ಗಗನಚುಂಬಿ ಕಟ್ಟಡದ ಅಂಚಿನಲ್ಲಿ ನಿಂತು ವ್ಯಾಯಾಮ ಭಯಾನಕ ದೃಶ್ಯ ಸೆರೆ ಹಿಡಿದ ಸಮೀಪದ ಕಟ್ಟಡದವರು ಹರ್ಯಾಣದ ಫರಿದಾಬಾದ್‌ನಲ್ಲಿ ಘಟನೆ

ವ್ಯಾಯಾಮ ಎಂದರೆ ಮನೆ ಒಳಗೆ ಸುರಕ್ಷಿತವಾದ ಪ್ರದೇಶದಲ್ಲಿ ಅಥವಾ ಜಿಮ್‌ನಲ್ಲಿ ಅಥವಾ ಪಾರ್ಕ್‌ಗಳಲ್ಲಿ ವ್ಯಾಯಾಮ ಮಾಡುವುದು ಸಾಮಾನ್ಯ .ಆದರೆ ಇಲ್ಲೊಬ್ಬ ವ್ಯಕ್ತಿ ಬಹುಮಹಡಿ ಕಟ್ಟಡದ 12ನೇ ಮಹಡಿಯ ಬಾಲ್ಕನಿಯಲ್ಲೂ ಅಲ್ಲ ಅದರ ಹೊರಭಾಗದಲ್ಲಿ ವ್ಯಾಯಾಮ ಮಾಡುತ್ತಿದ್ದಾನೆ. ಸ್ವಲ್ಪ ಕಾಲು ಜಾರಿದರು ಮೂಳೆಯೂ ಸಿಗದಷ್ಟು ಎತ್ತರದಿಂದ ಆತ ಕೆಳಗೆ ಬೀಳಲಿದ್ದು, ಅಂತಹ ಪ್ರದೇಶದಲ್ಲಿ ವ್ಯಕ್ತಿಯ ದುಸ್ಸಾಹಸ ನೋಡುಗರ ಎದೆ ಝಲ್ಲೆನಿಸುವಂತೆ ಮಾಡುತ್ತಿದೆ. ಬಾಲ್ಕನಿಯ ಕಬ್ಬಿಣದ ರಾಡ್‌ ಕೈಯಲ್ಲಿ ಹಿಡಿದು ನೇತಾಡಿಕೊಂಡು ಈತ ವ್ಯಾಯಾಮ ಮಾಡುತ್ತಿದ್ದಾನೆ. ಈ ಕಟ್ಟಡದ ಎದುರಿನ ಕಟ್ಟಡದಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಈ ಸಾಹಸ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

ಸ್ಥಳೀಯ ಮಾಧ್ಯಮ ಅಮರ್ ಉಜಾಲಾದ ಪ್ರಕಾರ ಈ ಘಟನೆಯೂ ಗ್ರೇಟರ್ ಫರಿದಾಬಾದ್‌ನ ಸೆಕ್ಟರ್ -82, ಗ್ರಾಂಡೆಯುರಾ ಸೊಸೈಟಿಯ ಇ-ಬ್ಲಾಕ್‌ನಲ್ಲಿ ನಡೆದಿದೆ.ವ್ಯಕ್ತಿ ಕಟ್ಟಡದ 12ನೇ ಮಹಡಿಯ ಬಾಲ್ಕನಿಯ ಸರಳನ್ನು ಹಿಡಿದುಕೊಂಡು ವ್ಯಾಯಾಮ ಮಾಡುತ್ತಿರುವುದನ್ನು ಈ ವೀಡಿಯೊ ತೋರಿಸುತ್ತದೆ. ಎದುರಿನ ಕಟ್ಟಡದಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ಈ ಅಪಾಯಕಾರಿ ಸಾಹಸವನ್ನು ಸೆರೆ ಹಿಡಿದಿದ್ದಾರೆ.

Scroll to load tweet…

ಈ ಬಗ್ಗೆ ಈ ಬಹುಮಹಡಿ ಅಪಾರ್ಟ್‌ಮೆಂಟ್‌ ಸೊಸೈಟಿಯ ಅಧ್ಯಕ್ಷ ದೀಪಕ್ ಮಲಿಕ್ ಮಾತನಾಡಿ, ಹೀಗೆ ಸಾಹಸ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿ 56 ವರ್ಷದವನಾಗಿದ್ದು, ಮಾನಸಿಕವಾಗಿ ನೊಂದಿದ್ದಾನೆ. ಅವರಿಗೆ 28 ​​ವರ್ಷದ ಮಗನೂ ಇದ್ದಾನೆ. ಘಟನೆಯ ನಂತರ, ಆರ್‌ಡಬ್ಲ್ಯೂಎ (RWA) ಅಧಿಕಾರಿಗಳು ಆತನನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಅವರ ಕುಟುಂಬ ಸದಸ್ಯರಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

ಸೀರೆ ಕೆಳಗೆ ಬಿತ್ತೆಂದು 10ನೇ ಮಹಡಿಯಿಂದ ಮಗನನ್ನು ಬೆಡ್‌ಶಿಟ್‌ ಕಟ್ಟಿ ಕೆಳಗಿಳಿಸಿದ ತಾಯಿ

ಫರಿದಾಬಾದ್‌ನಲ್ಲೇ ಕೆಲ ದಿನಗಳ ಹಿಂದೆ ತಾಯಿಯೊಬ್ಬರು ಬಾಲ್ಕನಿಯಲ್ಲಿ ಒಣ ಹಾಕಿದ್ದ ತಮ್ಮ ಸೀರೆ ಕೆಳಗಿನ ಬಾಲ್ಕನಿಗೆ ಬಿತ್ತು ಎಂದು ತಮ್ಮ ಸಣ್ಣ ಪ್ರಾಯದ ಮಗನನ್ನು ಬಾಲ್ಕನಿಯ ಸರಳಿಗೆ ಕಟ್ಟಿ ಕೆಳಗೆ ಇಳಿಸಿ ಸೀರೆಯನ್ನು ತೆಗೆದುಕೊಂಡು ಬಂದಿದ್ದರು. ಈ ಕಟ್ಟವೂ ಕೂಡ ಬಹುಮಹಡಿಯ ಗಗನಚುಂಬಿ ಕಟ್ಟಡವಾಗಿತ್ತು. ಈ ಘಟನೆಯನ್ನು ಕೂಡ ಸಮೀಪದ ಕಟ್ಟಡದಲ್ಲಿದ್ದವರು ಚಿತ್ರೀಕರಿಸಿದ್ದರು. 

Bengaluru: ಅಪಾರ್ಟ್‌ಮೆಂಟ್‌ನ 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು

ಬಹುಮಹಡಿ ಕಟ್ಟಡಗಳ ಬಾಲ್ಕನಿಗಳಿಂದ ಮಕ್ಕಳು ಅಚಾನಕ್‌ ಆಗಿ ಬೀಳುವ ಎಷ್ಟು ಘಟನೆಗಳನ್ನು ನೀವು ಈ ಹಿಂದೆ ಕೇಳಿರಬಹುದು. ಇಂತಹ ಘಟನೆಗಳ ಬಗ್ಗೆ ಅರಿವಿದ್ದು ಕೂಡ ತಾಯಿಯೊಬ್ಬಳು. ಸೀರೆಯ ಸಲುವಾಗಿ ಹೀಗೆ ತನ್ನ ಕಂದನನ್ನು ದುಸ್ಸಾಹಸಕ್ಕೆ ತಳ್ಳಿರುವುದನ್ನು ನೋಡಿ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹರ್ಯಾಣದ ಫರಿದಾಬಾದ್‌ನಲ್ಲಿ(Faridabad) ಈ ಘಟನೆ ನಡೆದಿತ್ತು.

ಈ ವಿಡಿಯೋದಲ್ಲಿ ಕಾಣಿಸುವಂತೆ ತಾಯಿ, ಮನೆಯಲ್ಲಿದ್ದ ಇನ್ನಿಬರು, ಎಲ್ಲರೂ ಹೆಂಗಸರೇ ಸೇರಿ ಬಾಲ್ಕನಿಯ ರಾಡ್‌ಗೆ ಬೆಡ್‌ಶಿಟ್‌ ಕಟ್ಟಿ ಅದರ ಮೂಲಕ ಅವರ ಮಗ ಕೆಳಗಿನ ಬಾಲ್ಕನಿಗೆ ಇಳಿಯುವಂತೆ ಮಾಡುತ್ತಾರೆ. ಕೆಳಗೆ ಇಳಿದ ಬಾಲಕ ಸೀರೆಯನ್ನು ಎತ್ತಿಕೊಂಡು ವಾಪಸ್‌ ಬೆಡ್‌ಶಿಟ್‌ ನಲ್ಲಿ ನೇತಾಡಿಕೊಂಡು ಮೇಲೆ ಬರುತ್ತಾನೆ. ಮೇಲೆ ಬಂದ ಆತನನ್ನುತಾಯಿ ಹಾಗೂ ಇನ್ನೊಬ್ಬ ಮಹಿಳೆ ಎತ್ತಿ ಬಾಲ್ಕನಿಯೊಳಗೆ ಸೇರಿಸಿಕೊಳ್ಳುತ್ತಾರೆ.