ಭೋಪಾಲ್[ಡಿ.05]: ರಸ್ತೆ ಅಪಘಾತದಲ್ಲಿ ತನ್ನ ಮಗನ ರೀತಿ ಇತರ ಯುವಕರು ತಮ್ಮ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವುದು ಬೇಡ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್‌ ವಿತರಣೆ ಮಾಡಿದ ಮಾನವೀಯ ಘಟನೆ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಇತ್ತೀಚೆಗಷ್ಟೇ ರಸ್ತೆ ಅಪಘಾತದಲ್ಲಿ ಹೆಲ್ಮೆಟ್‌ ಇಲ್ಲದ್ದಕ್ಕೆ ವಿಧಿವಶರಾದ ವಿಭಾಂಶು ದೀಕ್ಷಿತ್‌ ಎಂಬುವರ ತಂದೆಯೇ ಬುಧವಾರ ಹೆಲ್ಮೆಟ್‌ ಇಲ್ಲದೆ ಸವಾರಿ ಮಾಡುತ್ತಿದ್ದ 51 ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್‌ ವಿತರಣೆ ಮಾಡಿದವರು.

ಮಗನ 13ನೇ ದಿನದ ವೈಕುಂಠ ಸಮಾರಾಧನೆ ಪ್ರಯುಕ್ತ ಈ ಪುಣ್ಯ ಕಾರ್ಯವನ್ನು ಮಾಡಿದ್ದಾರೆ. ನ.20ರಂದು ವಿಭಾಂಶು ದೀಕ್ಷಿತ್‌ ಅವರು ಇಲ್ಲಿನ ಸರ್ರಾ ರಸ್ತೆಯಲ್ಲಿ ಹೆಲ್ಮೆಟ್‌ ಇಲ್ಲದೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಅನಿರೀಕ್ಷಿತವಾಗಿ ರಸ್ತೆಗೆ ಅಡ್ಡ ಬಂದ ಎಮ್ಮೆಯೊಂದಕ್ಕೆ ಗುದ್ದಿದ್ದರು. ಈ ವೇಳೆ ರಭಸವಾಗಿ ರಸ್ತೆಗೆ ಬಿದ್ದಿದ್ದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ದೀಕ್ಷಿತ್‌ ಸಾವನ್ನಪ್ಪಿದ್ದ.