ಕರ್ನಾಟಕ ರೈತ ಮುಖಂಡ ಕುರುಬೂರು ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಪಂಜಾಬ್‌ನಲ್ಲಿ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಗಾಯಗೊಂಡಿರುವ ಕುರುಬೂರು ಶಾಂತಕುಮಾರ್ ಅವರನ್ನು ಆಸ್ಪತ್ರೆ ದಾಖಲಿಸಲಾಗಿದೆ. 

ಪಟಿಯಾಲ(ಫೆ.14) ಕರ್ನಾಟಕದ ರೈತ ಮುಖಂಡನಾಗಿ ಹಲವು ರೈತ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ನಾಯಕ ಕುರುಬೂರು ಶಾಂತಕುಮಾರ್ ಸಂಚರಿಸುತ್ತಿದ್ದ ಕಾರು ಅಪಘಾಕ್ಕೀಡಾಗಿದೆ. ಪಂಜಾಬ್‌ನಲ್ಲಿ ಆಯೋಜಿಸಿದ್ದ ರೈತ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಹಲವು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಇದರ ಪರಿಣಾಮ ಕುರುಬೂರು ಶಾಂತಕುಮಾರ್ ಗಾಯಗೊಂಡಿದ್ದಾರೆ. ತಕ್ಷಣವೇ ಕುರುಬೂರು ಶಾಂತಕುಮಾರ್ ಅವರನ್ನು ಪಂಜಾಬ್‌ನ ಪಟಿಯಾಲದ ರಾಜೇಂದ್ರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರ್ನಾಟಕ ರಾಜ್ಯ ಸಂಯುಕ್ತ ಕಿಸಾನ್ ಮೋರ್ಚಾದ ಸಂಚಾಲಕ ಕುರುಬೂರು ಶಾಂತಕುಮಾರ್ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ(MSP) ಜಾರಿ ಸಂಬಂಧ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ಪಂಜಾಬ್‌ಗೆ ತೆರಳಿದ್ದರು. ದೆಹಲಿಯಿಂದ ಪಂಜಾಬ್ ಕಡೆ ಪ್ರಯಾಣಿಸುವಾಗ ಈ ಘಟನೆ ನಡೆದಿದೆ. ಹಲವು ಕಾರುಗಳ ನಡುವೆ ಅಪಘಾತವಾಗಿರುವ ಕಾರಣ ಶಾಂತಕಮಾರ್ ಅವರ ಎಡಗೈ, ಎಡ ಕಾಲಿಗೆ ಗಾಯವಾಗಿದೆ. ಜೊತೆಗೆ ಸ್ಪೈನಲ್ ಕಾರ್ಡ್ ಕೂಡ ಗಾಯಗೊಂಡಿದೆ.

ದುಬೈ ಬಳಿಕ ಪೋರ್ಚುಗಲ್ ರೇಸ್‌ನಲ್ಲಿ ಅಜಿತ್ ಕಾರು ಅಪಘಾತ, ಆತಂಕಗೊಂಡ ಫ್ಯಾನ್ಸ್

ರಾಜ್ಯದಿಂದ ದೆಹಲಿಗೆ ತೆರಳಿದ್ದ ಶಾಂತಕುಮಾರ್, ಅಲ್ಲಿಂದ ಪಂಜಾಬ್ ಕಡೆ ಪ್ರಯಾಣಿಸುತ್ತಿದ್ದಾಗ ಅಪಘಾತ ನಡೆದಿದೆ. ಎಸ್ಕಾರ್ಟ್ ವಾಹನ ಜೊತೆ ತೆರಳುತ್ತಿದ್ದ ವೇಳೆ ಮುಂದಿನ ವಾಹನ ಅಪಘಾತಕ್ಕೀಡಾಗಿದೆ. ಹೀಗಾಗಿ ಶಾಂತಕುಮಾರ್ ಪ್ರಯಾಣಿಸುತ್ತಿದ್ದ ಕಾರು ಚಾಲಕ ತಕ್ಷಣ ಬ್ರೇಕ್ ಹಾಕಿದ್ದಾನೆ. ಇದರ ಪರಿಣಾಣ ಹಿಂದಿನಿಂದ ಬರುತ್ತಿದ್ದ 5ಕ್ಕೂ ಹೆಚ್ಚು ಕಾರುಗಳು ಏಕಕಾಲಕ್ಕೆ ಸರಣಿ ಅಪಘಾತಕ್ಕೀಡಾಗಿದೆ. ಅಪಘಾತದ ಬೆನ್ನಲ್ಲೇ ಇತರ ರೈತ ನಾಯಕರು, ಸಿಬ್ಬಂದಿಗಳು ಗಾಯಗೊಂಡವನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಈ ಪೈಕಿ ಕುರುಬೂರು ಶಾಂತಕುಮಾರ್ ಕೂಡ ಗಾಯಗೊಂಡಿದ್ದಾರೆ. ಸದ್ಯ ರಾಜೇಂದ್ರ ಆಸ್ಪತ್ರೆಯಲ್ಲಿ ಕುರುಬೂರು ಶಾಂತಕುಮಾರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.