ಶುಲ್ಕ ವಿವಾದ: ಕೇಂದ್ರ ಸರ್ಕಾರ ಚಾಟಿ ಬೀಸಿದ ನಂತರ ತಣ್ಣಗಾದ ಗೂಗಲ್
ಚ್ಚು ಶುಲ್ಕ ಪಾವತಿಸಲು ಒಪ್ಪದ ಭಾರತ್ ಮ್ಯಾಟ್ರಿಮೋನಿ.ಕಾಮ್, ಜೀವನ್‌ಸಾಥಿ. ಕಾಮ್, ನೌಕ್ರಿ.ಕಾಮ್ ಸೇರಿದಂತೆ ಪ್ರಸಿದ್ದ 10 ಭಾರತೀಯ ಆ್ಯಪ್‌ಗಳನ್ನು ತನ್ನ ವೇದಿಕೆಯಿಂದ ಕಿತ್ತು ಹಾಕಿದ್ದ ಗೂಗಲ್ ಪ್ಲೇಸ್ಟೋರ್, ಶನಿವಾರ ತಣ್ಣಗಾಗಿದೆ.
ನವದೆಹಲಿ: ಹೆಚ್ಚು ಶುಲ್ಕ ಪಾವತಿಸಲು ಒಪ್ಪದ ಭಾರತ್ ಮ್ಯಾಟ್ರಿಮೋನಿ.ಕಾಮ್, ಜೀವನ್‌ಸಾಥಿ. ಕಾಮ್, ನೌಕ್ರಿ.ಕಾಮ್ ಸೇರಿದಂತೆ ಪ್ರಸಿದ್ದ 10 ಭಾರತೀಯ ಆ್ಯಪ್‌ಗಳನ್ನು ತನ್ನ ವೇದಿಕೆಯಿಂದ ಕಿತ್ತು ಹಾಕಿದ್ದ ಗೂಗಲ್ ಪ್ಲೇಸ್ಟೋರ್, ಶನಿವಾರ ತಣ್ಣಗಾಗಿದೆ. ಕೇಂದ್ರ ಸರ್ಕಾರದ ತೀವ್ರ ವಿರೋಧ ಎದುರಾದ ಕಾರಣ ಅಮೆರಿಕದ ದೈತ್ಯ ಟೆಕ್ ಕಂಪನಿ, ತನ್ನ ನಿರ್ಧಾರದಿಂದ ಹಿಂದೆ ಸರಿದು ಮತ್ತೆ ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್‌ಗಳಿಗೆ ಸ್ಥಾನ ನೀಡಲು ಒಪ್ಪಿದೆ.
ಭಾರತ್ ಮ್ಯಾಟ್ರಿಮೋನಿ, ಕ್ರಿಶ್ಚಿಯನ್ ಮ್ಯಾಟ್ರಿ ಮೋನಿ, ಮುಸ್ಲಿಂ ಮ್ಯಾಟ್ರಿಮೋನಿ, ಜೋಡಿ, ಜೀವನ್‌ಸಾಥಿ, ನೌಕ್ರಿ, 99 ಏಕರ್ಸ್, ಶಿಕ್ಷಾ.ಕಾಮ್ ನಂತಹ ಪ್ರಸಿದ್ಧ ಭಾರತೀಯ ವೆಬ್‌ಸೈಟುಗಳ ಮೊಬೈಲ್ ಆ್ಯಪ್‌ಗಳನ್ನು ಶುಕ್ರವಾರ ಗೂಗಲ್ ಪ್ಲೇಸ್ಟೋರ್ ಡಿಲೀಟ್ ಮಾಡಿತ್ತು. ಇವುಗಳಲ್ಲಿ ಹೆಚ್ಚಿನವು ವಧೂವರರನ್ನು ಹುಡುಕುವ ಆ್ಯಪ್ ಗಳಾಗಿದ್ದರೆ, ಇನ್ನು ಕೆಲವು ಆ್ಯಪ್‌ಗಳು ನೌಕರಿ ಹುಡುಕಲು ಸಹಕರಿಸುವ, ಬಾಡಿಗೆ ಮನೆ ಹುಡುಕುವ ಹಾಗೂ ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿದ ಆ್ಯಪ್‌ಗಳಾಗಿವೆ.
ಪಾಕ್‌ಗೆ ಹೊರಟಿದ್ದ ಚೀನಾ ಶಸ್ತ್ರಾಸ್ತ್ರ ಹಡಗು ಭಾರತದಲ್ಲಿ ಜಪ್ತಿ
ಈ ಆ್ಯಪ್‌ಗಳನ್ನು ಏಕಪಕ್ಷೀಯವಾಗಿ ಡಿಲೀಟ್ ಮಾಡಿರುವುದಕ್ಕೆ ಗೂಗಲ್ ಪ್ಲೇಸ್ಟೋರ್ ವಿರುದ್ಧ ಭಾರತ ಸರ್ಕಾರ ಕ್ರುದ್ಧಗೊಂಡಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, 'ಭಾರತದ ಸ್ಟಾರ್ಟಪ್ ಕಂಪನಿಗಳ ಹಣೆಬರಹವನ್ನು ಯಾವುದೋ ದೈತ್ಯ ಟೆಕ್ ಕಂಪನಿ ನಿರ್ಧರಿಸಲು ನಾವು ಬಿಡುವುದಿಲ್ಲ. ನಮ್ಮ ಸ್ಟಾರ್ಟಪ್‌ಗಳಿಗೆ ಬೇಕಾದ ರಕ್ಷಣೆಯನ್ನು ನಾವು ನೀಡುತ್ತೇವೆ ಎಂದಿದ್ದರು.
ಗೂಗಲ್ ಪರ ನಿಂತಿದ್ದ ಸುಪ್ರೀಂಕೋರ್ಟ್
ಪ್ಲೇಸ್ಟೋರ್‌ನಲ್ಲಿ ಆ್ಯಪ್‌ಗಳನ್ನು ಲಿಸ್ಟ್ ಮಾಡಿದ್ದಕ್ಕೆ ಪ್ರತಿಯಾಗಿ ಗೂಗಲ್ ಕಂಪನಿಯು ಆ್ಯಪ್‌ನಲ್ಲಿ ನಡೆಯುವ ಹಣ ಪಾವತಿಯ ಮೇಲೆ ಭಾರತೀಯ ಸ್ಟಾರ್ಟಪ್ ಗಳಿಂದ ಶೇ.11ರಿಂದ ಶೇ.26ರಷ್ಟು ಶುಲ್ಕ ಸಂಗ್ರಹಿಸುತ್ತಿತ್ತು. ಅದಕ್ಕೂ ಮುನ್ನ ಶೇ.15ರಿಂದ ಶೇ.30ರಷ್ಟು ಶುಲ್ಕ ಸಂಗ್ರಹಿಸುತ್ತಿದ್ದುದಕ್ಕೆ ಭಾರತ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಶುಲ್ಕವನ್ನು ಇಳಿಸಲಾಗಿತ್ತು. ಆದರೆ ಗೂಗಲ್ ಕಂಪನಿ ಸುಪ್ರೀಂಕೋರ್ಟ್‌ಗೆ ಹೋಗಿ ಜಯಿಸಿತ್ತು.