ನವದೆಹಲಿ(ಡಿ.17): ರೈತರ ಪ್ರತಿಭಟನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ರೈತರ ಪ್ರತಿಭಟನೆಯನ್ನು ನಿಲ್ಲಿಸಲು ಹೇಳುವುದಿಲ್ಲ, ರೈತರ ಪ್ರತಿಭಟನೆಯ ಹಕ್ಕು ಕಸಿದುಕೊಳ್ಳುವುದೂ ಸರಿಯಲ್ಲ ಎಂದಿದೆ. 

ಕೃಷಿ ಕಾಯ್ದೆ ವಿರೋಧಿಸಿ ಅನ್ನದಾತನ ಪ್ರತಿಭಟನೆ, ಕಾಂಗ್ರೆಸ್ ಬೆಂಬಲದ ಹಿಂದೆ 'ಹಗರಣ'ದ ಘಾಟು!

ವಿಚಾರಣೆ ನಡೆಸುತ್ತಿದ್ದ ಚೀಫಗ್ ಜಸ್ಟೀಸ್ ಎಸ್‌. ಎ. ಬೋಬ್ಡೆ ಈ ಬಗ್ಗೆ ತೀರ್ಪು ನೀಡುತ್ತಾ 'ರೈತರು ತಮ್ಮ ಪ್ರತಿಭಟನೆಯನ್ನೂ ನಡೆಸಿ, ಜನರ ನಿತ್ಯದ ಬದುಕಿಗೆ ಯಾವುದೇ ಸಮಸ್ಯೆಯಾಗದಂತೆ ನಾವು ಎಚ್ಚರವಹಿಸಬೇಕು. ನಾವು ರೈತರ ಸ್ಥಿತಿ ಅರಿತಿದ್ದೇಬವೆ, ನಮಗೆ ಅವರ ಬಗ್ಗೆ ಸಹಾನುಭೂತಿ ಇದೆ. ಆದರೆ ಈ ಬದಲಾಯಿಸುವ ಪರಿಯನ್ನು ಬದಲಾಯಿಸಬೇಕಿದೆ, ಈ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ' ಎಂದಿದ್ದಾರೆ. 

ಇದೇ ವೇಳೆ ರೈತರೊಂದಿಗೆ ಮಾತುಕತೆ ನಡೆಯುವವರೆಗೂ ಕೃಷಿ ಕಾನೂನನ್ನು ತಡೆಹಿಡಿಯಲು ಸಿದ್ಧವಿದ್ದೀರಾ ಎಂದು ಕೇಂದ್ರದ ಬಳಿ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹೀಗಿರುವಾಗ ಸರ್ಕಾರದ ಬಳಿ ಈ ಬಗ್ಗೆ ನಿರ್ದೇಶನ ಪಡೆಯುವುದಾಗಿ ಅಟಾರ್ನಿ ಜನರಲ್ ತಿಳಿಸಿದ್ದಾರೆ.

ರೈತಪರ ಸರ್ಕಾರ, ಕೃಷಿ ಕಾಯ್ದೆಯೂ ರೈತ ಸ್ನೇಹಿ; ಅನ್ನದಾತರಿಗೆ ಬೇಡ ಭಯ

ಒಟ್ಟಾರೆಯಾಗಿ ರೈತರ ಪ್ರತಿಭಟನೆಯನ್ನು ಮುಂದುವರೆಸಲು ಗ್ರೀನ್ ಸಿಗ್ನಲ್ ನೀಡಿರುವ ಸರ್ಕಾರ, ರೈತರು ಪ್ರತಿಭಟನೆ ವೇಳೆ ರಸ್ತೆ ಬಂದ್ ನಡೆಸುತ್ತಿರುವ ಕ್ರಮವನ್ನು ಖಂಡಿಸಿದೆ.