ಹಿಂದೆ ದಂಪತಿ ತಮ್ಮ ಮಗಳ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಹೊಟೇಲ್‌ಗೆ ಆಗಮಿಸಿದ ದಂಪತಿ ಎಲ್ಲೋ ಹೊರಗೆ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಹೊಟೇಲ್ ಸಿಬ್ಬಂದಿ ಅನುಮಾನಗೊಂಡು ಬಾಗಿಲು ಒಡೆದು ನೋಡಿದಾಗ ದಂಪತಿ ನೇಣಿಗೆ ಶರಣಾಗಿದ್ದಾರೆ.
ಹೊಟೇಲ್ ರೂಮ್‌ನಲ್ಲಿ ಡೆತ್‌ನೋಟು ಸಿಕ್ಕಿದ್ದು, ಅದರಲ್ಲಿ ಉಲ್ಲೇಖಿಸಿದಂತೆ, ಆಕೆಯನ್ನು ಇದೇ ಹೊಟೇಲ್‌ನಲ್ಲಿ ಮದುವೆ ಮಾಡಿ ಕೊಡಲಾಗಿದ್ದು, ಪ್ರಸ್ತುತ ಆಕೆ ಗರ್ಭಿಣಿಯಾಗಿದ್ದಾಳೆ. ಪ್ರಸ್ತುತ ಸಂತೋಷದಿಂದ ಇರುವ ಆಕೆಗೆ ನಮ್ಮ ಕಷ್ಟಗಳನ್ನು ಹೇಳಿಕೊಂಡು ತೊಂದರೆ ನೀಡಲು ಇಷ್ಟವಿಲ್ಲ, ನಮ್ಮ ಸಾವಿಗೆ ನಾವೇ ಕಾರಣವಾಗಿದ್ದು, ನಮ್ಮ ಸಾವಿನ ನಂತರ ಈ ವಿಷಯವಾಗಿ ನಮ್ಮ ಮಗಳಿಗೆ ಯಾವುದೇ ತೊಂದರೆ ನೀಡಬೇಡಿ ಅಲ್ಲದೇ ನಮ್ಮ ಶವವನ್ನು ಮೆಡಿಕಲ್ ಕಾಲೇಜು (Medical college) ಆಸ್ಪತ್ರೆಯ ಶವಗಾರದಲ್ಲಿ ಇರಿಸಿ ಅಲ್ಲದೇ ಮಗಳು ಉತ್ತರಗಳಿಗೆ ಈ ವಿಚಾರವನ್ನು ತಿಳಿಸಿ ಎಂದು ಡೆತ್‌ನೋಟ್‌ನಲ್ಲಿ ದಂಪತಿ ಬರೆದಿದ್ದಾರೆ.
ಆತ ನನಗೆ ಅಣ್ಣನ ಸಮಾನ, ಗೆಳತಿ ಹೇಳಿಕೆಗೆ ಮನನೊಂದು ಕೋರ್ಟ್‌ನಲ್ಲೇ ಕೈಕತ್ತರಿಸಿದ ಪ್ರೇಮಿ!
ಇದೇ ಹೊಟೇಲ್‌ನಲ್ಲಿ ಆಯೋಜಿಸಿದ್ದ ಓಣಂ (Onam) ಸಂಭ್ರಮದಲ್ಲಿ ಈ ದಂಪತಿ ಭಾಗವಹಿಸಿದ್ದರು, ಸಂಪ್ರದಾಯಿಕ ಓಣಂ ಧಿರಿಸು ಧರಿಸಿ ಓಣಂ ಸಾದ್ಯ ಸವಿದಿದ್ದರು. ಆದರೆ ಇಲ್ಲಿಯವರೆಗೂ ಅವರು ಹೊಟೇಲ್ ಬಿಲ್ ಪಾವತಿ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.
ಒಂದೊಮ್ಮೆ ಈ ಕುಟುಂಬ ಆರ್ಥಿಕವಾಗಿ ತುಂಬಾ ಸಧೃಡವಾಗಿತ್ತು. ಆದರೆ ಇತೀಚೆಗೆ ಉದ್ಯಮದಲ್ಲಿ ಹಿನ್ನಡೆಯಾಗಿ ಆರ್ಥಿಕ ಸಂಕಷ್ಟ ಎದುರಾಗಿತ್ತು. ಸಾವಿಗೆ ಶರಣಾದ ಸುಗಥನ್ ಸೌದಿ ರಾಷ್ಟ್ರ ಮಸ್ಕತ್‌ನಲ್ಲಿ ಯಶಸ್ವಿ ಉದ್ಯಮಿಯಾಗಿದ್ದರು. ಕೆಲ ವರ್ಷಗಳ ಹಿಂದಷ್ಟೇ ಅವರು 20201ರಲ್ಲಿ ತಾಯ್ನಾಡು ಕೇರಳಕ್ಕೆ ಬಂದಿದ್ದರು. ನಂತರ ಕರಿಪುರ ಪ್ರಕೃತಿ ಗಾರ್ಡನ್‌ನಲ್ಲಿ ಮನೆಯೊಂದಕ್ಕೆ ಹೂಡಿಕೆ ಮಾಡಿದ್ದರು. ಆದರೆ ಮಗಳ ಮದುವೆಗೂ ಮೊದಲು ದಂಪತಿ ಅದನ್ನು ಮಾರಾಟ ಮಾಡಿದ್ದರು. ಹೀಗಿದ್ದರೂ ಅವರ ಪ್ರಾಥಮಿಕ ಹೂಡಿಕೆಯ 65 ಲಕ್ಷದಲ್ಲಿ ಕೇವಲ 35 ಲಕ್ಷವಷ್ಟೇ ಅವರಿಗೆ ಮರಳಿ ಪಡೆಯಲು ಸಾಧ್ಯವಾಗಿತ್ತು. ಇದರಿಂದ ದಂಪತಿ ಆರ್ಥಿಕವಾಗಿ ಮತ್ತಷ್ಟು ಸಂಕಷ್ಟಕ್ಕೀಡಾಗಿದ್ದರು. ಇದು ಅವರನ್ನು ಮಾನಸಿಕವಾಗಿ ಕುಗ್ಗಿಸಿ ಖಿನ್ನತೆಗೆ ಜಾರಿಸಿತ್ತು. ಪೊಲೀಸರು ಈಗ ದಂಪತಿಯ ಆರ್ಥಿಕ ಹಿನ್ನಡೆಗೆ ಕಾರಣವಾದ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಓಣಂ ಸಂಭ್ರಮದ ಮೊದಲ 9 ದಿನಗಳಲ್ಲಿ ಕೇರಳದಲ್ಲಿ ಮದ್ಯ ಮಾರಾಟ ಹೊಸ ದಾಖಲೆ!