ಮದುಮಗನಿಗೆ ಕೊರೋನಾ ಪಾಸಿಟಿವ್ | ಪಿಪಿಇ ಕಿಟ್ ಧರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ದೆಹಲಿ(ಏ.24): ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೊರೋನಾ ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಲಾಕ್‌ಡೌನ್, ಕರ್ಫ್ಯು ಮಧ್ಯೆ ನಿಗದಿಯಾದ ಮದುವೆಗಳೂ, ಕಾರ್ಯಕ್ರಮಗಳೂ ಕೊರೋನಾ ಪ್ರೊಟೋಕಾಲ್ ಮಧ್ಯೆ ನಡೆಯುತ್ತಿದೆ.

ಮಧ್ಯಪ್ರದೇಶದ ಜೋಡಿಯೊಂದು ಸಂಪೂರ್ಣ ಪಿಪಿಇ ಕಿಟ್‌ನಲ್ಲಿ ವಿವಾಹವಾಗಿದ್ದಾರೆ. ಪುರೋಹಿತರು ಸೇರಿದಂತೆ ವಧೂ-ವರರೂ ಪಿಪಿಇ ಕಿಟ್ ಧರಿಸಿ ವಿವಾಹದಲ್ಲಿ ಭಾಗಿಯಾಗಿದ್ದಾರೆ. ಜೋಡಿ ಪಿಪಿಇ ಕಿಟ್‌ನಲ್ಲಿಯೇ ಸಪ್ತಪದಿ ತುಳಿದದ್ದು ವಿಶೇಷ.

"

ಹೆಚ್ಚಿದ ಕೊರೋನಾ: ಭಾರತಕ್ಕೆ ಅಮೆರಿಕದಿಂದ ತುರ್ತು ಸ್ಟ್ರೈಕ್ ಟೀಮ್

ಮಧ್ಯಪ್ರದೇಶದ ರತ್ನಂ ಜೋಡಿ ಪಿಪಿಇ ಕಿಟ್‌ಗಳನ್ನು ಧರಿಸಿ ವಿವಾಹವಾದವರು. ಪಿಪಿಇ ಕಿಟ್‌ಗಳಲ್ಲಿ ದಂಪತಿ ಮತ್ತು ಇತರ ಮೂವರು ಇದ್ದರು. ನಾವು ಮದುವೆಯನ್ನು ನಿಲ್ಲಿಸಲು ಇಲ್ಲಿಗೆ ಬಂದಿದ್ದೆವು. ಆದರೆ ಹಿರಿಯ ಅಧಿಕಾರಿಗಳ ಕೋರಿಕೆ ಮತ್ತು ಮಾರ್ಗದರ್ಶನದ ಮೇರೆಗೆ ವಿವಾಹಕ್ಕೆ ಅನುಮತಿಸಲಾಯಿತು ಎಂದು ರತ್ನಂನ ತಹಶೀಲ್ದಾರ್ ನವೀನ್ ಗರ್ಗ್ ಹೇಳಿದ್ದಾರೆ.

Scroll to load tweet…