Asianet Suvarna News Asianet Suvarna News

ಮಗಳನ್ನೇ ಮದುವೆ ಆದ ತಂದೆ? ವೈರಲ್ ವಿಡಿಯೋ ಹಿಂದಿನ ಅಸಲಿ ಕಥೆ!

ವ್ಯಕ್ತಿಯೋರ್ವ ಮಗಳನ್ನೇ ಮದುವೆ ಆಗಿದ್ದಾನೆ ಎಂಬ ಶೀರ್ಷಿಕೆಯಲ್ಲಿ ವಿಡಿಯೋ ವೈರಲ್ ಆಗಿದೆ. ನಾನು ಒಂಟಿಯಾಗಿ ಜೀವನ  ನಡೆಸಲು ಆಗದ ಕಾರಣ ಮಗಳನ್ನು ಮದುವೆಯಾಗಿದ್ದಾನೆ ಎಂದು ವ್ಯಕ್ತಿ ಹೇಳಿದ್ದಾನೆ.

father married his daughter in uttar pradesh  video gone viral mrq
Author
First Published Aug 17, 2024, 5:50 PM IST | Last Updated Aug 17, 2024, 5:50 PM IST

ಲಕ್ನೋ: ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವ ತನ್ನ ಮಗಳನ್ನೇ ಮದುವೆಯಾಗುವ ಮೂಲಕ ಅಪ್ಪ-ಮಗಳ  ಬಾಂಧವ್ಯಕ್ಕೆ ಕಳಂಕ ತಂದಿಟ್ಟಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಹಾಗೂ ಅದಕ್ಕೆ ಸಂಬಂಧಿಸಿದ ಶಾಸ್ತ್ರಗಳ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಆದ್ರೆ ಈಗ ಹಿಂದೆಂದೂ ಕಾಣದ ವಿಚಿತ್ರ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಮಗಳನ್ನೇ ಮದುವೆಯಾದ ತಂದೆಗೆ  ನೆಟ್ಟಿಗರು ಕ್ಯಾಕರಿಸಿ ಥೂ ಎಂದು ಉಗುಳುತ್ತಿದ್ದಾರೆ. ಮಗಳನ್ನೇ ಯಾಕೆ ಮದುವೆಯಾದ ಎಂಬುದಕ್ಕೆ ಆ ವ್ಯಕ್ತಿ  ಸ್ಪಷ್ಟನೆಯನ್ನು ನೀಡಿದ್ದಾನೆ. 

ಈ ವಿಚಿತ್ರ ಮದುವೆ ಉತ್ತರ ಪ್ರದೇಶದ ಕುಗ್ರಾಮದಲ್ಲಿ ನಡೆದಿದೆ. ಮಗಳನ್ನೇ ಮದುವೆಯಾದ ವ್ಯಕ್ತಿಯ ಹೆಸರು ಪಂಕಜ್ ತಿವಾರಿ ಎಂದು ಗುರುತಿಸಲಾಗಿದೆ. ಮದುವೆ ಹಿಂದಿನ ಕಾರಣ ಕೇಳಿದ್ರೆ ನಿಮ್ಮ ರಕ್ತ ಕುದಿಯುತ್ತದೆ. ಮದುವೆಯಾಗಿದ್ದು ಯಾಕೆ ಎಂದು ಗ್ರಾಮಸ್ಥರು ಪಂಕಜ್ ತಿವಾರಿಯನ್ನು ಪ್ರಶ್ನೆ ಮಾಡಿದ್ದಾರೆ. ನನ್ನ ಮುಂದೆ ಬೇರೆ ಯಾವುದೇ ದಾರಿ ಇರಲಿಲ್ಲ. ಹಾಗಾಗಿ ಮದುವೆಯಾದೆ ಎಂದು ಪಂಕಜ್ ತಿವಾರಿ ಹೇಳಿಕೊಂಡಿದ್ದಾನೆ. 

ನನ್ನ ಜೀವನದಲ್ಲಿ ಮಗಳನ್ನು ಬಿಟ್ಟರೆ ಬೇರೆ ಯಾರೂ  ಇಲ್ಲ. ಒಂದು ವೇಳೆ ಆಕೆಗೆ ಮದುವೆ ಮಾಡಿದ್ರೆ ಮಗಳು ಬೇರೆಯವರ ಮನೆಗೆ ಹೋಗಬೇಕಾಗುತ್ತದೆ. ಹಾಗಾದ್ರೆ  ನಾನು ಒಂಟಿಯಾಗುತ್ತಿದ್ದೆ. ಮಗಳನ್ನು ಬೇರೆಯವರ ಮನೆಗೆ ಕಳುಹಿಸಲು ನನಗೆ ಇಷ್ಟವಿರಲಿಲ್ಲ. ನನಗೆ ಒಂಟಿಯಾಗಿ ಬದುಕಲು ಇಷ್ಟವಿರಲಿಲ್ಲ. ಮಗಳ ಜೊತೆಯಲ್ಲಿಯೇ ಇರಬೇಕೆಂಬ ಉದ್ದೇಶದಿಂದ  ಮದುವೆಯಾದೆ ಎಂದು ಪಂಕಜ್ ತಿವಾರಿ ಹೇಳಿಕೊಂಡಿದ್ದಾನೆ.

ಪಂಕಜ್ ತಿವಾರಿಯ ಮದುವೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಕ್ಷಿಪ್ರವಾಗಿ ಶೇರ್ ಆಗುತ್ತಿದೆ. ನೆಟ್ಟಿಗರು ಸಹ ಕಮೆಂಟ್‌ನಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಇದೊಂದು ನಾಚಿಕೆಗೇಡಿಯ ಕೆಲಸವಾಗಿದ್ದು, ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿ ಆತನ ಮಗಳನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಇಂತಹ ಘಟನೆಗಳು ತಂದೆ-ಮಗಳ ಪವಿತ್ರವಾದ  ಬಂಧನಕ್ಕೆ ಕಳಂಕ ಉಂಟು ಮಾಡುತ್ತವೆ. ಕೆಲವರು ಪಂಕಜ್ ತಿವಾರಿಯ ಬಂಧನಕ್ಕೆ ಆಗ್ರಹಿಸಿ ಕಮೆಂಟ್ ಮಾಡಿದ್ದಾರೆ.  

ಇನ್ನು ಕೆಲವರು ಇದೊಂದು ನಕಲಿ ವಿಡಿಯೋ ಎಂದು ಹೇಳುತ್ತಿದ್ದಾರೆ. ಅಶ್ವಿನಿ ಪಾಂಡೆ ಎಂಬವರು ತಮಾಷೆಗಾಗಿ ಈ ರೀತಿ ವಿಡಿಯೋ ಮಾಡಿದ್ದಾರೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಶೀರ್ಷಿಕೆ ಬದಲಿಸಿ ವಿಡಿಯೋ ಶೇರ್ ಮಾಡಲಾಗುತ್ತಿದೆ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

Latest Videos
Follow Us:
Download App:
  • android
  • ios