Asianet Suvarna News Asianet Suvarna News

ಪ್ರಧಾನಿ ಮೋದಿ ಜಬಲ್‌ಪುರ್ ರೋಡ್ ಶೋ ವೇಳೆ ಕುಸಿದ ವೇದಿಕೆ, ಮೂವರಿಗೆ ಗಾಯ!

ಪ್ರಧಾನಿ ನರೇಂದ್ರ ಮೋದಿ ಜಬಲ್‌ಪುರ್ ರೋಡ್ ಶೋನಲ್ಲಿ ಅವಘಡ ನಡೆದಿದೆ. ಮೋದಿ ನೋಡಲು ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನ ಸೇರಿದ್ದರು. ಹೀಗಾಗಿ ವೇದಿಕೆ ಕುಸಿದಿದೆ. ಇದರಿಂದ ಹಲವರು ಗಾಯಗೊಂಡಿದ್ದಾರೆ.
 

Few Sustained Injury after state collapsed during PM Modi Road Show jabalpur ckm
Author
First Published Apr 7, 2024, 9:37 PM IST

ಜಬಲ್‌ಪುರ್(ಏ.07) ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಸಮಾವೇಶ, ರೋಡ್ ಶೋ, ರ್ಯಾಲಿಗಳು ಆರಂಭಗೊಂಡಿದೆ. ಇಂದು ಮಧ್ಯಪ್ರದೇಶದ ಜಬಲಪುರದಲ್ಲಿ ಪ್ರಧಾನಿ ಮೋದಿ ಬಹತ್ ರೋಡ್ ಶೋ ಆಯೋಜಿಸಿದ್ದರು. ಈ ರೋಡ್ ಶೋ ವೇಳೆ ವೇದಿಕೆ ಕುಸಿದು ಕೆಲವರು ಗಾಯಗೊಂಡಿದ್ದಾರೆ. ಪ್ರಧಾನಿ ಮೋದಿ ನೋಡಲು ಕಿಕ್ಕಿರಿದು ಜನ ಆಗಮಿಸಿದ್ದಾರೆ. ವೇದಿಕೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನರು ಸೇರಿದ ಕಾರಣ ವೇದಿಕೆ ಕುಸಿದಿದೆ. ಈ ಘಟೆನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಗೊಂಡವರನ್ನು ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪ್ರಧಾನಿ ಮೋದಿ ರೋಡ್ ಶೋ ಹಾದು ಹೋಗುವ ಕತಂಗಾ-ಗೋರಖಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಂಗಾಳಿ ಸಮುದಾಯದ ಜನರಿಗಾಗಿಗ ಈ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಪ್ರಧಾನಿ ಮೋದಿ ಆಗಮನದಿಂದ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ರಸ್ತೆಯ ಎರಡೂ ಬದಿಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಬಂಗಾಳಿ ಸಮುದಾಯಕ್ಕೆ ಹಾಕಿದ್ದ ವೇದಿಕೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಜನ ಸೇರಿದ್ದರು. ಇದರಿಂದ ವೇದಿಕೆ ಕುಸಿದಿದೆ. ಮೂವರಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿದೆ. ಅದೃಷ್ಠವಶಾತ ಹೆಚ್ಚಿನ ನೋವು ಸಂಭವಿಸಿಲ್ಲ. 

ಶತ್ರುಗಳಿಗೂ ಗೊತ್ತಾಗಿದೆ ಇದು ನವಭಾರತ: ಪ್ರಧಾನಿ ಮೋದಿ ಗುಡುಗು

ಪ್ರಧಾನಿ ಮೋದಿ ರೋಡ್ ಶೋ ಜಬಲಪುರದ ಶಹೀದ್ ಭಗತ್ ಸಿಂಗ್ ಕ್ರಾಸಿಂಗ್‌ನಿಂದ ಆರಂಭಗೊಂಡು ಗೋರಖಪುರದ ಸಮೀಪದ ಆದಿ ಶಂಕರಾಚಾರ್ಯ ಸರ್ಕಲ್ ಬಳಿ ಅಂತ್ಯಗೊಂಡಿದೆ. 1.2 ಕಿಲೋಮೀಟರ್ ರೋಡ್ ಶೋಗೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

ಮಧ್ಯಪ್ರದೇಶದಲ್ಲಿ ನಾಲ್ಕು ಹಂತಗಳಲ್ಲಿ ಲೋಕಸಭಾ ಚನಾವಣೆ ನಡೆಯಲಿದೆ. ಏಪ್ರಿಲ್ 19, ಎಪ್ರಿಲ್ 26, ಮೇ 7 ಹಾಗೂ ಮೇ 13ರಂದು ಮತದಾನ ನಡೆಯಲಿದೆ. ಜಬಲಪುರದಲ್ಲಿ ಏಪ್ರಿಲ್ 19ರಂದು ಮತದಾನ ನಡೆಯಲಿದೆ. ಬಿಜೆಪಿ ಅಭ್ಯರ್ಥಿ ಆಶಿಶ್ ದುಬೆ ಭರ್ಜರಿ ಮತಗಳ ಅಂತರದ ಗೆಲುವಿನ ವಿಶ್ವಾಸದಲ್ಲಿದ್ದಾರೆ.

ಭಾರತದಲ್ಲಿ ಲೋಕಸಭಾ ಚುನಾವಣೆ ಏಪ್ರಿಲ್ 19 ರಿಂದ ಆರಂಭಗೊಳ್ಳಲಿದೆ. 7 ಹಂತದಲ್ಲಿ ನಡೆಯಲಿರುವ ಮತದಾನ ಪ್ರಕ್ರಿಯೆ ಜೂನ್ 1 ರಂದು ಅಂತ್ಯಗೊಳ್ಳಲಿದೆ. ಜೂನ್ 4 ರಂದು ಫಲಿತಾಂಶ ಘೋಷಣೆಯಾಗಲಿದೆ. ಕರ್ನಾಟಕದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಎಪ್ರಿಲ್ 26 ಹಾಗೂ ಮೇ 7 ರಂದು ಕರ್ನಾಟಕದಲ್ಲಿ ಮತದಾನ ನಡೆಯಲಿದೆ.  

Lok Sabha Election 2024: ಕರ್ನಾಟಕದ ಬೂತ್‌ಗಳಿಗೆ ಮೋದಿ +370 ಮತ ಗುರಿ..!
 

Follow Us:
Download App:
  • android
  • ios