Asianet Suvarna News Asianet Suvarna News

ರಾಮ ಮಂದಿರ ಪ್ರಾಣ ಪ್ರತಿಷ್ಠೆಯಲ್ಲಿ ಭಾಗಿ: ಇಮಾಮ್ ಸಂಘಟನೆ ಮುಖ್ಯಸ್ಥರ ವಿರುದ್ಧ ಫತ್ವಾ, ಬೆದರಿಕೆ ಕರೆಗಳು!

ಫತ್ವಾ ಹೊರಡಿಸಲಾಗಿದೆ. ಜನವರಿ 22 ರ ಸಂಜೆಯಿಂದಲೇ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಅದರಲ್ಲಿ ಕರೆ ಮಾಡಿದವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಇಮಾಮ್‌ ಆರೋಪಿಸಿದ್ದಾರೆ.

fatwa issued against all india imam organization chief for attending pran pratishtha at ram temple ash
Author
First Published Jan 30, 2024, 12:30 PM IST

ಹೊಸದಿಲ್ಲಿ (ಜನವರಿ 30, 2024): ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಅತವಾ ಬಾಲಕ ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಭಾಗವಹಿಸಿದ್ದ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯಸ್ಥ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ವಿರುದ್ಧ ಫತ್ವಾ ಹೊರಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಇನ್ನು, ಈ ಸಂಬಂಧ ಮಾತನಾಡಿದ ಡಾ. ಇಲ್ಯಾಸಿ, ಫತ್ವಾವನ್ನು ಭಾನುವಾರ ಹೊರಡಿಸಲಾಗಿದೆ ಆದರೆ ರಾಮ ಮಂದಿರದ ಕಾರ್ಯಕ್ರಮಕ್ಕೆ ಭೇಟಿ ನೀಡಿದಾಗಿನಿಂದಲೂ ತನಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಇಮಾಮ್ ಹೇಳಿದ್ದಾರೆ.

ದ್ವೇಷಿಗಳು ಪಾಕಿಸ್ತಾನಕ್ಕೆ ಹೋಗಬಹುದು: ಇಮಾಮ್
ತನ್ನ ಮೇಲೆ ಫತ್ವಾ ಹೊರಡಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಆಲ್ ಇಂಡಿಯಾ ಇಮಾಮ್ ಸಂಘಟನೆಯ ಮುಖ್ಯಸ್ಥ ಡಾ. ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ, ನಿನ್ನೆ [ಭಾನುವಾರ] ಫತ್ವಾ ಹೊರಡಿಸಲಾಗಿದೆ. ಆದರೆ ಜನವರಿ 22 ರ ಸಂಜೆಯಿಂದಲೇ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ನಾನು ಕೆಲವು ಕರೆಗಳನ್ನು ರೆಕಾರ್ಡ್ ಮಾಡಿದ್ದು, ಅದರಲ್ಲಿ ಕರೆ ಮಾಡಿದವರು ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂವಿಧಾನ ರಚನೆಕಾರರಿಗೂ ರಾಮ ಸ್ಫೂರ್ತಿ: ಮೋದಿ; ಮನ್‌ ಕೀ ಬಾತ್‌ನಲ್ಲಿ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಸ್ಮರಣೆ

ಅಲ್ಲದೆ, ನನ್ನನ್ನು ಪ್ರೀತಿಸುವವರು ಹಾಗೂ ರಾಷ್ಟ್ರವನ್ನು ಪ್ರೀತಿಸುವವರು ನನ್ನನ್ನು ಬೆಂಬಲಿಸುತ್ತಾರೆ. ಪ್ರಾಣಪ್ರತಿಷ್ಠೆ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕಾಗಿ ನನ್ನನ್ನು ದ್ವೇಷಿಸುವವರು ಬಹುಶಃ ಪಾಕಿಸ್ತಾನಕ್ಕೆ ಹೋಗಬೇಕು. ನಾನು ಪ್ರೀತಿಯ ಸಂದೇಶವನ್ನು ನೀಡಿದ್ದೇನೆ, ನಾನು ಯಾವುದೇ ಅಪರಾಧ ಮಾಡಿಲ್ಲ. ಈ ಹಿನ್ನೆಲೆ, ನಾನು ಕ್ಷಮೆಯಾಚಿಸುವುದಿಲ್ಲ ಅಥವಾ ರಾಜೀನಾಮೆ ನೀಡುವುದಿಲ್ಲ, ಅವರು ಏನು ಬೇಕಾದರೂ ಮಾಡಬಹುದು ಎಂದೂ ಇಮಾಮ್ ಹೇಳಿದರು.

'ಪ್ರೀತಿ ಹರಡುವುದು ನನ್ನ ಉದ್ದೇಶವಾಗಿತ್ತು'

ಈ ಮಧ್ಯೆ, ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಹೋಗುವ ನಿರ್ಧಾರವು ನನ್ನ ಜೀವನದ ಅತ್ಯಂತ ದೊಡ್ಡ ನಿರ್ಧಾರಗಳಲ್ಲಿ ಒಂದಾಗಿದೆ ಎಂದೂ ಇಮಾದ್ ಹೇಳಿದರು. ನಾನು ಎರಡು ದಿನಗಳ ಕಾಲ ಅದರ ಬಗ್ಗೆ ಯೋಚಿಸಿದೆ. ನಾನು ಪರಸ್ಪರ ಸಾಮರಸ್ಯಕ್ಕಾಗಿ ಅಯೋಧ್ಯೆಗೆ ಹೋಗಲು ನಿರ್ಧರಿಸಿದೆ. ಎಲ್ಲಾ ಸಂತರು ಮತ್ತು ಮಂದಿರ ಟ್ರಸ್ಟ್ ನನ್ನನ್ನು ಹೃದಯದಿಂದ (ಅಯೋಧ್ಯೆಯಲ್ಲಿ) ಸ್ವಾಗತಿಸಿತು. ನನ್ನ ಉದ್ದೇಶವು ಪ್ರೀತಿಯ ಸಂದೇಶವನ್ನು ಹರಡುವುದಾಗಿತ್ತು ಎಂದೂ ಅವರು ಹೇಳಿದರು.

ರಾಮ ಮಂದಿರ ಲೋಕಾರ್ಪಣೆ ಬೆನ್ನಲ್ಲೇ ಚೀನಾ ಸೈನಿಕರಿಂದ ಜೈ ಶ್ರೀ ರಾಮ್‌ ಘೋಷಣೆ! ವಿಡಿಯೋ ವೈರಲ್

ಆದರೆ ಅಯೋಧ್ಯೆಯಿಂದ ಹಿಂದಿರುಗಿದ ನಂತರ, ನನ್ನ ಮೇಲೆ ನಿಂದನೆ ಮಾಡಲಾಗುತ್ತಿದೆ ಮತ್ತು ಈಗ ನನ್ನ ವಿರುದ್ಧ 'ಫತ್ವಾ' ಹೊರಡಿಸಲಾಗಿದೆ. ಮುಖ್ಯ ಇಮಾಮ್ ಆಗಿರುವ ನಾನು ಕಾರ್ಯಕ್ರಮಕ್ಕೆ ಹಾಜರಾಗಬಾರದು ಎಂದು 'ಫತ್ವಾ' ಹೇಳಿಕೊಂಡಿದೆ. ಇದು ನನ್ನ ನಡುವೆ ಮತ್ತು ನನ್ನ ಅಲ್ಲಾ ನಡುವೆ ಎಂದು ನಾನು ಹೇಳಲು ಬಯಸುತ್ತೇನೆ. ನನ್ನ ಕೃತ್ಯಕ್ಕೆ ನಾನು ಕ್ಷಮೆಯಾಚಿಸುವುದಿಲ್ಲ ಎಂದೂ ಇಮಾಮ್ ಹೇಳಿದರು.

Follow Us:
Download App:
  • android
  • ios