'ದೇವಿ ಯಾವ ರೂಪದಲ್ಲಿ ಬೇಕಾದರೂ ಬರಬಹುದು..' ಇಂಡಿಗೋ ಗಗನಸಖಿ ಸಹಾಯ ಮೆಚ್ಚಿದ ಐಪಿಎಸ್ ಅಧಿಕಾರಿ!
ನವರಾತ್ರಿ ಸಮಯದಲ್ಲಿ ಉಪವಾಸ ವ್ರತದಲ್ಲಿದ್ದ ಐಪಿಎಸ್ ಅಧಿಕಾರಿಯೊಬ್ಬರಿಗೆ ವಿಮಾನದಲ್ಲಿ ಗಗನಸಖಿಯೊಬ್ಬರು ಮಾಡಿದ ಸಹಾಯವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರೊಂದಿಗೆ ದೇವಿ ಯಾವ ರೂಪದಲ್ಲಿ ಬೇಕಾದರೂ ಬರಬಹುದು ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿತ್ತು ಎಂದು ಬರೆದುಕೊಂಡಿದ್ದಾರೆ.

ನವದೆಹಲಿ (ಅ.19): ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ, ಇತ್ತೀಚೆಗೆ ಇಂಡಿಯೋ ವಿಮಾನದಲ್ಲಿ ಆಗಿರುವಂಥ ಸಹಿಯಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಈ ಕುರಿತಾಗಿ ಪೋಸ್ಟ್ ಮಾಡಿರು ಅರುಣ್ ಬೋತ್ರಾ, ನವರಾತ್ರಿಯ ಸಮಯವಾಗಿರುವ ಕಾರಣ ವ್ರತದಲ್ಲಿದ್ದೆ. ವಿಮಾನ ಪ್ರಯಾಣದ ವೇಳೆ ಈ ವಿಚಾರ ವಿಮಾನದ ಗಗನಸಖಿಯರಿಗೆ ತಿಳಿದಾಗ ಅವರು ವ್ರತ ಸ್ನೇಹಿ ಸ್ನ್ಯಾಕ್‌ಗಳು ನೀಡಿದ್ದಲ್ಲದೆ, ಅದಕ್ಕೆ ಯಾವುದೇ ರೀತಿಯ ಚಾರ್ಜ್ ಮಾಡದೇ ಇರೋದನ್ನು ಹಂಚಿಕೊಂಡಿದ್ದಾರೆ. 1996ರ ಒಡಿಶಾ ಕೆಡರ್‌ನ ಐಪಿಎಸ್ ಅಧಿಕಾರಿಯಾಗಿರುವ ಅರುಣ್ ಬೋತ್ರಾ, ಇಂಡಿಗೋ ವಿಮಾನದ ಗಗನಸಖಿ ಪೂರ್ವಿ ಅವರ ಉದಾರತೆಗೆ ಥ್ಯಾಂಕ್ಸ್ ಎಂದಿದ್ದಾರೆ. ವಿಮಾನದಲ್ಲಿ ತಮಗೆ ಆಹಾರ ನೀಡಿದ್ದಾಗ, ನವರಾತ್ರಿ ವ್ರತದ ಕಾರಣಕ್ಕೆ ಬೇಡ ಎಂದು ಹೇಳಿದ್ದೆ ಎಂದು ಅರುಣ್ ಬೋತ್ರಾ ತಿಳಿಸಿದ್ದಾರೆ. ನಾನು ಆಹಾರ ಬೇಡ ಎಂದು ಹೇಳಿದ್ದಕ್ಕೆ ನೀಡಿದ ಕಾರಣವನ್ನು ತಿಳಿದ ಪೂರ್ವಿ, ಕೆಲ ಸಮಯದ ಬಳಿಕ ಕೆಲವು ಸ್ನ್ಯಾಕ್‌ಗಳೊಂದಿಗೆ ನನ್ನ ಬಳಿ ಬಂದಿದ್ದರು. ಅವರು ನೀಡಿದ್ದ ಆಹಾರದಲ್ಲಿ ನವರಾತ್ರಿ ವ್ರತದ ಸಮಯದಲ್ಲೂ ತಿನ್ನಬಹುದಾದ ಸಾಬಕ್ಕಿಯ ಚಿಪ್ಸ್, ಎಳ್ಳಿನ ಚಿಕ್ಕಿಯನ್ನು ನನಗೆ ನೀಡಿದರು. ಅದು ಮಾತ್ರವಲ್ಲದೆ, ಇದಕ್ಕೆ ಹಣವನ್ನು ಪಡೆಯಲು ಕೂಡ ಅವರು ನಿರಾಕರಿಸಿದರು. ಅದಲ್ಲದೆ, ತಾವೂ ಕೂಡ ನವರಾತ್ರಿ ವ್ರತವನ್ನು ಮಾಡುತ್ತಿರುವುದಾಗಿಯೂ ಈ ವೇಳೆ ತಿಳಿಸಿದರು ಎಂದು ಅರುಣ್ ತಿಳಿಸಿದ್ದಾರೆ.
ಈ ವೇಳೆ ಪೂರ್ವಿ ಒಂದು ನೋಟ್ ಕೂಡ ಕಳಿಸಿದ್ದರು. 'ಇಂದು ವಿಮಾನದಲ್ಲಿ ನೀವು ನಮ್ಮೊಂದಿಗೆ ಇರುವುದು ಸಂತೋಷ ತಂದಿದೆ.ನವದುರ್ಗೆಯರು ನಿಮಗೆ ಸಮೃದ್ಧಿಯನ್ನು ಅನುಗ್ರಹಿಸಲಿ. ” ಎಂದು ಅದರಲ್ಲಿ ಬರೆದಿದ್ದರು.
ಗಗನಸಖಿಯ ಸಿಹಿಯಾದ ವರ್ತನೆಯಿಂದ ಖುಷಿಯಾಗಿರುವ ಅರುಣ್ ಬೋತ್ರಾ, ಗಗನಸಖಿ ನೀಡಿದ ಸ್ನ್ಯಾಕ್‌ನ ಫೋಟೋ ಹಾಗೂ ಅವರು ಕಳಿಸಿದ ನೋಟ್‌ನ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ದೇವಿಯು ಯಾವ ರೂಪದಲ್ಲಿ ಬೇಕಾದರೂ ನಮ್ಮನ್ನು ಆರೈಕೆ ಮಾಡುತ್ತಾಳೆ ಎನ್ನುವುದಕ್ಕೆ ಇದೇ ಸಾಕ್ಷಿ. ಇಂದು ಇಂಡಿಯೋ ವಿಮಾನದ ಗಗನಸಖಿ ಪೂರ್ವಿ ಅವರ ರೂಪದಲ್ಲಿ ನನಗೆ ಎದುರಾದರು. ನವರಾತ್ರಿ ವ್ರತದ ಕಾರಣದಿಂದಾಗಿ ಇಂದು ಅವರು ನೀಡಿದ್ದ ಆಹಾರವನ್ನು ನಾನು ಸ್ವೀಕರಿಸಿರಲಿಲ್ಲ. ಇದನ್ನು ತಿಳಿದ ಆಕೆ, ನವರಾತ್ರಿಯ ವ್ರತದ ಸಮಯದಲ್ಲೂ ತಿನ್ನಬಹುದಾದ ಸಾಬಕ್ಕಿಯ ಚಿಪ್ಸ್, ಎಳ್ಳಿನ ಚಿಕ್ಕಿ ಹಾಗೂ ಚಹಾವನ್ನು ನನಗೆ ನೀಡಿದರು. ಇದಕ್ಕಾಗಿ ಎಷ್ಟು ಹಣ ನೀಡಬೇಕು ಎಂದು ನಾನು ಅವರಿಗೆ ಕೇಳಿದಾಗ, ಹಣ ಬೇಡ ಸರ್, ನಾನೂ ಕೂಡ ಉಪವಾಸ ಮಾಡುತ್ತಿದ್ದೇನೆ' ಎಂದು ಹೇಳಿದರು ಎಂದು ಅರುಣ್ ಬರೆದುಕೊಂಡಿದ್ದಾರೆ.
“ಪೂರ್ವಿ ಅವರ ಈ ವರ್ತನೆಯು ನಾವು ಸಾಕಾರಗೊಳಿಸಲು ಪ್ರಯತ್ನಿಸುವ ಕಾಳಜಿ ಮತ್ತು ತಿಳುವಳಿಕೆಯ ಮನೋಭಾವವನ್ನು ಉದಾಹರಿಸುತ್ತದೆ. ನಿಮ್ಮ ಮಾತುಗಳು ನಾವು ಬಹುವಾಗಿ ಮೆಚ್ಚುತ್ತೇವೆ ಮತ್ತು ಪೂರ್ವಿಯೊಂದಿಗೆ ಇದನ್ನು ಹಂಚಿಕೊಳ್ಳಲಿದ್ದೇವೆ. ನಿಮ್ಮ ಮುಂದಿನ ಪ್ರಯಾಣದಲ್ಲಿ ಮತ್ತೊಮ್ಮೆ ನಿಮಗೆ ಸೇವೆ ಸಲ್ಲಿಸಲು ನಾವು ಎದುರು ನೋಡುತ್ತಿದ್ದೇವೆ. ನವರಾತ್ರಿಯ ಶುಭಾಶಯಗಳು" ಎಂದು ಇಂಡಿಗೋ ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿದೆ.
ಹಂದಿ ಮೆದುಳು ತಿನ್ನಿ.. ಶಿಕ್ಷಕನ ಈ ಮಾತಿಗೆ ಶಿಕ್ಷೆ ಆಗದೇ ಇರುತ್ತಾ?
ಇನ್ನು ನೆಟ್ಟಿಗರು ಕೂಡ ಇಂಡಿಗೋ ವಿಮಾನದ ಗಗನಸಖಿಯ ವರ್ತನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ನಾಗ್ಪುರದಿಂದ ದೆಹಲಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುವಾಗ ಇಂಥದ್ದೇ ಅನುಭವನ ನನಗೆ ಆಗಿತ್ತು ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ. ಮಾನವೀಯತೆ ಅನ್ನೋದು ವ್ಯಕ್ತಿಯ ಮನಸ್ಸಿನಲ್ಲಿರುತ್ತದೆ. ಇದು ಯಾವುದೇ ಸಂಸ್ಥೆ ಕಲಿಸಲು ಸಾಧ್ಯವಿಲ್ಲ ಎಂದು ಇನ್ನೊಬ್ಬರು ಬರೆದಿದ್ದಾರೆ.
ಫೇಸ್‌ಬುಕ್ ಬಳಕೆದಾರರಿಗೆ ಗುಡ್ ನ್ಯೂಸ್, ವ್ಯಾಟ್ಸ್ಆ್ಯಪ್ ರೀತಿಯಲ್ಲೇ ಬ್ರಾಡ್‌ಕಾಸ್ಟ್ ಚಾನೆಲ್!