ತೊಡೆ ಮುಟ್ತಾರೆ, ತೋಳು ಹಿಡಿತಾರೆ, ಮಹಿಳಾ ಬಾಸ್ ನಡೆ ವಿರುದ್ದ ನೋವು ತೋಡಿಕೊಂಡ ಯುವ ಉದ್ಯೋಗಿ , ಪದೇ ಪದೇ ಛೇಂಬರ್‌ಗೆ ಕರೆಯಿಸಿಕೊಂಡು ರಿವ್ಯೂವ್ ಮೀಟಿಂಗ್ ಮಾಡ್ತಾರೆ. ಬಾಸ್‌ಗೆ ಮದುವೆಯಾಗಿದೆ. ಆದರೆ..ಉದ್ಯೋಗಿ ಅಳಲೇನು? 

ಮುಂಬೈ (ಡಿ.02) ಕಚೇರಿಗಳಲ್ಲಿ ನಡೆಯುವ ದೌರ್ಜನ್ಯ ತಡೆಯಲು ಭಾರತದಲ್ಲಿ ಕಟ್ಟು ನಿಟ್ಟಿನ ಕ್ರಮಗಳಿವೆ. ಆದರೆ ದೌರ್ಜನ್ಯಗಳು ಸದ್ದಿಲ್ಲದೆ ನಡೆಯುತ್ತಲೇ ಇದೆ.ಉದ್ಯೋಗ, ವೇತನ ಸೇರಿದಂತೆ ಹಲವು ಕಾರಣಗಳಿಂದ ದೂರು ದಾಖಲಾಗುವುದಿಲ್ಲ. ಸಾಮಾನ್ಯವಾಗಿ ಬಾಸ್‌ಗಳಿಂದ ಕಿರಿಯ ಮಹಿಳಾ ಉದ್ಯೋಗಿಗಳು ಸಮಸ್ಯೆ ಎದುರಿಸಿದ ಹಲವು ಘಟನೆಗಳು ವರದಿಯಾಗಿದೆ. ಹಲವು ಸಂದರ್ಭದಲ್ಲಿ ಕಠಿಣ ಕ್ರಮ ತೆಗೆದುಕೊಂಡಿರುವ ಘಟನೆಗಳು ನಡೆದಿದೆ. ಇದೀಗ 29 ವರ್ಷದ ಯುವ ಉದ್ಯೋಗಿ ತನಗೆ ಆಗುತ್ತಿರುವ ದೌರ್ಜನ್ಯದ ಕುರಿತು ನೋವು ತೋಡಿಕೊಂಡಿದ್ದಾನೆ. ತನ್ನ ಮಹಿಳಾ ಬಾಸ್‌ನಿಂದ ಕಿರಿಕಿಯಾಗುತ್ತಿದೆ. ಆದರೆ ನನ್ನ ತೊಡೆ ಮುಟ್ಟುತ್ತಾಳೆ, ತೋಳು ಹಿಡಿಯುತ್ತಾಳೆ. ಪಕ್ಕ ಕುಳಿತುಕೊಂಡು ಟೆಂಪ್ಟ್ ಮಾಡುವ ಪ್ರಯತ್ನ ಮಾಡುತ್ದಿದ್ದಾಳೆ ಎಂದು ನೋವು ತೋಡಿಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.

ಬಾಸ್ ಜೊತೆ ನಡೆದಿದ್ದೇನು?

ಘಟನೆ ಕುರಿತು ರೆಡ್ಡಿಟ್‌ನಲ್ಲಿ ಯುವ ಉದ್ಯೋಗಿ ನೋವು ತೋಡಿಕೊಂಡಿದ್ದಾರೆ. ಮುಂಬೈನ ಗೋರೆಗಾಂವ್‌ನಲ್ಲಿ ಈ ಘಟನೆ ನಡೆದಿದೆ. 6 ತಿಂಗಳ 29 ವರ್ಷದ ಯುವ ಉದ್ಯೋಗಿ ಕಂಪನಿ ಸೇರಿಕೊಂಡಿದ್ದಾರೆ. ಕೆಲಸಕ್ಕೆ ಸೇರಿದಂತೆ ಒಂದೇ ವಾರದಲ್ಲಿ ಮಹಿಳಾ ಬಾಸ್ ವರ್ತನೆ ವಿಚಿತ್ರ ಎನಿಸುತ್ತು ಎಂದು ರೆಡ್ಡಿಟ್‌ನಲ್ಲಿ ಬರೆದುಕೊಂಡಿದ್ದಾನೆ. ಆರಂಭದಲ್ಲಿ ಮಹಿಳಾ ಬಾಸ್ ಗೊತ್ತಿಲ್ಲದೆ ಟಚ್ ಮಾಡಿರಬಹುದು, ಅಥವಾ ಅವರ ಟಚ್‌ನಲ್ಲಿ ಬೇರೆ ಉದ್ದೇಶ ಇಲ್ಲ ಎಂದುಕೊಂಡಿದ್ದೆ. ಆದರೆ ಪದೇ ಪದೇ ಮಹಿಳಾ ಬಾಸ್ ಕರೆಯಿಸಿಕೊಂಡು ತೊಡೆ ಮುಟ್ಟುತ್ತಾರೆ. ವರ್ತನೆ ವಿಚಿತ್ರವಾಗಿತ್ತು. ಎರಡೇ ವಾರದಲ್ಲಿ ಮಹಿಸಾ ಬಾಸ್ ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ ಎಂದು ಅರಿವಾಯಿತು. ಬಾಸ್ ವರ್ತನೆ ಇಲ್ಲಿಗೆ ನಿಂತಿಲ್ಲ ಎಂದು ರೆಡ್ಡಿಟ್ ಬಳಕೆದಾರ ಹೇಳಿಕೊಂಡಿದ್ದಾನೆ.

ಪಕ್ಕ ಕುಳಿತುಕೊಂಡು ಟೆಂಪ್ಟ್ ಮಾಡ್ತಾರೆ

ರೀವ್ಯೂವ್ ಸೇರಿದಂತೆ ಹಲವು ವಿಚಾರಳಿಗೆ ಬಾಸ್ ಕರೆಯಿಸಿಕೊಳ್ಳುತ್ತಾರೆ. ನನ್ನ ಪಕ್ಕ ಕುಳಿತುಕೊಂಡು ಮೈಮೇಲೆ ಬೀಳುತ್ತಾರೆ. ಒಂದು ಕೈ ಲ್ಯಾಪ್‍‌ಟಾಪ್, ಮೌಸ್ ಎಂದು ಸುಮ್ಮನೆ ಇಟ್ಟರೂ, ಮತ್ತೊಂದು ಕೈ ನನ್ನ ಸೊಂಟ, ತೊಡೆಯನ್ನು ಸುತ್ತುವರಿಯಲು ಪ್ರಯತ್ನಿಸುತ್ತಾ ಇರುತ್ತೆ ಎಂದಿದ್ದಾರೆ

ಮಹಿಳಾ ಬಾಸ್‌ಗೆ ಮದುವೆಯಾಗಿದೆ, ಮಕ್ಕಳಿದ್ದಾರೆ

ಮಹಿಳಾ ಬಾಸ್‌ಗೆ ಮದುವೆಯಾಗಿ ಮಕ್ಕಳಿದ್ದಾರೆ. ಆದರೆ ಅವರ ಈ ವರ್ತನೆ ನನಗೆ ತೀವ್ರ ಕಿರಿಕಿರಿಯಾಗುತ್ತಿದೆ. ನನ್ನ ಕರಿಯರ್‌ಗೂ ಸಮಸ್ಯೆಯಾಗುತ್ತಿದೆ. ನಾನು ಕೆಲಸ ಬದಲಾಯಿಸಬೇಕು ಎಂದುಕೊಂಡಿದ್ದೇನೆ. ಆದರೆ ಈ ಕೆಲಸಕ್ಕೆ ಸೇರಿಕೊಂಡು 6 ತಿಂಗಳಾಗಿದೆ. ಈಗಲೇ ಚೇಂಜ್ ಮಾಡಿದರೆ ನನ್ನ ಕರಿಯರ್‌ಗೆ ಕಪ್ಪು ಚುಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾನೆ.

ದೂರು ನೀಡಲು ಸಲಹೆ

ಯುವಕ ರೆಡ್ಡಿಟ್‌ನಲ್ಲಿ ಈ ಘಟನೆ ಹಂಚಿಕೊಂಡು ಸಲಹೆ ಕೇಳಿದ್ದಾನೆ. ಈ ರೀತಿಯ ದೌರ್ಜನ್ಯ ಮಟ್ಟ ಹಾಕಲು ಪ್ರತಿ ಕಚೇರಿಯಲ್ಲಿ ಪಾಶ್ (POSH) ಸಮಿತಿಗೆ ದೂರು ನೀಡಲು ಹಲವರು ಸಲಹೆ ನೀಡಿದ್ದಾರೆ. ಇದೇ ವೇಳೆ ಮತ್ತೆ ಕೆಲವರು ದೂರು ನೀಡಿದ ಬಳಿಕ ವಾತಾವರಣ ಹೆಚ್ತು ಟಾಕ್ಸಿಕ್ ಆಗಲಿದೆ. ವರ್ಕೋಹಾಲಿಕ್ ವಾತಾವರಣ ಸೃಷ್ಟಿಯಾಗಲಿದೆ. ಪ್ರತಿ ವಿಚಾರಕ್ಕೂ ನಿಯಮ, ಶಿಸ್ತು ಪಾಲನೆಯಾಗುತ್ತದೆ ಎಂದಿದ್ದಾರೆ.