ಮಗನ ಜೊತೆಗೇ ಎಲ್‌ಎಲ್‌ಬಿ ಓದಿದ ತಂದೆ | ಒಟ್ಟಿಗೇ ಎಂಟ್ರೆನ್ಸ್ ಎಕ್ಸಾಮ್ ಬರೆದವ್ರು ಒಟ್ಟಿಗೇ ವಕೀಲರಾದ್ರು

ತಿರುವನಂತಪುರಂ(ಏ.27): ಅಪರೂಪದ ಘಟನೆಯೊಂದರಲ್ಲಿ ಅಪ್ಪ ಮತ್ತು ಮಗ ಒಟ್ಟಿಗೇ ವಕೀಲರಾಗಿರುವ ಘಟನೆ ಕೇರಳದ ತ್ರಿಶೂರ್‌ನ ವಡಕ್ಕೇಕಾಡಿನಲ್ಲಿ ನಡೆದಿದೆ. ವೈಲತ್ತೂರು ನಿವಾಸಿ ಮಾರ್ಟಿನ್ ಥೋಮಸ್ ಮತ್ತು ಮಗ ಗೆಬ್ರಿಯಾಲ್ ವಕೀಲರಾದ ಅಪ್ಪ-ಮಗ.

54 ವರ್ಷದ ಮಾರ್ಟಿನ್ 5 ವರ್ಷದ ಹಿಂದೆ ಕಾನೂನು ಕಲಿಯಬೇಕೆಂದು ನಿರ್ಧರಿಸಿದ್ದರು. ಸಿಎ ಆಗಬೇಕೆಂದುಕೊಂಡಿದ್ದ ಗೆಬ್ರಿಯಾಲ್ ಪಿಯುಸಿ ಓದಿ ನಂತರ ತಾನೂ ಎಲ್‌ಎಲ್‌ಬಿ ಮಾಡಬೇಕೆಂದುಕೊಂಡ. ಇಬ್ಬರೂ ಒಟ್ಟಿಗೇ ಪ್ರವೇಶ ಪರೀಕ್ಷೆ ಕೂಡಾ ಬರೆದರು. ಒಂದೇ ದಿನ ವಕೀಲರಾಗಿಯೂ ನಿಯೋಜಿತರಾಗಿದ್ದಾರೆ.

ವರನಿಗೆ ಪಾಸಿಟಿವ್: PPE ಕಿಟ್ ಧರಿಸಿ ಮದುವೆಯಾದ ಜೋಡಿ

25 ವಿದೇಶದಲ್ಲಿದ್ದ ಮಾರ್ಟಿನ್ 2015ರಲ್ಲಿ ಕೇರಳಕ್ಕೆ ಬಂದಿದ್ದರು. ಪ್ರವೇಶ ಪರೀಕ್ಷೆ ನಂತರ ತ್ರಿಶೂರ್‌ನ ಕಾನೂನು ಕಾಲೇಜಿಗೆ ಸೇರಿಕೊಂಡಿದ್ದರು. ಗೆಬ್ರಿಯಾಲ್ ಲಕ್ಕಿಡಿಯ ನೆಹರು ಕಾಲೇಜಿಗೆ ಸೇರಿದ್ದರು. ಬೆಳಗ್ಗೆಯಿಂದ ಸಂಜೆ 4ರ ತನಕ ತರಗತಿಗಳು ನಡೆಯುತ್ತಿದ್ದವು.

ಆರಂಭದಲ್ಲಿ ಇದು ಕಷ್ಟವಾಗಿದ್ದರೂ ನಂತರ ಮಾರ್ಟಿನ್ ವಿದ್ಯಾರ್ಥಿ ಜೀವನ ಎಂಜಾಯ್ ಮಾಡಿದ್ದರು. ಟ್ರಾವೆಲ್ ಮತ್ತು ಟೂರಿಸಂ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಾರ್ಟಿನ್ ಆರ್ಥಿಕ ಸಮಸ್ಯೆಯಿಂದ ಕೇರಳಕ್ಕೆ ಬಂದಿದ್ದರು.

ಪಾರ್ಕ್, ಪಾರ್ಕಿಂಗ್ ಸ್ಲಾಟ್ ಎಲ್ಲವೂ ಈಗ ಸ್ಮಶಾನ..!

ಇದೀಗ ಗಲ್ಫ್‌ನಲ್ಲಿ ಕಾನೂನು ಸಮಾಲೋಚನೆ ಕೇಂದ್ರ ತೆರೆಯುವ ಯೋಜನೆಯಲ್ಲಿದ್ದಾರೆ ಅಪ್ಪ ಮತ್ತು ಮಗ. ಗೆಬ್ರಿಯಾಲ್ ಮಾರ್ಟಿನ್ ಅವರ ಹಿರಿಯ ಮಗ. ಮಾರ್ಟಿನ್ ಅವರ ಕಿರಿಯ ಮಗಳು ಕೂಡಾ ಕಾನೂನು ವಿದ್ಯಾರ್ಥಿನಿ