ಹಲವು ವರ್ಷಗಳ ಹಿಂದೆಯೇ ಈ ಮದುವೆ ನಡೆದಿದ್ದರು. ಮುಸ್ಲಿಂ ಹುಡುಗಿಯನ್ನು ಅವರು ಸೊಸೆ ಎಂದು ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ ಅಂಬೇಶ್ ಹಾಗೂ ಆತನ ಪತ್ನಿ ಪರಸ್ಪರ ದೂರಾಗುವ ನಿರ್ಧಾರ ಮಾಡಿದ್ದರು.
ಜೌನ್‌ಪುರ: ನಾಪತ್ತೆಯಾಗಿದ್ದ ವೃದ್ಧ ದಂಪತಿಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹುಡುಕುವುದಕ್ಕೆ ಹೊರಟ ಪೊಲೀಸರಿಗೆ ಸ್ಪೋಟಕ ಸತ್ಯ ಬೆಳಕಿಗೆ ಬಂದಿತು. ದಂಪತಿಯ ಡಬ್ಬಲ್ ಮರ್ಡರ್ ಆಗಿತ್ತು. ಅವರ ಎಂಜಿನಿಯರ್ ಪುತ್ರನೇ ಈ ಕೃತ್ಯವೆಸಗಿದ್ದಾನೆ ಎಂಬುದು ಪೋಷಕರನ್ನು ಬೆಚ್ಚಿ ಬೀಳಿಸಿತ್ತು. ಘಟನೆಗೆ ಸಂಬಂಧಿಸಿದಂತೆ ದಂಪತಿಯ ಮಗ ಅಂಬೇಶ್‌ನಲ್ಲಿ ಬಂಧಿಸಿರುವ ಪೊಲೀಸರು ದಂಪತಿ ನಾಪತ್ತೆ ಪ್ರಕರಣವನ್ನು ಬೇಧಿಸಿದ್ದಾರೆ. 62 ವರ್ಷದ ಶ್ಯಾಮ್ ಬಹದ್ದೂರ್ ಹಾಗೂ 60 ವರ್ಷದ ಬಬಿತಾ ಕೊಲೆಯಾದ ದಂಪತಿ. ತನ್ನ ಪೋಷಕರ ಕೊಲೆ ಮಾಡಿದ ಆರೋಪಿ ಅವರ ದೇಹವನ್ನು ಗರಗಸಾದಿಂದ ಕತ್ತರಿಸಿ ನದಿಗೆಸೆದಿದ್ದ.
ಪೊಲೀಸರ ಪ್ರಕಾರ ಕೊಲೆ ಮಾಡಿದ ಮಗ ಅಂಬೇಶ್‌ಗೂ ಆತನ ಪೋಷಕರಿಗೂ ಅಂಬೇಶ್ ಅಂತರ್ಧರ್ಮೀಯ ಮದುವೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಮನಸ್ತಾಪವಿತ್ತು. ಅಂಬೇಶ್ ಮುಸ್ಲಿಂ ಮಹಿಳೆಯೊಬ್ಬಳನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಮದುವೆಗೆ ಅಂಬೇಶ್‌ನ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹಲವು ವರ್ಷಗಳ ಹಿಂದೆಯೇ ಈ ಮದುವೆ ನಡೆದಿದ್ದರು. ಮುಸ್ಲಿಂ ಹುಡುಗಿಯನ್ನು ಅವರು ಸೊಸೆ ಎಂದು ಸ್ವೀಕರಿಸಲು ನಿರಾಕರಿಸಿದ್ದರು. ಹೀಗಾಗಿ ಅಂಬೇಶ್ ಹಾಗೂ ಆತನ ಪತ್ನಿ ಪರಸ್ಪರ ದೂರಾಗುವ ನಿರ್ಧಾರ ಮಾಡಿದ್ದರು. ಹೀಗಿರುವಾಗ ಆತ ತನ್ನ ಪತ್ನಿಗೆ ಜೀವನಾಂಶ ನೀಡಬೇಕಿತ್ತು. ಇದಕ್ಕಾಗಿ ಆತನಿಗೆ ಹಣ ಬೇಕಿತ್ತು. ಈ ಬಗ್ಗೆ ತಂದೆಗೆ ಕೇಳಿದಾಗ ತಂದೆ ಶ್ಯಾಮ್ ಬಹದ್ದೂರ್ ನಿರಾಕರಿಸಿದ್ದಾರೆ. ಇದು ಮಗ ಅಂಬೇಶ್‌ನನ್ನು ಕೆರಳುವಂತೆ ಮಾಡಿತ್ತು. ಇದೇ ವಿಚಾರಕ್ಕೆ ಜಗಳ ನಡೆದು ಹೆತ್ತು ಹೊತ್ತು ಸಾಕಿದ ಪೋಷಕರನ್ನೇ ಯಮಪುರಿಗೆ ಅಟ್ಟಿದ್ದಾನೆ ಈ ಮಗ ಅಂಬೇಶ್.
ಡಿಸೆಂಬರ್ 13 ರಂದು ಅಂಬೇಶ್‌ನ ಸೋದರಿ ವಂದನಾ ಜೌನ್‌ಪುರದ ಝಫರಾಬಾದ್‌ನ ಪೊಲೀಸ್ ಠಾಣೆಯಲ್ಲಿ ತಮ್ಮ ಪೋಷಕರು ನಾಪತ್ತೆಯಾದ ಬಗ್ಗೆ ಪ್ರಕರಣ ದಾಖಲಿಸಿದ್ದರು. ಅವರು ತನ್ನ ಸೋದರ ಹಾಗೂ ಪೋಷಕರು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಳು. ಅಂಬೇಶ್ ನನಗೆ ಡಿಸೆಂಬರ್ 8ರಂದು ಕರೆ ಮಾಡಿದ್ದು, ಪರಸ್ಪರ ಗಲಾಟೆಯ ನಂತರ ಅಪ್ಪ ಅಮ್ಮ ಮನೆಬಿಟ್ಟು ಹೋಗಿದ್ದಾರೆ ಅವರನ್ನು ಹುಡುಕುವುದಕ್ಕೆ ಹೋಗುತ್ತಿರುವುದಾಗಿ ಆತ ಹೇಳಿದ್ದ. ಇದಾದ ನಂತ ಅಂಬೇಶ್‌ನ ಫೋನ್ ಕೂಡ ಸ್ವಿಚ್‌ಆಫ್ ಆಗಿದೆ. ಆತನನ್ನು ಸಂಪರ್ಕಿಸುವುದಕ್ಕೆ ನನಗೆ ಸಾಧ್ಯವಾಗುತ್ತಿಲ್ಲ ಎಂದು ತಾನು ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾಗಿ ಅಂಬೇಶ್ ಸೋದರಿ ವಂದನಾ ಹೇಳಿದ್ದಾರೆ. ವಂದನಾ ಪ್ರಕರಣ ದಾಖಲಿಸಿದ ನಂತರ ಪೊಲೀಸರು ಈ ಮೂವರಿಗಾಗಿ ಹುಡುಕಾಟ ನಡೆಸಿದ್ದಾರೆ. ಅಂಬೇಶ್‌ನ ಫೋನ್ ಸ್ವಿಚ್‌ಆಫ್ ಬಂದಿದ್ದರಿಂದ ಪೊಲೀಸರಿಗೆ ಅನುಮಾನ ಬಂದಿದೆ. ನಂತರ ವಾರದ ನಂತರ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಅತ್ತುಕೊಂಡು ತಾನು ಎಸಗಿದ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಬಾಯ್ ಏಕತಾ ಪ್ರತಿಮೆಯ ಶಿಲ್ಪಿ, ಶತಾಯುಷಿ ರಾಮ್ ಸುತರ್ ಇನ್ನಿಲ್ಲ
ಕೊಲೆಯಾದ ಶ್ಯಾಮ ಬಹಾದ್ದೂರ್ ನಿವೃತ್ತ ರೈಲ್ವೆ ಉದ್ಯೋಗಿಯಾಗಿದ್ದು, ಅವರಿಗೆ ಪತ್ನಿ ಬಬಿತಾ ಮೂವರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದ. ಮಗ ಅಂಬೇಶ್ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿದ್ದ. ಆದರೆ ಪೋಷಕರು ಆತನ ಮದುವೆಯನ್ನು ಒಪ್ಪಿಕೊಳ್ಳಲಿಲ್ಲ. ಜೊತೆಗೆ ಸೊಸೆಯನ್ನು ಮನೆಗೆ ಸೇರಿಸಿಕೊಳ್ಳಲಾಗದು ಎಂದು ಹೇಳಿದ್ದಾರೆ. ಅಂಬೇಶ್‌ಗೆ ಈ ಮದುವೆಯಲ್ಲಿ ಎರಡು ಮಕ್ಕಳು ಕೂಡ ಇದ್ದಾರೆ. ಆದರೆ ಮದುವೆಯಾಗಿ ಇಷ್ಟು ವರ್ಷಗಳು ಕಳೆದರೂ, ಮೊಮ್ಮಕ್ಕಳೇ ಜನಿಸಿದ್ದರೂ ಅಂಬೇಶ್ ತಂದೆ ಶ್ಯಾಮ ಬಹದ್ದೂರ್ ಮಾತ್ರ ಸೊಸೆಯನ್ನು ಒಪ್ಪಿಕೊಳ್ಳದೇ ತಮ್ಮ ಹಠವನ್ನೇ ಮುಂದಿಟ್ಟಿದ್ದರು. ಸೊಸೆಯನ್ನು ಮನೆಗೆ ಕರೆತರಲು ಬಿಡುತ್ತಿರಲಿಲ್ಲ. ಅಲ್ಲದೇ ಸೊಸೆಯನ್ನು ಬಿಡುವಂತೆ ಮಗನಿಗೆ ಹೇಳುತ್ತಲೇ ಇದ್ದರು. ತಂದೆಯ ಈ ಹಠದಿಂದ ಬೇಸತ್ತ ಅಂಬೇಶ್ ತನ್ನ ಪತ್ನಿಗೆ ಈ ವಿಚಾರದ ಬಗ್ಗೆ ಹೇಳಿ ಪರಸ್ಪರ ದೂರಾಗೋಣ ಎಂದು ನಿರ್ಧರಿಸಿದ್ದ. ಕೊನೆಗೆ ಅ ಹೆಣ್ಣು ಮಗಳು ಅದಕ್ಕೂ ಒಪ್ಪಿ 5 ಲಕ್ಷ ರೂಪಾಯಿ ಜೀವನಾಂಶ ನೀಡುವಂತೆ ಕೇಳಿದ್ದಳು.
ಪೋಷಕರ ಒತ್ತಡ ತಡೆಯಲಾಗದೇ ಮದುವೆಯನ್ನು ಕೊನೆಗಾಣಿಸಲು ಬಯಸಿದ್ದ ಅಂಬೇಶ್‌ಗೆ ಈಗ ಪತ್ನಿಗೆ ಜೀವನಾಂಶ ನೀಡುವುದಕ್ಕೆ 5 ಲಕ್ಷ ರೂಪಾಯಿಗಳ ಅಗತ್ಯವಿತ್ತು. ಜೌನ್‌ಪುರದಲ್ಲಿ ಕೆಲ ತಿಂಗಳ ಕಾಲ ವಾಸವಿದ್ದ ಅಂಬೇಶ್ ಹೆಂಡ್ತಿಗೆ ಜೀವನಾಂಶ ಹಣ ನೀಡುವುದಕ್ಕೆ ಸಹಾಯ ಮಾಡುವಂತೆ ತಂದೆಯ ಬಳಿ ಡಿಸೆಂಬರ್ 8 ರಂದು ಕೇಳಿದ್ದ. ಆದರೆ ಶ್ಯಾಮ್ ಬಹದ್ದೂರ್ ಅದಕ್ಕೂ ನಿರಾಕರಿಸಿದ್ದರು. ಇದು ಅಂಬೇಶ್ ಹಾಗೂ ಆತನ ಪೋಷಕರ ಮಧ್ಯೆ ವಾಗ್ವಾದಕ್ಕೆ ಕಾರಣವಾಯ್ತು. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಅಂಬೇಶ್ ಮೊದಲಿಗೆ ಮಸಾಲೆ ಅರಿಯುವ ಕಲ್ಲಿನಿಂದ ತಾಯಿಗೆ ಹೊಡೆದಿದ್ದಾನೆ. ಬಬಿತಾ ನೋವಿನಿಂದ ನರಳುತ್ತಿದ್ದಂತೆ, ಶ್ಯಾಮ್ ಬಹದ್ದೂರ್ ಕಿರುಚಲು ಪ್ರಾರಂಭಿಸಿದ್ದಲ್ಲದೇ ಸಹಾಯಕ್ಕಾಗಿ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ಅಂಬೇಶ್ ತಂದೆಯ ತಲೆಗೂ ಹಲವಾರು ಬಾರಿ ಹೊಡೆದಿದ್ದಾನೆ. ಪರಿಣಾಮ ವೃದ್ಧ ದಂಪತಿಗಳಿಬ್ಬರು ಶೀಘ್ರದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಜ್ಯೂಸ್ ಕೊಡಿಸ್ತಿನಿ ಎಂದು ಕರೆದೊಯ್ದು ಹಲವು ಅಪ್ರಾಪ್ತರ ಮೇಲೆ 45 ವರ್ಷದ ಕಾಮುಕನಿಂದ ಅತ್ಯಾ*ಚಾರ
ಇಬ್ಬರನ್ನು ಕೊಲೆ ಮಾಡಿದ ನಂತರ ಅಂಬೇಶ್ ಸಾಕ್ಷಿ ನಾಶ ಮಾಡುವುದಕ್ಕೆ ಮುಂದಾಗಿದ್ದಾನೆ. ದೇಹವನ್ನು ಎಸೆಯುವುದಕ್ಕೆ ದೊಡ್ಡ ಬ್ಯಾಗ್‌ಗಾಗಿ ಹುಡುಕಾಟ ನಡೆಸಿದ್ದಾನೆ. ಸಿಗದೇ ಹೋದಾಗ ದೇಹವನ್ನು ಗರಗಸದಿಂದ ಸಣ್ಣ ತುಂಡುಗಳಾಗಿ ಕತ್ತರಿಸಿ ಬ್ಯಾಗ್‌ಗಳಿಗೆ ತುಂಬಿಸಿ ಬಳಿಕ ಕಾರಿನ ಡಿಕ್ಕಿಗೆ ತುಂಬಿಸಿ ನದಿಗೆ ಎಸೆದಿದ್ದಾನೆ. ನಂತೆ ಸಹೋದರಿಗೆ ಕರೆ ಮಾಡಿ ಪೋಷಕರು ಮನೆ ಬಿಟ್ಟು ಹೋಗಿದ್ದಾರೆ ಎಂದು ತಿಳಿಸಿದ್ದಾನೆ. ನಂತರ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಕೃತ್ಯವೆಸಗಿದ ಆರು ದಿನಗಳ ಕಾಲ ಫೋನ್ ಸ್ವಿಚ್ ಆಫ್ ಮಾಡಿ ಓಡಾಡಿದ್ದಾನೆ. ಡಿಸೆಂಬರ್ 14ರಂದು ಆತ ಜೌನ್‌ಪುರಕ್ಕೆ ಬಂದಾಗ ಸಹೋದರಿಯರ ಕಣ್ಣಿಗೆ ಆತ ಕಂಡಿದ್ದು, ಪೋಷಕರ ಬಗ್ಗೆ ಕೇಳಿದ್ದಾರೆ. ಅವನು ತಪ್ಪಿಸಿಕೊಳ್ಳುವುದಕ್ಕೆ ನೋಡಿದಾಗ ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ಬಂಧಿಸಿ ವಿಚಾರಿಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಮಗನ ಮೆಚ್ಚಿದವಳು, ಸೊಸೆಯಾಗಿ ಬಂದವಳು ಎರಡು ವಂಶದ ಕುಡಿಯ ಹೆತ್ತವಳನ್ನು, ಹಠ ಮರೆತು ಉದಾರ ಮನಸ್ಸಿನಿಂದ ಸೊಸೆಯಾಗಿ ಒಪ್ಪಿಕೊಂಡಿದ್ದರೆ ಇಂತಹದೊಂದು ಅನಾಹುತ ನಡೆಯುತ್ತಿರಲಿಲ್ಲವೇನೋ. ಈ ಬಗ್ಗೆ ನಿಮಗೇನನಿಸುತ್ತಿದೆ.


